ಬಿ.ಸಿ.ರೋಡ್ ಸಾಧನಾ ರೆಸಿಡೆನ್ಸಿಯಲ್ಲಿ ಸಿಲ್ವರ್ ಸೀ ಫುಡ್ ಫ್ಯಾಮಿಲಿ ರೆಸ್ಟೋರೆಂಟ್ ಅನ್ನು ನಾಡಿನ ಹಿರಿಯ ಸಾಹಿತಿ ಡಾ. ಲಕ್ಷ್ಮೀ ನಾರಾಯಣ ಆಳ್ವ ಅವರು ಶುಭ ಹಾರೈಸಿ ಉದ್ಘಾಟಿಸಿದರು.
ಸಂಸ್ಥೆಯ ಮಾಲಕರಾದ ವಿಶ್ವನಾಥ್ ಬಂಟ್ವಾಳ ಅವರ ಮಾತಾಪಿತರಾದ ಧರ್ಮಿಣಿ ಬಿ., ಸಂಜೀವ ಬಂಗೇರ ಅವರು ದೀಪ ಬೆಳಗಿಸಿ ಆಶೀರ್ವದಿಸಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಉಡುಪಿ- ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಜಯಾನಂದ ದೇವಾಡಿಗ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ, ಹಿರಿಯ ನ್ಯಾಯವಾದಿ ಎ. ಅಶ್ವಿನಿ ಕುಮಾರ್ ರೈ, ಸವಿತಾ ಸಹಕಾರಿ ನಿ. ಇದರ ಉಪಾಧ್ಯಕ್ಷ ಸುರೇಶ್ ನಂದೊಟ್ಟು, ನಿರ್ದೇಶಕ ರಾದ ದಿನೇಶ್ ಎಲ್. ಬಂಗೇರಾ, ವಸಂತ್ ಎಂ. ಬೆಳ್ಳೂರು ಉಪಸ್ಥಿತರಿದ್ದರು.
ರೆಸ್ಟೋರೆಂಟ್ ಮಾಲಕರಾದ ವಿಶ್ವನಾಥ್ ಬಂಟ್ವಾಳ, ರೇಖಾ ವಿಶ್ವನಾಥ್, ಧನುಷ್, ಅನುಷ್ ಸಂಯೋಜಿಸಿದರು.
ಕರಾವಳಿ ಮೀನಿನ ಖಾದ್ಯಕ್ಕೆ ವಿಶೇಷತೆ ಹೊಂದಿರುವ ರೆಸ್ಟೋರೆಂಟ್ ಅತ್ಯುತ್ತಮ ಗುಣಮಟ್ಟದ ಫುಡ್ ಐಟಂಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀಡಲಾಗುತ್ತಿದೆ.
ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಫ್ಯಾಮಿಲಿ-ಮಹಿಳೆಯರಿಗೆ ಪ್ರತ್ಯೇಕ ಕ್ಯಾಬಿನ್, ಟೇಸ್ಟಿಂಗ್ ಹಾಗೂ ಸೋಡಾ ಪುಡಿ ರಹಿತ ತಾಜಾ ಫುಡ್ ನೀಡಲಾಗುವುದೆಂದು ಕಿಶೋರ್ ಪ್ರೀತಿ ಸ್ಟುಡಿಯೋ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IFTAAR ORGANISED BY FORMER MINISTER RAMANATHA RAI AT PANEMANGALORE (more…)