ಪ.ಗೋ. ಅಂಕಣ

ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 21: ನೀವೇ ಒಂದು ಸಂಪಾದಕೀಯ ಬರೆದುಕೊಡಿ

.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ .ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆಇದು .ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ.

pa gO cartoon by Harini

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ .ಗೋ, ಅವರ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು .ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (.ರಾಮಚಂದ್ರ). ಲೇಖನಮಾಲೆಯ 20ನೇ ಕಂತು ಇಲ್ಲಿದೆ. ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ. ಇಲ್ಲಿ ವ್ಯಕ್ತವಾದ ವಿಚಾರಗಳೆಲ್ಲವೂ ಲೇಖಕರಿಗೆ ಸಂಬಂಧಿಸಿದ್ದಾಗಿದೆ. ಬಂಟ್ವಾಳನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ.

ಹೆಚ್ಚಿನವರುಕಾರ್ ಸ್ಟೀಟ್ಎಂದೇ ಕರೆಯುವ ರಥಬೀದಿಯ ಕೊನೆ ಭಾಗ. ಹಿಂದ್ ಆರ್ಟ್ ಪ್ರೆಸ್ ನ ಮುರುಕು ಮಾಳಿಗೆ ಕೋಣೆಯಲ್ಲಿ ಕನ್ನಡವಾಣಿ ದೈನಿಕದ ಕಾರ್ಯಾಲಯ ಸ್ಥಾಪನೆಯಾಗಿತ್ತು. ಕಡಿದಾದ ಕಿರುಮೆಟ್ಟಿಲುಗಳನ್ನು ಏರಿದೆ. ಕಾನೂನು ಪದವಿ ಅಭ್ಯಾಸನವಭಾರತದ ಉಪಸಂಪಾದಕತ್ವದ ದ್ವಿಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಹೊರಬಿದ್ದಿದ್ದ ಕೆ.ಪಿ.ಬಿಂದುಸಾರ ಶೆಟ್ಟಿಯವರು ಬರೆಯುತ್ತಾ ಕುಳಿತಿದ್ದುದನ್ನು ನೋಡಿಹಲೋ ದುಂಬಿಎಂದೆ. (ಅವರನ್ನು ದುಂಬಿ ಎನ್ನುವ ಸ್ವಾತಂತ್ರ್ಯವಿದ್ದ ಕೆಲವೇ ಮಂದಿಯಲ್ಲಿ ನಾನೂ ಒಬ್ಬ.)

1970ರ ದಶಕದ ಮಂಗಳೂರಿನ ಕಾರ್ಯನಿರತ ಪತ್ರಕರ್ತರು:
ನವಭಾರತ ಪತ್ರಿಕೆಯ ವರದಿಗಾರ ಶ್ರೀ. ಮಂಜುನಾಥ ಭಟ್ , ಪ್ರಜಾವಾಣಿ ಮಂಗಳೂರು ಪ್ರತಿನಿಧಿ ಶ್ರೀ.ಆರ್.ಪಿ.ಜಗದೀಶ್, ಪಿ. ಟಿ.ಐ ಮಂಗಳೂರು ಪ್ರತಿನಿಧಿ ಶ್ರೀ. ಟಿ.ಪಿ. ಶಂಕರ್, ಸಂಯುಕ್ತ ಕರ್ನಾಟಕ ಮಂಗಳೂರು ಪ್ರತಿನಿಧಿ ಶ್ರೀ. ಪ. ಗೋಪಾಲಕೃಷ್ಣ, “ದಿ.ಹಿಂದೂ” ಮಂಗಳೂರು ಪ್ರತಿನಿಧಿ ಶ್ರೀ.ಯು. ನರಸಿಂಹ ರಾವ್ ,ಉದಯವಾಣಿ ಮಂಗಳೂರು ವರದಿಗಾರ ಶ್ರೀ. ಎ.ವಿ.ಮಯ್ಯರು. ಚಿತ್ರದ ಬಲ ತುದಿಯಲ್ಲಿ ಹೊಸದಿಗಂತ ಪತ್ರಿಕೆಯ ಮಂಗಳೂರು ಪ್ರತಿನಿಧಿ ಶ್ರೀ. ಪಲಿಮಾರು ವಸಂತ ನಾಯಕ್.

ಓಹೋ ! ಈಗಲಾದರೂ ಬಂದಿರಾ ? ನಾವೆಲ್ಲ ನಿಮ್ಮ ಆಸೆ ಬಿಟ್ಟಿದ್ದೆವು.” ಎಂಬ ಸ್ವಾಗತ, ಅವಕಾಶವಂಚಿತನ ಸ್ಥಿತಿಗೆ ನಾನಿನ್ನೂ ಮುಟ್ಟಿಲ್ಲವೆನ್ನುವುದನ್ನು ತೋರುವಂತಿತ್ತು. ನರಸಿಂಹರಾಯರ ಪತ್ರ ವಿಳಂಬವಾಗಿ ಕೈಸೇರಿದ ಹಿನ್ನೆಲೆ ಹೇಳಿದೆ. ಪತ್ರಿಕೆ ಆರಂಭವಾದ ದಿನ ಮೊದಲ್ಗೊಂಡು ಅಂದಿನವರೆಗಿನ ಪ್ರಗತಿಚರಿತ್ರೆ ಒಪ್ಪಿಸಿ ಎಂದೆ. ಬಂದ ವಿವರಣೆ ಪ್ರಕಾರ
ಬೇಕಾದ ಆರ್ಥಿಕ ಬಲಸಂಗ್ರಹವಿಲ್ಲದೆ, ಹಲವು ಆಶ್ವಾಸನೆಗಳನ್ನಷ್ಟೆ ನಂಬಿ, ಪ್ರಾರಂಭಿಸಿದ ಕನ್ನಡವಾಣಿಯಸಂಪಾದಕಪ್ರಕಾಶಕಸ್ಥಾನ ವಹಿಸಿಕೊಳ್ಳಲು ನರಸಿಂಹರಾಯರನ್ನು ಒಪ್ಪಿಸಲಾಗಿತ್ತು. ನವಭಾರತದಬರ್ತಫ್ಸಿಬ್ಬಂದಿಗಳಲ್ಲಿ ಹೆಚ್ಚಿನವರನ್ನು ಕನ್ನಡವಾಣಿಯ ಕೆಲಸಕ್ಕಾಗಿ ಸಂಘಟಿಸಲಾಗಿತ್ತು. ವಿವಿಧ ವಿಭಾಗಗಳ ಹೊಣೆಯನ್ನೂ ಹಂಚಿಕೊಡಲಾಗಿತ್ತು,ಸಂಪಾದಕೀಯ ವಿಭಾಗದಲ್ಲಿ ಕನಿಷ್ಟ ಸಂಖ್ಯೆಯ ಪೂರ್ಣಕಾಲಿಕಉದ್ಯೋಗಿಗಳಿದ್ದು, ಉಳಿದ ಅವಶ್ಯಕತೆಗಳಿಗೆ ಅಂಶಕಾಲಿಕಸೇವೆಯ ವ್ಯವಸ್ಥೆ ಇತ್ತು. ಆರಂಭದ ದಿನಗಳಲ್ಲಿಮೈಮುರಿಯವದುಡಿಮೆ ಮಾಡಿಸಿ ( ಮುದ್ರಣ ಯಂತ್ರದ ಚಕ್ರವನ್ನು ತಿರುಗಿಸುವ ಕೆಲಸಕ್ಕೆ ಎಲ್ಲರನ್ನೂ ಉಪಯೋಗಿಸಿ) ಮುನ್ನೂರು ಪ್ರತಿಗಳನ್ನು ಮುದ್ರಿಸಿ ಕೊಡುತ್ತಿದ್ದ ಬಡ ಮುದ್ರಣಾಲಯದಿಂದ ಹೊರಬಂದು, ಹಲ ಕೆಲವು ಸೌಕರ್ಯಗಳುಳ್ಳ ಹಿಂದ್ ಆರ್ಟ್ ಪ್ರೆಸ್ ನೊಳಗೆ ಸೇರಿಕೊಳ್ಳಲಾಗಿತ್ತು.
ಚರಿತ್ರೆ ಕೇಳಿದ ಮೇಲೆಸಂಕೋಚವಿಲ್ಲದೆ ಉತ್ತರ ಕೊಡಿ. ನನಗಿಲ್ಲಿ ದುಡಿಯುವ ವಕಾಶ ಉಳಿದಿದೆಯೇ?” ಎಂಬ ಪ್ರಶ್ನೆ ಎತ್ತಿದೆ.ಸಂಜೆಯ ನಂತರ ಎಲ್ಲರೂ ಬಂದು ಸೇರುತ್ತಾರೆ. ಅವರನ್ನೇ ಸಾಮೂಹಿಕವಾಗಿ ಕೇಳಿಬಿಡಿ, ಎಂದು ಸಲಹೆ ಬಂತು.
ಸಂಜೆಯವರೆಗೂ ಕಾಲ ಕಳೆಯಬೇಕಾಗಿತ್ತು. ಉಪಹಾರ ತೀರಿಸಿ ಬಂದು, ಬೇರೆ ಪತ್ರಿಕೆಗಳಿಂದ ಕೆಲವು ಸುದ್ದಿ ತುಣುಕುಗಳನ್ನು ಅನುವಾದಿಸಿ ಕೊಡುವುದರ ಜೊತೆಗೆ, ಕನ್ನಡವಾಣಿಯ ಕೆಲಸದಲ್ಲಿ ಹುಟ್ಟಿಕೊಳ್ಳುವ ಪಂಥಾಹ್ವಾನಪರಿಹಾರೋಪಾಯಗಳ ಲೆಕ್ಕಾಚಾರಕ್ಕೂ ತೊಡಗಿದೆ. ಸಂಘಟಕ ಮಿತ್ರರೆಲ್ಲರೂ ಒಟ್ಟಾಗುವ ಹೊತ್ತಿಗೆ ಕಾರ್ಯತಂತ್ರ ಸಿದ್ಧವಾಗಿತ್ತು.
ನಿಮ್ಮ ಸೇವೆಯಂತೂ ಕನ್ನಡ ವಾಣಿಗೆ ಬೇಕು. ಆದರೆ, ಕನಿಷ್ಟ ವೇತನವಾದರೂ ಕೊಡುವ ಬಗೆ ಹೇಗೆ ?” ಪ್ರಮುಖ ಸಂಘಟಕ ರಘುವೀರ ಶೆಟ್ಟರ ಪ್ರಶ್ನೆ.
ಈ ತಿಂಗಳು ಆಹಾರಕ್ಕೆ ಬೇಕಾಗುವಷ್ಟು ಹಣ ಹೇಗಾದರೂ ಒದಗಿಸಿ, ಇದೇ ತಿಂಗಳಿನಲ್ಲಿ ಸ್ವಾತಂತ್ರ್ಯ ಕೊಡುತ್ತೀರಾದರೆನನಗೆ ಮಾತ್ರವಲ್ಲ ಇತರ ಎಲ್ಲರಿಗೂ ವೇತನ ಕೊಡುವಷ್ಟು ಗಳಿಕೆ ಮಾಡಿಸಿ ತೋರಿಸುತ್ತೇನೆ ಎಂದೆ. ಆ ಮೇಲೆ, ಶಿಷ್ಟಾಚಾರದ ಮಾತುಕತೆಗಳಲ್ಲಿ ಸ್ವಲ್ಪ ಹೊತ್ತು ಕಳೆದು, ನಿಮ್ಮ ಒಮ್ಮತದ ತೀರ್ಮಾನವನ್ನು ನಾಳೆ ಬೆಳಗಿನ ಹೊತ್ತು ತಿಳಿಸಿದರೆ ಸಾಕೆಂದು ಹೇಳಿ, (ಹೋಟೆಲ್ ವಸತಿಗೆ ಬೇಕಾದ ಹಣ ಇಲ್ಲದಿದ್ದ ಕಾರಣ ) ಮುದ್ರಣಾಲಯದ ಮೂಲೆಯಲ್ಲಿ ಪೇರಿಸಿದ್ದ ಕಾಗದದ ರೀಮ್ ಗಳ ಮೇಲೆ ಮಲಗಿ ನಿದ್ರಿಸಿದೆ.
ಬೆಳಗ್ಗೆ ಎಚ್ಚರವಾದಾಗ, ಮುಖ್ಯ ಕಂಪಾಸಿಟರ್ ನಾರಾಯಣರ ಬಳಿ ಇದ್ದ ಒಂದು ಚೀಟಿ ದೊರೆಯಿತು. ‘ನಿನ್ನ ಶರ್ತಗಳು ಒಪ್ಪಿಗೆಯಾಗಿವೆ. ಮುಂದಿನ ಚರ್ಚೆಗಾಗಿ 10 ಗಂಟೆ ಹೊತ್ತಿಗೆ ಇಲ್ಲೇ ಸೇರೋಣಎಂಬ ಸಂದೇಶ ನರಸಿಂಹರಾಯರ ಹಸ್ತಾಕ್ಷರದಲ್ಲಿತ್ತು. ಕುರುಡು ಹುಮ್ಮಸ್ಸಿನ ಪಂಥಾಹ್ವಾನ ಸ್ವೀಕೃತವಾಗಿತ್ತು!
ದಿನಪತ್ರಿಕೆಯೊಂದರ ಬೆಳವಣಿಗೆಗೆ ಸಹಾಯಕವಾಗಬಲ್ಲ ಸಿದ್ಧಾಂತಗಳೆಲ್ಲವನ್ನೂ ಯಶಸ್ವಿಯಾಗಿ ಪ್ರಯೋಗಿಸುವ ಅವಕಾಶ ಪ್ರಾಪ್ತವಾಗಿತ್ತು.
ಅಂದಿನ ಪೂರ್ಣಾಧಿವೇಶನದಲ್ಲಿ ಇತರರೊಂದಿಗೆ ವಿ.ಜೆಪಿ.ಸಲ್ದಾನ ಅವರೂ ಭಾಗವಹಿಸಿದ್ದು ಹಿಂದಿನ ದಿನ ನಾನು ಅಪೇಕ್ಷಿಸಿದ್ದಸ್ವಾತಂತ್ರ್ಯಯಾವ ಬಗೆಯದು ಎಂದು ತಿಳಿಯಬಯಸಿದರು. ಪ್ರಮುಖರೆಲ್ಲರೂ ಒಪ್ಪಿದ ಅಂಶವನ್ನು ಜಾರಿಯಲ್ಲಿ ತರುವ ಅಧಿಕಾರ ಸ್ವಾತಂತ್ರ್ಯವಷ್ಟೇ ನನಗೆ ಬೇಕಾದುದು ಎಂದೆ. ಎಲ್ಲರೂ ಒಪ್ಪಿದರು.
ನನ್ನ ಕಾರ್ಯಯೋಜನೆಯ ಮುಖ್ಯಾಂಶಗಳನ್ನು ಆ ಕೂಡಲೇ ಸಭೆಯ ಮುಂದಿರಿಸಿದೆ. ಅಲ್ಪಸ್ವಲ್ಪ ಚರ್ಚೆಗಳೊಂದಿಗೆ ಯೋಜನೆ ಅಂಗೀಕೃತವಾಯಿತು.
ಆ ಪ್ರಕಾರ (ಮುಂದಿನ ದಿನಗಳಲ್ಲಿ) ಕೈಗೊಂಡ ಕ್ರಮಗಳಿಂದ
ನ್ಯೂಯಾರ್ಕ್ ಕಾಟನ್ (.ಸಿ.) ನಂಬರ್ ಗಳನ್ನು ಮುಂಬಯಿಯಿಂದ ಫೋನಿನಲ್ಲಿ ಪಡೆದು, ಅವುಗಳನ್ನು ಪತ್ರಿಕೆಗೆ ಒದಗಿಸುತ್ತಿದ್ದ ವ್ಯಕ್ತಿ ಕರೆಗಳನ್ನು ಕನ್ನಡವಾಣಿಯ ವೆಚ್ಚದಲ್ಲಿ ಮಾಡುತ್ತಿದ್ದ. ಪತ್ರಿಕೆಯಓದುಗರಿಗೆ.ಸಿ.ನಂಬರ್ ಒದಗಿಸಲು ದಿನಕ್ಕೆ16ರೂ.ಬೇಕಾಗುತ್ತಿತ್ತು. ಇನ್ನೂ ನಾಲ್ಕು ಹೆಚ್ಚಿನ ಖರ್ಚು ಮಾಡಿ, ನಂಬರ್ ಮಾತ್ರವೇ ಅಲ್ಲದೆ ವಾರ್ತಾ ವರದಿಗಳೆಲ್ಲವನ್ನೂ ಪಿ.ಟಿ.. ಯಿಂದ ದೊರಕಿಸುವ ಯೋಜನೆ ಮಂಡಿಸಿದೆ. ಒಪ್ಪಿಗೆ ದೊರೆತಿತು.
(ಆದಾಯದ ದಾರಿ ತೋರುತ್ತೇನೆ ಎಂದು ಹೇಳಿ, ವೆಚ್ಚ ಹೆಚ್ಚಿಸುವ ಮಾರ್ಗ ತೋರುತ್ತೀಯಾ ? ಎಂಬ ತಿಳಿಹಾಸ್ಯದ ನುಡಿಗೂ ಸಿದ್ಧ ಉತ್ತರ ಒದಗಿಸಿದ್ದೆ)
ವಾರ್ತಾ ಸಂಸ್ಥೆಯ ಸ್ಥಳೀಯ ಪ್ರತಿನಿಧಿಯೊಂದಿಗೆ ಒಪ್ಪಂದವಾಗುವ ದಿನವೇ, ಅವರ ಮಾಸಿಕ ಶುಲ್ಕದ ಅರ್ಧದಷ್ಟು ಆದಾಯ ತರುವ ಯೋಜನೆ ಕಾರ್ಯಗತವಾಯಿತು.
ಆ ಪ್ರಕಾರ ನಗರದಲ್ಲಿದ್ದ ಏಳು ಚಿತ್ರಮಂದಿರಗಳದೇಖಾವೆಗಳ ಸಂಕ್ಷಿಪ್ತ ವಿವರ ಒದಗಿಸುವ (ನಗರದಲ್ಲಿ ಮನರಂಜನೆ)ದೈನಂದಿನ ಅಂಕಣ ಮತ್ತು ವಾರಕ್ಕೆ ಒಂದು ದಿನ ಚಿತ್ರಗಳ ಜಾಹೀರಾತು ಇವುಗಳನ್ನು ಒದಗಿಸುವ ವ್ಯವಸ್ಥೆಯಾಯಿತು.
ದಿನದ ಸ್ವಲ್ಪ ಹೊತ್ತು ಬಿಡುವು ಕೊಟ್ಟರೆ, ಜಾಹೀರಾತು ಸಂಗ್ರಹವನ್ನು ಹೆಚ್ಚಿಸಲು ಸಾಧ್ಯವಾಗುವ ಸೂಚನೆ ಇತ್ತಾಗ, ಅದಕ್ಕೂ ಅನುಮೋದನೆ ದೊರೆಯಿತು.
ನಾಳೆಯಿಂದ ಪಿ..ಟಿ.ವಾರ್ತೆಗಳನ್ನು ಪ್ರಕಟಿಸಲಿದ್ದೇವೆಎಂದು ಘೋಷಿಸಲು ಅನುಕೂಲವಾಗುವಂತೆ ಮಾಡಿಕೊಂಡ ಎಲ್ಲಾ ಏರ್ಪಾಡುಗಳೂ, ವಾರ್ತಾಸಂಸ್ಥೆಯ ಸ್ಥಳೀಯ ಮ್ಯಾನೇಜರರ ಸಹಕಾರದಿಂದ ಮುಂದುವರಿದವು.
ವಾರ್ತೆಗಳಿರುವ ಟೆಲಿಪ್ರಿಂಟರ್ ಕಾಗದದ ಸುರುಳಿಗಳನ್ನು ದಿನದಲ್ಲಿ ಮೂರು ಬಾರಿ ತಂದುಕೊಡುವಸಿಸೇವೆಗೆ ಮಾಸಿಕ 600ರೂ.ಶುಲ್ಕ ಪಡೆಯುವ ಒಪ್ಪಂದವಾದ ಮರುದಿನವೇ ಸೇವೆಯ ಘೋಷಣೆಯಾಯಿತು. ಓದುಗಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯೂ ದೊರೆಯಿತು.
ಪಿ.ಟಿ.. ಕಚೇರಿ ನವಭಾರತದ ಕಟ್ಟಡದೊಳಗಿನಿಂದಲೇ ಕೆಲಸ ಮಾಡುತ್ತಿದ್ದುದರಿಂದ ಸಂಸ್ಥೆಯವರಿಗೆ ತೊಡಕಾಗುತ್ತಿತ್ತು.ತೊಡಕು ನಿವಾರಣೆಯ ಒಂದು ಉದ್ದೇಶ ಕನ್ನಡವಾಣಿಯೊಂದಿಗೆ ಸಂಬಂಧ ಸ್ಥಾಪಿಸುವುದರ ಮೂಲಕ ಬೇಗನೆ ನೆರವೇರಿ ಕೆಲವೇ ದಿನಗಳಲ್ಲಿ ಸಂಸ್ಥೆ ತನ್ನ ಕಚೇರಿಯನ್ನು ಹೊರಗಿನ ಬಾಡಿಗೆ ಕಟ್ಟಡಕ್ಕೆ ವರ್ಗಾಯಿಸಿತು.
ಪಿ.ಟಿ.. ವರದಿಗಳನ್ನು ಪಡೆಯಲು ನವಭಾರತಕ್ಕೆ ಮಾತ್ರವೇ ಸಾಧ್ಯಉಳಿದ ಯಾವ ಪತ್ರಿಕೆಗಳಿಗೂ ಅಲ್ಲವೆಂದು ಕಾಮತರು ಮಾಡುತ್ತಿದ್ದ ಪ್ರಚಾರವನ್ನು ರುಜುವಾತುಗಳ ಮೂಲಕ ಸುಳ್ಳೆಂದು ತೋರಿಸಲಾಯಿತು.
ಸಲಹೆಗಳ ಅಂಗೀಕಾರ, ಅವುಗಳ ಕಾರ್ಯಾಚರಣೆಯ ಯಶಸ್ಸುಇವುಗಳು ನನ್ನಲ್ಲಿ ಅಧಿಕಾರದಾಹವನ್ನು ಬೆಳೆಸುತ್ತಿವೆ ಎಂಬ ದೂರು ಸಂಘಟಕರ ಸಭೆಯಲ್ಲಿ ಪ್ರಸ್ತಾಪವಾಗಲು ಹೆಚ್ಚು ದಿನ ತಗಲಲಿಲ್ಲ.
ಅದಕ್ಕೆ ಆ ದೂರಿತ್ತವರ ರಾಜಕೀಯ ಒಲವಿಗೆ ನಾನು ಸ್ಪಂದಿಸದಿದ್ದುದೂ ಒಂದು ಕಾರಣ.
ದೂರಿದ ಮುಖ್ಯ ಸಂಘಟಕರು ಬೇರೆಡೆ ಉದ್ಯೋಗ ಮಾಡುತ್ತಿದ್ದು, ಸಂಪಾದಕೀಯವನ್ನು ಮಾತ್ರವೇ ಬರೆದು ಪ್ರತಿದಿನ ಕಳುಹಿಸಿಕೊಡುತ್ತಿದ್ದರು. ಒಂದು ದಿನ, ಎಷ್ಟು ಹೊತ್ತಾದರೂ ಸಂಪಾದಕೀಯ ಬಾರದೇ ಇದ್ದಾಗ, “ಏನು ಮಾಡಲಿ ?” ಎಂದು ಸಲ್ದಾನರನ್ನು ಕೇಳಿದೆ. “ಇಂದಿಗೆ ನೀವೇ ಒಂದು ಸಂಪಾದಕೀಯ ಬರೆದುಕೊಡಿಎಂದಂತೆ, ಬರೆದೂ ಕೊಟ್ಟಿದ್ದೆ.
ಆ ಘಟನೆಯೂ ನನ್ನ ವಿರುದ್ಧದ ಆಪಾದನೆಗಳಿಗೆ ಪೂರಕವಾಯಿತು.
(ಮುಂದಿನ ಭಾಗದಲ್ಲಿ)
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Share
Published by
Harish Mambady