ನಾರಾಯಣ ಗುರುಗಳ ಜೀವನ ಚರಿತ್ರೆಯೇ ಬಿಲ್ಲವರ ಧರ್ಮಗ್ರಂಥ. ಸರಿಯಾದ ಶಿಕ್ಷಣವಿಲ್ಲದೆ ಇಂದು ಯುವಕರು ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿದಾರಿಗೆ ತರುವ ಜವಾಬ್ದಾರಿ ಪೋಷಕರಿಗಿದೆ ಎಂದು ಪ್ರಾಧ್ಯಾಪಕ ಡಾ. ರಾಜೇಶ್ ಬೆಜ್ಜಂಗಳ ಹೇಳಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು 163ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬ್ರಹ್ರಶ್ರೀ ನಾರಾಯಣ ಗುರುಗಳ ಸಂದೇಶವಿರುವ ಪುಸ್ತಕಗಳನ್ನು ಖರೀದಿಸಿ ಮನೆಯೊಳಗಿಟ್ಟರೆ ಏನು ಪ್ರಯೋಜನವಿಲ್ಲ. ಅದನ್ನು ಓದಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಿಡಿಸಿಕೊಳ್ಳಬೇಕು. ಕೇರಳ ಇಂದು ದೇವರನಾಡಾಗಿ ಬದಲಾಗಲು ನಾರಾಯಣ ಗುರುಗಳೇ ಕಾರಣ. ವಿದ್ಯೆ ಇಲ್ಲದವರ, ಶಕ್ತಿ ಇಲ್ಲದವರ ಧ್ವನಿಯಾಗಿದ್ದ ಅವರನ್ನು ಇಂದಿಗೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.
ಬಿಲ್ಲವ ಮಹಾಮಂಡಲದ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್ ಪ್ರಸಾವನೆ ಮಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ವಿವೇಕಾನಂದರನ್ನು ಹೃದಯದಲ್ಲಿಟ್ಟು ಆರಾಸಿದರೆ ಬಿಲ್ಲವ ಬಲ್ಲವನಾಗುತ್ತಾನೆ, ಆತನ ಜೀವನದ ದೃಷ್ಟಿಕೋನವೂ ಬದಲಾಗುತ್ತದೆ ಎಂದರು. ಬಿಲ್ಲವರ ಅಸ್ಥಿತ್ವಕ್ಕೆ ಧಕ್ಕೆ ಬಂದಾಗ ದುರ್ಬಲ ಮನೋಸ್ಥಿತಿ ತೋರದೆ, ಸ್ವಾಭಿಮಾನದಿಂದ ಎದುರಿಸಬೇಕು. ರಾಜಕೀಯವಾಗಿಯೂ ಬಿಲ್ಲವರು ಒಂದು ಸ್ಪಷ್ಟ ನಿರ್ಧಾರ ಕೈಗೆತ್ತಿಕೊಳ್ಳುವ ಅನಿವಾರ್ಯತೆ ಇಂದು ನಮ್ಮ ಮುಂದಿದೆ ಎಂದು ಹೇಳಿದರು.
ಇದೇ ಸಂದರ್ಭ ದೇಯಿ ಬೈದಿತಿ ಪ್ರತಿಮೆಗೆ ದುಷ್ಕರ್ಮಿಗಳು ಅಪಮಾನಗೊಳಿಸಿರುವುದನ್ನು ವಿರೋಸಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ತೆಂಕುತಿಟ್ಟಿನ ಪ್ರಸಿದ್ದ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪತ್ರಕರ್ತ ಗೋಪಾಲ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ರಾಘವ ಅಮೀನ್ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್, ಕೋಶಾಕಾರಿ ರಮೇಶ್ ಎಂ.ತುಂಬೆ, ಜತೆ ಕಾರ್ಯದರ್ಶಿ ಶಂಕರ್ ಕಾಯರ್‌ಮಾರ್, ಲೆಕ್ಕ ಪರಿಶೋಧಕ ಸತೀಶ್ ಬಿ. ವೇದಿಕೆಯ್ಲಲಿದ್ದರು. ಪತ್ರಕರ್ತ ಗೋಪಾಲ ಅಂಚನ್ ಹಾಗೂ ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಿಲ್ಲವ ಸಮಾಜ ಬಾಂದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.