ಬುಧವಾರ ಸಂಜೆ ಕೆಎಸ್ಸಾರ್ಟಿಸಿ ಬಸ್ಸುಗಳು ವಿರಳ ಸಂಖ್ಯೆಯಲ್ಲಿ ಸಂಚರಿಸಿ ಪ್ರಯಾಣಿಕರು ಪರದಾಡಬೇಕಾಯಿತು.
ಬಸ್ಸುಗಳೆಲ್ಲ ಬಿ.ಸಿ.ರೋಡಿನ ಖಾಲಿ ಜಾಗಗಳಲ್ಲೆ ಠಿಕಾಣಿ ಹೂಡಿದ ಕಾರಣ ಪ್ರಯಾಣಿಕರು ಹಿಡಿಶಾಪ ಹಾಕುತ್ತಲೇ ತಮ್ಮ ಊರಿಗೆ ತೆರಳುವ ಬಸ್ಸಿನ ಆಗಮನಕ್ಕೆ ಕಾಯುತ್ತಿದ್ದ ದೃಶ್ಯ ಕಂಡುಬಂತು.
ಮಂಗಳೂರು ಚಲೋ ಹಿನ್ನೆಲೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ ಕಾರಣ ಅವರ ಉಪಯೋಗಕ್ಕಾಗಿ ಕೆಎಸ್ಸಾರ್ಟಿಸಿ ಬಸ್ಸುಗಳ ಸೇವೆಯನ್ನು ಪಡೆಯಲಾಗಿದೆ. ವಿಶೇಷವಾಗಿ ಮಂಗಳೂರಿನಿಂದ ಧರ್ಮಸ್ಥಳ ಮಾರ್ಗದಲ್ಲಿ ಸಂಚರಿಸುವ ಬಿ.ಸಿ.ರೋಡ್, ಬೆಳ್ತಂಗಡಿ, ಮಡಂತ್ಯಾರು, ಪುಂಜಾಲಕಟ್ಟೆ ಪ್ರಯಾಣಿಕರು ಕೆಎಸ್ಸಾರ್ಟಿಸಿ ಬಸ್ಸುಗಳನ್ನೇ ನೆಚ್ಚಿಕೊಳ್ಳಬೇಕಿದ್ದ ಕಾರಣ ಸರಿಯಾದ ಸಮಯಕ್ಕೆ ಬಸ್ಸುಗಳು ಬಾರದೆ ಕಂಗಾಲಾದರು.