ಸಾರ್ವಜನಿಕ ಶಿಕ್ಷಣ ಇಲಾಖೆ, ಡಿಎಸ್‌ಇಆರ್‌ಟಿ ಮತ್ತು ಡಯಟ್ ಮಂಗಳೂರು ಆಶ್ರಯದಲ್ಲಿ ಮಂಗಳೂರಿನ ಡೊಂಗನಕೇರಿ ಕೆನರಾ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ’ಗಂಗೆಯ ಗೋಳು’ ನಾಟಕ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ.
ಬಂಟ್ವಾಳನ್ಯೂಸ್ ಅಂಕಣಕಾರರೂ ಆಗಿರುವ ಪತ್ರಕರ್ತ, ರಂಗಕರ್ಮಿ ಮೌನೇಶ ವಿಶ್ವಕರ್ಮ ನಿರ್ದೇಶಿಸಿದ ಈ ನಾಟಕದಲ್ಲಿ ಶಾಲೆಯ ವಿದ್ಯಾರ್ಥಿ ಗಳಾದ ಜೋಲ್ಸ್ಟನ್ ಸೆರಾವೋ, ಪ್ರಣೀತ್, ಶ್ರೀಯ ಆಳ್ವ, ಸಂಜನಾ ರೈ, ವಿಂದ್ಯಾ ಕೈಂತಜೆ, ಪ್ರಣಮ್ಯ , ಶ್ರೇಯಾ ,ಯಶ್ಮಿತಾ ಅಭಿನಯಿಸಿದ್ದಾರೆ. ಡಯಟ್ ಪ್ರಾಂಶುಪಾಲರಾದ ಸಿಪ್ರಿಯನ್ ಮೊಂತೆರೋ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಡಯಟ್ ನ ಹಿರಿಯ ಉಪನ್ಯಾಸಕಿಯರಾದ ದಯಾವತಿ, ಚಂದ್ರಪ್ರಭಾವತಿ, ಪ್ರವೀಣ ಕುಮಾರಿ, ವಿಜ್ಞಾನ ನಾಟಕ ಸ್ಪರ್ಧೆಯ ನೋಡಲ್ ಅಧಿಕಾರಿ ಚಂದ್ರಾವತಿ, ತೀರ್ಪುಗಾರರಾದ ರಂಗಶಿಕ್ಷಕ ಗೋಪಾಲಕೃಷ್ಣ, ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಸಿ.ಶ್ರೀಧರ್ ಈ ಸಂದರ್ಭ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಥಮ್, ಸೂರಜ್ ಸಹಕರಿಸಿದರು. ಶಿಕ್ಷಕರಾದ ಮಂಜುಳಾ ಎಚ್.ಗೌಡ, ಸುಧಾ ಎನ್ ರಾವ್ ಮಾರ್ಗದರ್ಶನ ನೀಡಿದ್ದಾರೆ.
ಹಾಸನದಲ್ಲಿ ನಡೆಯಲಿರುವ ವಿಭಾಗಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿಜೇತ ನಾಟಕ ತಂಡವನ್ನು ಶಾಲಾ ಸಂಚಾಲಕ ಪ್ರಹ್ಲಾದ್ ಜೆ ಶೆಟ್ಟಿ, ಆಡಳಿತಾಧಿಕಾರಿ ಸಿ.ಶ್ರೀಧರ್, ಮುಖ್ಯೋಪಾಧ್ಯಾಯರಾದ ವಿಜಯಲಕ್ಷ್ಮೀ ವಿ ಶೆಟ್ಟಿ, ಗ್ರೇಸ್ ಪಿ ಸಲ್ದಾನ ಅಭಿನಂದಿಸಿದ್ದಾರೆ.