ಪಾಕಶಾಲೆಯೇ ವೈದ್ಯಶಾಲೆ

ರುಚಿಯಲ್ಲಿ ಖಾರ, ಇದರಲ್ಲಿವೆ ಮದ್ದಿನ ಗುಣ

  • ಡಾ. ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಮೆಣಸು ಅಡುಗೆ ಮನೆಯ ಅವಿಭಾಜ್ಯ ಅಂಗ. ಕೆಲವರಿಗೆ ಮೆಣಸು ಬಹು ಇಷ್ಟ ಮತ್ತು ಇನ್ನು  ಕೆಲವರಿಗೆ ಇಷ್ಟವಾದರೂ ತಿಂದರೆ ಆಗದು. ಇನ್ನು ಕೆಲವರಿಗೆ ಮೆಣಸು ಎಂದರೇ ಆಗದು. ಆದರೆ ಮೆಣಸೂ ಸಹ ಹಲವಾರು ಸಂದರ್ಭಗಳಲ್ಲಿ  ಔಷಧವಾಗಿ ಉಪಯೋಗಕ್ಕೆ ಬರುತ್ತದೆ.ರುಚಿಯಲ್ಲಿ ಖಾರವಾದರೂ ಇದರಲ್ಲಿ ಹಲವಾರು ವಿಟಮಿನ್ಗಳು, ಖನಿಜಗಳು ಅಡಕವಾಗಿವೆ.

  1. ಹಣೆಯಲ್ಲಿ ಕಪ ಗಟ್ಟಿಯಾಗಿ ತಲೆನೋವು ಇದ್ದಾಗ ಮೆಣಸನ್ನು ಪುಡಿಮಾಡಿ ನೀರಿನಲ್ಲಿ ಕಲಸಿ ಲೇಪ ಹಾಕಬೇಕು
  2. ಸೊಂಟನೋವು ,ವಾತಸಂಬಂಧ ಸಂಧುಗಳ ನೋವುಗಳಲ್ಲಿ ಮೆಣಸನ್ನು ಅರೆದು ಲೇಪ ಹಾಕಬೇಕು
  3. ಮೆಣಸನ್ನು ಕೆಂಡಕ್ಕೆ ಹಾಕಿ ಅದರ ಹೊಗೆಯನ್ನು ಮೂಗು ಹಾಗು ಬಾಯಿಯಲ್ಲಿ ಎಳೆದುಕೊಂಡರೆ ಗಟ್ಟಿಯಾದ ಕಪ ಹಾಗು ಶೀತ ನೀರಾಗಿ ಹೊರಗೆ ಬರುತ್ತದೆ.(ಕಣ್ಣನ್ನು ಒದ್ದೆ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು)
  4. ನಾಯಿ ಕಚ್ಚಿದ ಸ್ಥಳಕ್ಕೆ ಮೆಣಸನ್ನು ಅರೆದು ಲೇಪ ಹಾಕುವುದರಿಂದ ನಂಜು ಹೊರ ಬರುತ್ತದೆ ಮತ್ತು ಕೀವು ಆಗುವುದನ್ನು ತಡೆಕಟ್ಟುತ್ತದೆ.
  5. ಮೆಣಸು ಮತ್ತು ಸಾಸಿವೆಯನ್ನು ಮಿಶ್ರಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ಹಚ್ಚಿದರೆ ತುರಿಕೆಯುಕ್ತ ಚರ್ಮರೋಗಗಳು ವಾಸಿಯಾಗುತ್ತದೆ
  6. ಮೆಣಸನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿ ಆ ಎಣ್ಣೆಯನ್ನು ಸ್ಪರ್ಶ ಜ್ಞಾನ ಕಡಿಮೆ ಇರುವಲ್ಲಿಗೆ ಹಚ್ಚಬೇಕು.
  7. ಕಾಲು ಉಳುಕಿದಾಗ ಮೆಣಸನ್ನು ಹರಳೆಣ್ಣೆಯಲ್ಲಿ ಕಾಯಿಸಿ ಉಳುಕಿದ ಜಾಗಕ್ಕೆ ಹಚ್ಚಿದರೆ ನೋವು ಹಾಗು ಬಾವು ಕಡಿಮೆಯಾಗುತ್ತದೆ.
  8. ಮಿತವಾಗಿ ಬಳಸುವುದರಿಂದ ಅರುಚಿ,ಅಜೀರ್ಣ ಹಾಗು ಹೊಟ್ಟೆಯಲ್ಲಿನ ವಾಯುವಿನ ತೊಂದರೆ ನಿವಾರಣೆಯಾಗುತ್ತದೆ.
  9. ಮೆಣಸಿನ ಜೊತೆ ಸ್ವಲ್ಪ ಹಿಂಗು ಹಾಗು ಕರ್ಪೂರ ಸೇರಿಸಿ ಗುಳಿಗೆ ಮಾಡಿ ತಿನ್ನುವುದರಿಂದ ಹೊಟ್ಟೆನೋವುಯುಕ್ತ ಭೇದಿಯು ಕಡಿಮೆಯಾಗುತ್ತದೆ.
  10. ಮಧ್ಯಪಾನಿಗಳಲ್ಲಿ ಕಾಣುವ ಮಾನಸಿಕ ಅಸ್ತಿರತೆಯನ್ನು ಸ್ವಲ್ಪ ಮೆಣಸು ಹಾಗು ಸಾಸಿವೆಯನ್ನು ಮಿಶ್ರಮಾಡಿ ತಿನ್ನಿಸುವುದರಿಂದ ನಿವಾರಿಸಬಹುದು.
  11. ದಿನಕ್ಕೊಂದು ಮೆಣಸು ಸೇವನೆಯಿಂದ ನಿದ್ರಾಹೀನತೆಯನ್ನು ಹೋಗಲಾಡಿಸಬಹುದು.
  12. ಕಪ ಸಂಬಂಧಿ ಸಂಧು ನೋವುಗಳಿಗೆ ಅಲ್ಪ ಪ್ರಮಾಣದ ಮೆಣಸಿನ ಸೇವನೆ ಉತ್ತಮ ಫಲದಾಯಕವಾಗಿದೆ.
  13. ಬಿಟ್ಟು ಬಿಟ್ಟು ಅನಿಯಮಿತವಾಗಿ ಜ್ವರ ಬರುವುದಿದ್ದರೆ ಮೆಣಸನ್ನು ಅಲ್ಪ ಪ್ರಮಾಣದಲ್ಲಿ ಕೊಡಬೇಕು.
  14. ನಿಯಮಿತವಾಗಿ ಮೆಣಸನ್ನು ಸೇವಿಸುವುದರಿಂದ ಶರೀರದ ಅನಗತ್ಯ ಕೊಬ್ಬು ನಿವಾರಣೆಯಾಗುತ್ತದೆ.
  15. ಅಲ್ಪ ಪ್ರಮಾಣದ ಮೆಣಸು ಸೇವನೆಯು ಮೂತ್ರ ದೋಷವನ್ನು ನಿವಾರಿಸುತ್ತದೆ (ಅಲ್ಪ ಪ್ರವೃತ್ತಿ)
  16. ಮೆಣಸು ಹೃದಯದ ದುರ್ಬಲತೆಯಲ್ಲಿ ಉತ್ತಮ ಪರಿಣಾಮಕಾರಿಯಾಗಿದೆ.

ಜಾಗ್ರತೆ;

  • ಪಿತ್ತ ಪ್ರಕೃತಿಯವರಿಗೆ, ಎಸಿಡಿಟಿ ಸಮಸ್ಯೆ ಹಾಗು ಹೊಟ್ಟೆ ಮತ್ತು ಕರುಳಿನಲ್ಲಿ ಹುಣ್ಣಿನ ಸಮಸ್ಯೆ ಇದ್ದವರಿಗೆ ಮೆಣಸು ಹಿತಕಾರಿಯಲ್ಲ.
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts