ಆರ್ಥಿಕ ಅಡಚಣೆಗೆ ಮನನೊಂದು ಮನೆಯಿಂದ ನಾಪತ್ತೆಯಾಗಿದ್ದ ಯುವಕನೊಬ್ಬನ ಮೃತದೇಹ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಸಮೀಪದ ಕುಕ್ಕುದಡ್ಕ ಎಂಬಲ್ಲಿ ಗುಡ್ಡೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕುಕ್ಕುದಡ್ಕ ನಿವಾಸಿ ತಿಮ್ಮಪ್ಪ ಪೂಜಾರಿ ಅವರ ಪುತ್ರ ಗಣೇಶ(27) ಮೃತ ವ್ಯಕ್ತಿಯಾಗಿದ್ದಾರೆ. ಆಗಸ್ಟ್ 14 ರಂದು ಸಹೋದರನ ಜತೆ ದಾಸಕೋಡಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆಂದು ತೆರಳಿದ್ದರು. ಅಲ್ಲಿಂದ ಹಿಂತಿರುವ ವೇಳೆ ಗಣೇಶ ಅರ್ಧದಾರಿಯಲ್ಲಿ ಇಳಿದಿದ್ದ. ಅದಾದ ಬಳಿಕ ಈತ ನಾಪತ್ತೆಯಾಗಿದ್ದು, ಮನೆಯವರು ಎಲ್ಲೆಡೆ ಹುಡುಕಾಟ ಕೂಡ ನಡೆಸಿದ್ದರು. ಕುಕ್ಕುತ್ತಡ್ಕ ಸಮೀಪದ ಗುಡ್ಡೆಯಲ್ಲಿ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವ ಕೊಳೆತ ಸ್ಥಿತಿಯಲ್ಲಿದ್ದು, ಮೂರು ದಿನ ಹಿಂದೆ ಘಟನೆ ನಡೆದಿದೆನ್ನಲಾಗಿದೆ. ಸ್ಥಳದಲ್ಲಿ ಮೂರು ಮೊಬೈಲ್ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)