• ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಕೇಸರಿಬಾತ್ ಎಂದರೇ ಕೆಲವರ ಬಾಯಲ್ಲಿ ನೀರೂರುತ್ತದೆ. ತೀಕ್ಷ್ಣವಾದ ಸುಗಂಧ ದ್ರವ್ಯ ಕೇಸರಿ ಸ್ವಲ್ಪ  ಹಾಕಿದರೂ ಅದರ ಪರಿಮಳ ಮತ್ತು ರುಚಿ ಅತ್ಯತ್ತಮ ಎಂಬುದು ಪಾಕಶಾಲೆ ತಜ್ಞರ ಮಾತು. ಆದರೆ ಈಗ ನಾವು ಹೇಳಹೊರಟಿರುವುದು ಪಾಕಶಾಲೆಯ ಕೇಸರಿಯ ವೈದ್ಯಕೀಯ ಬಾತ್…

  1. ತಲೆಕೂದಲು ಅಲ್ಲಲ್ಲಿ ಉದುರಿ ಹೋಗಿದ್ದರೆ ಸ್ವಲ್ಪ ಕೇಸರಿಯನ್ನು ಮಧ್ಯದಲ್ಲಿ ಅಥವಾ ಹಾಲಿನಲ್ಲಿ ಅರೆದು ಆ ಜಾಗಕ್ಕೆ ಹಚ್ಚಬೇಕು.
  2. ಕೇಸರಿಯನ್ನು ಹಾಲಿನ ಕೆನೆಯಲ್ಲಿ ಅರೆದು ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಅಧಿಕವಾಗುತ್ತದೆ.
  3. ಕೇಸರಿ ಮತ್ತು ತುಳಸಿ ಎಲೆಯನ್ನು ಜಜ್ಜಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ಮಾಯವಾಗುತ್ತವೆ.
  4. ಕೇಸರಿಯನ್ನು ಜೇನುತುಪ್ಪದಲ್ಲಿ ಕಲಸಿ ಗಾಯಗಳ ಮೇಲೆ ಹಚ್ಚಿದರೆ ಗಾಯ ಬೇಗನೆ ವಾಸಿಯಾಗುತ್ತದೆ ಮತ್ತು ಕಲೆಯೂ ಉಳಿಯುವುದಿಲ್ಲ.
  5. ಹುಡುಗಿಯರಲ್ಲಿ ಮುಟ್ಟಿನ ವಯಸ್ಸು ಕಳೆದರೂ ಆಗದಿದ್ದಲ್ಲಿ ಸ್ವಲ್ಪ ಕೇಸರಿಯನ್ನು ಹಾಲಿನಲ್ಲಿ ಅರೆದು ದಿನಾ ಸೇವಿಸಬೇಕು. ಇದರಿಂದ ಹಾರ್ಮೋನುಗಳ ಪ್ರಚೋದನೆಯಿಂದ ಮುಟ್ಟಿನ ಪ್ರಕ್ರಿಯೆ ಆರಂಭವಾಗುತ್ತದೆ.
  6. ಇದು ಮುಟ್ಟಿನ ಸಮಯದ ಹೊಟ್ಟೆ ನೋವನ್ನು ಸಹ ಕಡಿಮೆ ಮಾಡುತ್ತದೆ
  7. ಗರ್ಭಿಣಿಯರು ಕೇಸರಿ ಹಾಕಿದ ಹಾಲು ಕುಡಿಯುವುದರಿಂದ ಗರ್ಭಿಣಿ ಹಾಗು ಮಗುವಿನ ಆರೋಗ್ಯ ಮತ್ತು ಚರ್ಮದ ಕಾಂತಿ ಉತ್ತಮವಾಗಿರುತ್ತದೆ.
  8. ಕೇಸರಿಯ ನಿಯಮಿತವಾದ ಬಳಕೆಯಿಂದ ವಯಸ್ಕರಲ್ಲಿನ ಮಾನಸಿಕ ಅಸಮತೋಲನ ಹಾಗು ನರಗಳ ದುರ್ಬಲತೆ ಕಡಿಮೆಯಾಗುತ್ತದೆ.
  9. ಕೇಸರಿಯಲ್ಲಿರುವ ಪೊಟ್ಯಾಸಿಯಂ ಹಾಗು ತಾಮ್ರವು ಹೃದಯವನ್ನು ರಕ್ಷಿಸಲು ಮತ್ತು ರಕ್ತದ ಒತ್ತಡವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ
  10. ಕೆಸರಿಯಲ್ಲಿನ ಕಬ್ಬಿಣದ ಅಂಶವು ದೇಹದಲ್ಲಿ ರಕ್ತವನ್ನು ಅಧಿಕಗೊಳಿಸಲು ಸಹಕರಿಸುತ್ತದೆ.
  11. ಕೇಸರಿಯನ್ನು ಬಿಸಿಯಾದ ಹಾಲಿಗೆ ಹಾಕಿ ಕುಡಿಯುವುದರಿಂದ ಶೀತದ ಬಾಧೆಯು ಕಡಿಮೆಯಾಗುತ್ತದೆ.
  12. ಕೇಸರಿಯನ್ನು ಜೇನುತುಪ್ಪದಲ್ಲಿ ಕಲಸಿ ತಿನ್ನುವುದರಿಂದ ದಮ್ಮು ಹಾಗು ಕೆಮ್ಮು ಕಡಿಮೆಯಾಗುತ್ತದೆ ಮತ್ತು ಕಪ ನೀರಾಗಿ ಸರಾಗವಾಗಿ ಹೊರಗೆ ಬರುತ್ತದೆ
  13. ಕೇಸರಿಯನ್ನು ಜೇನುತುಪ್ಪದಲ್ಲಿ ಅರೆದು ವಸಡಿಗೆ ಹಾಗು ಹಲ್ಲಿಗೆ ಉಜ್ಜುವುದರಿಮದ ಹಲ್ಲು ನೋವು ಕಡಿಮೆಯಾಗುತ್ತದೆ ಮತ್ತು ವಸಡಿನ ಆರೋಗ್ಯ ಉತ್ತಮವಾಗುತ್ತದೆ.
  14. ಕೇಸರಿಯನ್ನು ಹಾಲಿಗೆ ಹಾಕಿ ರಾತ್ರಿ ಸೇವಿಸುವುದರಿಂದ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವು ಅಧಿಕವಾಗುತ್ತದೆ.
  15. ಕೇಸರಿಯು ಮೇದೋಜೀರಕ ಗ್ರಂಥಿಯನ್ನು ಉತ್ತೇಜಿಸುವುದರ ಮೂಲಕ ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  16. ಕೇಸರಿಯ ಬಳಕೆಯಿಂದ ಶರೀರದಲ್ಲಿನ ಕಲ್ಮಶವು ನಿವಾರಣೆಯಾಗುತ್ತದೆ.
  17. ಕೇಸರಿಯಲ್ಲಿ ಇರುವ ಕ್ರೋಸಿನ್ ಎಂಬ ಘಟಕವು ಕರುಳು,ಅಂಡಕೋಶ, ರಕ್ತ ಮೊದಲಾದವುಗಳ ಕ್ಯಾನ್ಸರ್ ತಡೆಕಟ್ಟಲು ಸಹಕಾರಿಯಾಗಿದೆ.
  18. ಕೆಸರಿಯು ಮನುಷ್ಯನ ವ್ಯಾಧಿ ಕ್ಷಮತ್ವವನ್ನು ಅಧಿಕ ಗೊಳಿಸುತ್ತದೆ.

 

 

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.