ಬಂಟ್ವಾಳ

ಬೆಂಗಳೂರಿಗೆ ನೇತ್ರಾವತಿ ನೀರು: ಹೋರಾಟ ಸಮಿತಿ ವಿರೋಧ


ನೇತ್ರಾವತಿಯಿಂದ ನದಿ ನೀರನ್ನು ಕುಡಿಯುವ ಉದ್ದೇಶದಿಂದ ಬೆಂಗಳೂರಿಗೆ ಕೊಂಡು ಹೋಗಲು ಪ್ರಯತ್ನಿಸಿಸರುವ ಸರಕಾರದ ಚಿಂತನೆಯ ಬಗ್ಗೆ ತುಂಬೆ ವೆಂಟೆಡ್ ಡ್ಯಾಂ ಹೋರಾಟ ಸಮಿತಿ ವಿರೋದ ವ್ಯಕ್ತಪಡಿಸಿದೆ.
ನೇತ್ರಾವತಿ ನದಿ ತಿರುವು ಯೋಜನೆಯನ್ನು ಪರೋಕ್ಷವಾಗಿ ನೇತ್ರಾವತಿಯಿಂದ ನದಿಯಿಂದ ಬೆಂಗಳುರಿಗೆ ನೀರು ಎಂಬ ಯೋಜನೆ ಸದ್ದಿಲ್ಲದೆ ಜಾರಿಯಾಗುವ ಬಗ್ಗೆ ಈಗಾಗಲೇ ಸರಕಾರದ ಮಟ್ಟದಲ್ಲಿ ಸಿದ್ದತೆಗಳು ನಡೆದಿವೆ. ಆದರೆ ಈ ಯೋಜನೆಯ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು , ಜನಪ್ರತಿನಿಧಿಗಳು ಬೆಂಗಳುರಿನಲ್ಲಿ ಕುಳಿತು ಚರ್ಚೆ ಮಾಡುವುದು ಸರಿಯಲ್ಲ. ಇಲ್ಲಿನ ಸ್ಥಳಿಯ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅದರ ಸಾಧಕ ಬಾಧಕಗಳ ಬಗ್ಗೆ ಸವಿವರ ನೀಡಬೇಕು, ಒಂದು ವೇಳೆ ಯಾವುದೇ ಮಾಹಿತಿಯನ್ನು ನೀಡದೆ ಸ್ಥಳೀಯರನ್ನು ದೂರವಿಟ್ಟು ಯೋಜನೆ ಅನುಷ್ಟಾ ಮಾಡಲು ಹೊರಟರೆ ತುಂಬೆ ಡ್ಯಾಂ ನಿರ್ಮಾಣದ ಅವಾಂತರ ಪುನಾರಾವರ್ತನೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಂಬೆ ಡ್ಯಾಂನಲ್ಲಿ ಜನರಿಗೆ ಆದ ಅನ್ಯಾಯ ಮತ್ತೆ ಪುನರಾವರ್ತನೆ ಆಗಬಾರದು. ತುಂಬೆ ಡ್ಯಾಂ ಸಂತ್ರಸ್ತರ ಸಮಕ್ಷಮ ಮುಳುಗಡೆ ಭೂಮಿಯ ಪಾರದರ್ಶಕ ಸರ್ವೆ ಮಾಡಿ ನ್ಯಾಯೋಚಿತ ಸೂಕ್ತ ಪರಿಹಾರ ನೀಡಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯ ೨೦೧೭ ರ ಜನವರಿಯಲ್ಲಿ ಸರಕಾರಕ್ಕೆ ಸ್ಪಷ್ಟವಾದ ಆದೇಶ ನೀಡಿದ್ದರೂ ಕೂಡಾ ೧೪ ವರ್ಷದ ರೈತರ ಜ್ವಲಂತ ಸಮಸ್ಯೆಗೆ ಸರಕಾರ ಸರಿಯಾಗಿ ಸ್ಪಂದಿಸಿದೆ ತಾರತಮ್ಯ ಮಾಡಿದೆ ಕೇವಲ ಕೃಷಿಯ ಫಲವತ್ತಾದ ಭೂಮಿಗೆ ನೆಲ ಬಾಡಿಗೆ ಮಾತ್ರನೀಡುವ ಮೂಲಕ ರೈತನನ್ನು ಮತ್ತಷ್ಟು ಕೀಳು ಮಟ್ಟದಲ್ಲಿ ಕಂಡಿದೆ ಎಂದು ದೂರಿದೆ. ಅ ನಂತರ ಈವರಗೆ ಶಾಶ್ವತವಾದ ಭೂ ಪರಿಹಾರವನ್ನು ನೀಡಲು ಸರಕಾರ ಮುಂದಾಗಿಲ್ಲ , ಈಗೀರುವಾಗ ಬೆಂಗಳುರಿಗೆ ೪೦ಟಿಎಂ.ಸಿ ನೀರು ಅಗತ್ಯವಿದ್ದು ಇದಕ್ಕಾಗಿ ಮತ್ತೆ ದೊಡ್ಡ ಡ್ಯಾಂ ನಿರ್ಮಾಣವಾಗಬೇಕಿದ್ದು ಮತ್ತೆ ಅನೇಕ ರೈತರ ಫಲವತ್ತಾದ ಕೃಷಿ ಭೂಮಿ ಜಲಾವೃತಗೊಳ್ಳಲಿದೆ. ಇದರಿಂದಾಗಿ ಭೂಮಾಲಿಕರು ಮತ್ತೆ ಸಂಕಷ್ಟಕ್ಕೆಗೊಳಗಾಗಲಿದ್ದು ಸರಕಾರ ಪರಿಹಾರ ನೀಡದೆ ಕತ್ತಲಲ್ಲಿಡುತ್ತದೆ , ಪ್ರಸ್ತುತ ಮಂಗಳೂರಿಗೆ ಕುಡಿಯುವ ನೀರು ಪೂರೈಸಲು ಸಾಕಷ್ಟು ಹಣವಿಲ್ಲದೆ ರೈತರ ಪರಿಹಾರ ನೆನೆಗುದಿಗೆ ಬಿದ್ದಿದೆ. ಇನ್ನು ಮಂಗಳುರಿನಿಂದ ಬೆಂಗಳೂರಿಗೆ ನೀರು ಪೂರೈಸಲು ಹೋಗಿ ಅದೆಷ್ಟೋ ರೈತರ ಭೂಮಿ ಕಸಿದುಕೊಂಡು ರೈತರಿಗೆ ಪರಿಹಾರ ನೀಡದೆ ಅತನ ಜೀವನದಲಲಿ ಚೆಲ್ಲಾಟವಾಡುವುದು ಸರಿಯಲ್ಲ, ಭೂಪರಿಹಾರಕ್ಕೆ ಅನುದಾನವಿಟ್ಟು ಬಳಿಕ ಯೋಜನೆಯನ್ನು ಜಾರಿ ಮಾಡಿ ಎಂದು ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್, ಕಾರ್‍ಯದರ್ಶಿ ಇದಿನಬ್ಬ, ಕರ್ನಾಟಕ ರೈತ ಸಂಘ ಹಸಿರು ಸೇನೆಜಿಲ್ಲಾ ಕಾರ್‍ಯದರ್ಶಿ ಮನೋಹರ ಶೆಟ್ಟಿ, ತಾಲೂಕು ಅಧ್ಯಕ್ಷ ಶರತ್ ಶೆಟ್ಟಿ, ಕಾರ್‍ಯದರ್ಶಿ ಸುದೇಶ್ ಮಯ್ಯ ಸಂಯುಕ್ತವಾಗಿ ಆಗ್ರಹಿಸಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ