ಪ.ಗೋ. ಅಂಕಣ

ವಿಶೇಷ ಸೃಷ್ಟಿಗಳ ಲೋಕದಲ್ಲಿ–ಅಂಕಣ15: ‘ಬ್ಯಾಂಗಳೂರ್ ! ಬಾಯ್ ಬಾಯ್ ಟು ಯೂ’

ವಿಶೇಷ ಸೃಷ್ಟಿಗಳ ಲೋಕದಲ್ಲಿಅಂಕಣ15: ‘ಬ್ಯಾಂಗಳೂರ್ ! ಬಾಯ್ ಬಾಯ್ ಟು ಯೂ
ಗಳಿಸಿಕೊಳ್ಳುತ್ತಿದ್ದ ಅನುಭವ, ಬೆಳೆಸಿಕೊಂಡ ವ್ಯಕ್ತಿ ಪರಿಚಯಇವೆರಡು ಹಿನ್ನೆಲೆಗೆ ಆಗತಾನೇ ಹೊರಬಿದ್ದಿದ್ದ ಪತ್ರಕರ್ತರ ವೇತನ ಮಂಡಳಿ ಶಿಫಾರಸ್ಸುಗಳಆಮಿಷಕೂಡಾ ಸೇರಿಕೊಂಡಿತು. ಉದ್ಯೋಗದ ಭದ್ರತೆ ಮತ್ತು ಆದಾಯದ ಹೆಚ್ಚಳಗಳು ಅನಿವಾರ್ಯ ಅವಶ್ಯಕತೆಗಳೆನಿಸಿದವು.
ಹಾಗಾಗಿ, ಒಂದು ದಿನ ಕೌಜಲಗಿಯವರ ಚೇಂಬರ್ ಪ್ರವೇಶಿಸಿದೆ. ‘ಬೇಕಾದರೆ, ತಿಂಗಳ ಸಂಬಳದಲ್ಲಿ 10ರೂ. ಕಡಿಮೆ ಮಾಡಿಯಾದರೂ ಸಿಬ್ಬಂದಿ(ಸ್ಟಾಫ್)ಗೆ ಸೇರಿಸಿಕೊಳ್ಳಿ ಎಂಬ ಅಹವಾಲು ಮಂಡಿಸಿದೆ. ‘ನೋಡೋಣಎಂಬ ಹಾರಿಕೆ ಉತ್ತರ ಸಿಕ್ಕಿತು. ಒಂದು ಮಾತು ಹೇಳಬಲ್ಲ ರಾವ್ ಬಹಾದ್ದೂರ, ಮಾ.ನಾ.ಚೌ. ಅವರಿಂದಲೂ ಅದೇ ಉತ್ತರದ ಇನ್ನೆರಡು ರೂಪಗಳು.
ಈ ನಡುವೆ, ನವಭಾರತ ಪತ್ರಿಕೆಯು ಬೆಂಗಳೂರಿನಲ್ಲಿ ತೆರೆದಿದ್ದಪಕ್ಕಾಕಚೇರಿಯ ಒಳಗಿದ್ದವರ ಪರಿಚಯವೂ ಆಗಿತ್ತು.ಪತ್ರಿಕೆಯ ಸಂಪಾದಕ ಯು.ಎಸ್.ಕುಡ್ಡರವರು ತಮ್ಮ ಬೆಂಗಳೂರು ಭೇಟಿಯ ವೇಳೆ ನಡೆಸಿದ್ದ ಒಂದು ಪತ್ರಿಕಾಗೋಷ್ಠಿಯಲ್ಲಿ ಲಕ್ಷಗಟ್ಟಲೆ ಸುರಿದು ಪ್ರಾರಂಭಿಸಿದ್ದ ಪತ್ರಿಕೆಗಳೂ ಕಣ್ಣಿಗೆ ಕಾಣುವ ಆದಾಯ ಪಡೆಯಬೇಕಾದರೆ ಕನಿಷ್ಟ ಐದು ವರ್ಷಗಳಾದರೂ ಕಾಯಬೇಕು ಎಂಬ ರಾಜಧಾನಿಯ ಹಿರಿಯ ಪತ್ರಕರ್ತರ ಅನುಭವದ ಸಲಹೆಗೆಎಂಥಾದ್ದಯ್ಯಾ ನೀವು ಹೇಳುವುದು? ನಾನು ಪೇಪರ್ ಶುರು ಮಾಡಿದ್ದ ದಿವಸದಿಂದ್ಲೂ ಪ್ರಾಫಿಟ್ ನಲ್ಲೇ ನಡಿಸ್ತಾ ಇದ್ದೇನೆ. ಒಂದೇ ಒಂದು ಪಾವಾಣೆ ಕೂಡಾ ಕಳ್ಕೊಂಡಿಲ್ಲ.ಗೊತ್ತುಂಟೊ?” ಎಂದು ಎಸೆದಿದ್ದ ಸವಾಲಿನ ನೆನಪೂ ಆಗಾಗ ಆಗುತ್ತಿತ್ತು.
ಆರ್ಥಿಕ ಭದ್ರತೆಯುಳ್ಳ ನವಭಾರತವನ್ನು ಸೇರಿಕೊಂಡರೆ ಹೇಗೆ ? ಪತ್ರಿಕೆಯ ಬೆಂಗಳೂರು ಪ್ರತಿನಿಧಿ ಮಿತ್ರರನ್ನೇ ಪ್ರಶ್ನಿಸಿದೆ. ಈ ಆಫೀಸಿನ ಕೆಲಸಕ್ಕೆ ಪ್ರಯತ್ನಿಸಿ ಪ್ರಯೋಜನವಿಲ್ಲ. ಅಲ್ಲೆ ಹೋಗಿ ಸೇರುವ ಪ್ರಯತ್ನ ಬೇಕಾದರೆ ಮಾಡಿ ಎಂದು ಅವರು ಮರಳಿ ಮಣ್ಣಿಗೆ ಕಳುಹಿಸುವ ಸಲಹೆ ನೀಡಿದರು.
(ನಾನು ಅವರ ಕುರ್ಚಿಗೇ ಬತ್ತಿ ಇಡುವ ಅಂದಾಜಿನಲ್ಲಿ ಇರಬಹುದೆಂಬ ಭಯವೂ ಒಮ್ಮೆಗೆ ಹುಟ್ಟಿತ್ತು ಎಂದು ಅವರೇ ಅನಂತರ ಒಂದು ಸಂದರ್ಭದಲ್ಲಿ ಬಾಯಿ ಬಿಟ್ಟರು.)
ಮರುದಿನವೇ, ಸಲಹೆ ಇತ್ತವರಲ್ಲಿ ಸಮಾಲೋಚನೆ ಕೂಡಾ ಮಾಡದೆ, ಒಂದು ಶಿಫಾರಸ್ಸು ಪತ್ರವನ್ನುಮದರಾಸಿನಿಂದ ಶಾಸಕನಾಗಿಯೇ ಮೈಸೂರಿಗೆ ವರ್ಗವಾದವೈಕುಂಠ ಬಾಳಿಗರಿಂದ ಪಡೆಯಲು ಹೊರಟೆ. (ನವಭಾರತ ಕಾರ್ಯಾಲಯದ ಎದುರಿಗೇ ಬಾಳಿಗರ ಮಂಗಳೂರು ಮನೆ ಇರುವುದು ಗೊತ್ತಿತ್ತು.) ನಾನು ಅವರ ಬೆಂಗಳೂರು ಮನೆಯ ಕರೆಗಂಟೆ ಬಾರಿಸಿದಾಗ ಅವರು ಮಂತ್ರಿ ಪದವಿಗೇರಿರಲಿಲ್ಲ, ಶಾಸಕರಾಗಿಯಷ್ಟೇ ಉಳಿದಿದ್ದರು.
ರಾಮಕೃಷ್ಣ ಹೆಗಡೆಯವರಿಂದ ಪಡೆದಿದ್ದ ಪರಿಚಯ ಪತ್ರವನ್ನು ಅವರ ಮುಂದೆ ಇರಿಸಿ ನನ್ನ ವಿನಂತಿಯನ್ನು ಮಂಡಿಸಿದಾಗನನ್ನ ಶಿಫಾರಸ್ಸೇನೂ ಬೇಕಾಗಿಲ್ಲ, ಅಲ್ಲಿ ಕೆಲಸ ಖಾಲಿಯಿದ್ದರೆ ಸಿಕ್ಕಿಯೇ ಸಿಕ್ಕೀತುಎಂಬ ಮಾತು ಕೇಳಿನೇರ ಕಾರ್ಯಾಚರಣೆ ಮಾತ್ರವೇ ಇನ್ನುಳಿದಿರುವ ದಾರಿಎಂದು ತೀರ್ಮಾನಿಸಿದೆ.
ಹೇಗಿದ್ದರೂಘಟ್ಟ ಬಿಟ್ಟುಕೆಳಗಿಳಿಯಲಿದ್ದೇನೆ, ತೀರಿಸಬೇಕಾದ ಮಾತಿನ ಬಾಕಿಯನ್ನು ತೀರಿಸಲೇಬೇಕು ಎಂಬ ನಿರ್ಧಾರ ಎಂದಿನದಲ್ಲದ ಧೈರ್ಯ ಕೊಟ್ಟಿತ್ತು. ಅವಕಾಶ ಸಿಕ್ಕ ಕೂಡಲೆ, ಬರಬೇಕಾಗಿದ್ದಸಂಭಾವನೆಪಡೆದುಕೊಂಡು, ನನ್ನ ಪರಒಂದೇ ಒಂದು ಮಾತುಹೇಳಲು ಹಿಂಜರಿದ ಘನವಂತರ ಪೈಕಿ ಒಬ್ಬರಲ್ಲಿ ನನ್ನ ನೇಮಕಾತಿಗೆ ಅಡ್ಡವಾದ ನಿಜ ಕಾರಣ ಗೊತ್ತಾಗಲೇಬೇಕೆಂಬ ಪಟ್ಟಿ ಹಿಡಿದೆ. ಕ್ಷುಲ್ಲಕ ವಿಷಯವಾದ ಬ್ರಾಹ್ಮಣ ತ್ರಿಮಸ್ಥರ ಭೇದವೇ ನನ್ನನ್ನು ನೌಕರಿಯಿಂದ ದೂರ ಮಾಡಿತ್ತೆಂಬ ಖಚಿತ ಸುಳಿವು ಸಿಕ್ಕಿತು.
ಆದರೆ ಅದರಿಂದಾಗಿ ಏನೂ ಬೇಸರವಾಗಲಿಲ್ಲ. ಹೇಗೂ ಗಂಟುಮೂಟೆ ಕಟ್ಟಲು ತಯಾರಾಗಿ ನಿಂತಿದ್ದೇನೆ. ಈ ಮತಭೇದ ಮೃತ್ತಿಕೆಯಲ್ಲಿ ಮುಳುಗಿದರೂ, ವಿಭೂತಿ ವಿಲೀನವಾದರೂ, ಅವೆರಡೂ ಅಲ್ಲದ ಅಪಸ್ಮಾರ್ತವಾದರೂ ಈಗ ನನಗೇನು ?ಎಂದುಕೊಂಡೇ ಅಲ್ಲಿಂದ ಹೊರಟುಬಂದೆ. ಬೆಂಗಳೂರು ಬಿಡುವ ಸಿದ್ಧತೆ ನಡೆಸಿದೆ.
ಪ್ರಯಾಣದ ವೆಚ್ಚದಲ್ಲಿ ಸ್ವಲ್ಪವನ್ನಾದರೂ ಉಳಿಸುವ ದಾರಿ ಹುಡುಕುತ್ತಿದ್ದಾಗ, ಬೆಂಗಳೂರಿಗೆ ಅಕಸ್ಮಾತ್ ಭೇಟಿ ನೀಡಿದ್ದ ನನ್ನ ಚಿಕ್ಕಮ್ಮನ ಮೈದುನ ದೇಲಂತ ರಾಮಕೃಷ್ಣ ಭಟ್ಟರು ಕಾಣಸಿಕ್ಕಿದರು. ನನ್ನ ಬೇಡಿಕೆಯನ್ನು ಮನ್ನಿಸಿ ನನ್ನ ಸಂಸಾರವನ್ನೂ ತನ್ನ ಜೀಪಿನಲ್ಲೇ ಊರುಮನೆಯವರೆಗೆ ಸಾಗಿಸಲು ಒಪ್ಪಿದರು.
ಅಂತೆ, ಒಂದು ಮುಂಜಾನೆಬ್ಯಾಂಗಳೂರ್ ! ಬಾಯ್ ಬಾಯ್ ಟು ಯೂಎಂದು ಘೋಷಿಸಿ ಹೊರಟಾಗ ನನ್ನ ನೆನಪಿನ ಬುಟ್ಟಿ ಪೂರ್ತಿಯಾಗಿ ತುಂಬಿದ್ದು, ..ದ ಕಾರ್ಯಾಚರಣೆಯ ರೂಪುರೇಷೆಯೂ ಸಿದ್ದವಾಗುತ್ತಿತ್ತು.
ಆಗಿನ್ನೂ ಬೆಂಗಳೂರಿನಿಂದ ಹಾಸನವಾಗಿ ಮಂಗಳೂರಿಗೆ ಬರುವ ರಸ್ತೆಹೆದ್ದಾರಿಯಾಗಿರಲಿಲ್ಲ. ಮೈಸೂರುಮಡಿಕೇರಿಗಳಿಗಾಗಿಯೇ ಮಂಗಳೂರಿಗೆ ಬರಬೇಕಾಗಿತ್ತು.
ಚಿಕ್ಕಪ್ಪರಾಮಕೃಷ್ಣ ಭಟ್ಟರೇ ನಡೆಸುತಿದ್ದ ಜೀಪ್ ಸಾಗುತ್ತಿದ್ದ ಹಾಗೆ ಅವರೊಂದಿಗೆ ಕುಶಲ ಸಂಭಾಷಣೆ ಮಾಡುವ ಅವಕಾಶ ಸಿಗುತ್ತಿರಲಿಲ್ಲ. ಅದುವರೆಗಿನ ಬೆಂಗಳುರು ಅನುಭವಗಳನ್ನೇ ಮೆಲುಕು ಹಾಕುವುದರಲ್ಲಿ ಕಾಲ ಕಳೆಯಬೇಕಾಗುತ್ತಿತ್ತು.ಅಷ್ಟುದೂರದ ಪಯಣ ಮಾಡಿ, ಅಭ್ಯಾಸವಿಲ್ಲದ ನನ್ನವಳೂಅಸೌಖ್ಯದ ಅರೆಮಂಪರಿನಕಾರಣ ಮೌನವಾಗಿಯೇ ಕುಳಿತಿದ್ದುದೂ ನೆನಪಿನ ಮೆಲುಕಾಟಕ್ಕೆ ಇನ್ನೊಂದು ಕಾರಣವಾಗಿತ್ತು.
ಮೈಸೂರಿನಿಂದ ಮುಂದೆ ಬರುತ್ತಿದ್ದಂತೆ, ಅದುವರೆಗೆ ಆಗಿದ್ದ ಗಳಿಕೆಯ ಲೆಕ್ಕ ಹಾಕತೊಡಗಿದೆ.
ವೃತ್ತಿ ನಿಪುಣರಾದ ಹಲವರ ಪರಿಚಯ, ಅವರ ಕಾರ್ಯವೈಖರಿಯ ಗುರುತು ಮತ್ತು ರಾಜಕೀಯೇತರ ಅಧಿಕಾರೂಢರಲ್ಲಿ ಹಲವರ ವ್ಯಕ್ತಿತ್ವ ಸ್ವಭಾವ ತಿಳುವಳಿಕೆ
ಆಡಳಿತ ಯಂತ್ರದ ಮತ್ತು ವಿಧಾನಮಂಡಲದ ಕಾರ್ಯಕಲಾಪಗಳ ಪಕ್ಷಿನೋಟಇವೆಲ್ಲವುಗಳು ಮನಸ್ಸಿನಲ್ಲಿ ಅಚ್ಚೊತ್ತಿದ್ದವು.
ಅಂತೆಯೇ, ಪತ್ರಿಕೋದ್ಯಮಿಯ ಸಾಮಾಜಿಕ ವರ್ತನೆಯಲ್ಲಿ ಅವನು, ತನ್ನ ಸ್ಥಾನಮಾನವನ್ನು ಉನ್ನತ ಮಟ್ಟದಲ್ಲಿ ಉಳಿಸಿಕೊಳ್ಳಬೇಕಾದರೆ ಮಾಡಬೇಕಾದತ್ಯಾಗಗಳೇನು ಎಂಬುದರ ಕಲ್ಪನೆಯೂ ಸ್ಪಷ್ಟವಾಗಿತ್ತು.
ವೃತ್ತಿಯಲ್ಲಿ, ಬದ್ಧ್ತೆಯಂತೂ ಬರಲೇಬೇಕು. ದಿನಕ್ಕೊಂದರಂತೆ ಮೂಡಿ ಬರುವ ಸಿದ್ಧಾಂತಗಳನ್ನು ನಿರ್ಲಿಪ್ತದೃಷ್ಟಿಯಿಂದ ವಿಶ್ಲೇಶಿಸುವ ಶಕ್ತಿಯನ್ನು ಉಳಿಸಿಕೊಳ್ಳಬೇಕು ಎಂಬ ತೀರ್ಮಾನವು ಮೂಡಿತ್ತು.
ದಾರಿ ಇಡೀ, ಆಗಾಗ ಒದ್ದಾಡುತ್ತಿದ್ದ ನನ್ನ ಸಹ ಪ್ರಯಾಣಿಕಳನ್ನು ಸಾಂತ್ವನಗೊಳಿಸುವ ಸಂದರ್ಭ ಬಂದಾಗಲಷ್ಟೇ ನನ್ನ ಯೋಚನಾಲಹರಿಗೆ ತಡೆಯಾಗುತ್ತಿದ್ದುದು.
ಪ್ರಯಾಣವನ್ನುಹೇಗಾದರೂಮಾಡಿ ಪೂರೈಸಿ, ಊರುಮನೆಗೆ ನಾವು ಬಂದು ಮುಟ್ಟಿದಾಗ ಸರಿರಾತ್ರಿಯಾಗಿತ್ತು. ಎಡೆಬಿಡದೆ ಸುರಿಯುತ್ತಿದ್ದ ಮಳೆ, ಜೀಪಿನಿಂದ ಸಾಮಾನುಗಳನ್ನು ಇಳಿಸಿಕೊಳ್ಳಲು ತಗಲಿದ ಕೆಲವೇ ನಿಮಿಷಗಳಲ್ಲಿ ನಮ್ಮಿಬ್ಬರನ್ನೂ ಸಂಪೂರ್ಣ ಒದ್ದೆಮಾಡಿತ್ತು.
ದೂರದೂರಿನಲ್ಲೇ ಅದುವರೆಗೂ ಉಳಿದಿದ್ದವನು ಹೆಂಡತಿಯನ್ನು ಕಟ್ಟಿಕೊಂಡು ಇದ್ದಕ್ಕಿದ್ದ ಹಾಗೆ ಹುಟ್ಟೂರಿಗೆ ಬಂದಿಳಿದುದನ್ನು ಕಂಡ, ನನ್ನ ಕುಟುಂಬದ ಇತರ ಸದಸ್ಯರಿಂದ ಹಾರ್ದಿಕ ಸ್ವಾಗತವೇನೂ ದೊರೆಯಲಿಲ್ಲ. ಆದರೆಒಳಗೆ ಬರಬೇಡಎಂದು ಹೇಳುವಷ್ಟರ ಮಟ್ಟಿಗೆ ಅವರು ಮುಂದುವರಿಯಲೂ ಇಲ್ಲ.
ಮುಂದೇನು ಮಾಡಬೇಕೆಂದಿರುವೆ ? ಎಂಬ ಪ್ರಶ್ನೆಯನ್ನೆತ್ತಲು ಅವರು ಎರಡು ದಿನಗಳಷ್ಟಾದರೂ ಸಮಯ ತೆಗೆದುಕೊಂಡಿದ್ದಕ್ಕೆ ಆಭಾರಿಯಾಗಬೇಕಾದ ಪರಿಸ್ಥಿತಿ ನನ್ನದಾಗಿತ್ತು. ‘ನಿಮಗಿಲ್ಲಿ ಹೊರೆಯಾಗಿ ಉಳಿಯುವ ಅಂದಾಜು ಮಾಡಿ ಬಂದಿಲ್ಲ. ಇಲ್ಲೇ ಉಳಿದು ಬುದ್ಧಿಗೆ ತುಕ್ಕು ಹಿಡಿಸಿಕೊಳ್ಳುವ ಜಾಯಮಾನವೂ (ಈಗ) ನನಗಿಲ್ಲ. ಇನ್ನು ಒಂದು ವಾರದೊಳಗೆ ಮಂಗಳೂರಿನಲ್ಲಿ ಉದ್ಯೋಗ ದೊರಕಿಸಿಕೊಳ್ಳಲಿದ್ದೇನೆಎಂದು ನೀಡಿದ ಭರವಸೆಯ ಪ್ರಕಾರವೇ
ಪತ್ನಿಯನ್ನು ಊರಿನಲ್ಲೇ ತಾತ್ಕಾಲಿಕವಾಗಿ ಬಿಟ್ಟು ಮಂಗಳುರು ಬಸ್ಸನ್ನು ಮತ್ತಿನ ಮೂರು ದಿನಗಳಲ್ಲಿ ಏರಿದೆ.
(ಮುಂದಿನ ಭಾಗದಲ್ಲಿ)

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ 15ನೇ ಕಂತು .  ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಲೇಖಕ ಪ.ಗೋ. ಅವರದ್ದು.. ಇದು ಹೊಸ ದಿಗಂತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಬಳಿಕ 2005ರಲ್ಲಿ ಪುಸ್ತಕರೂಪದಲ್ಲಿ ಹೊರಬಂದ ಲೇಖನಮಾಲೆಯ ಮರುಪ್ರಕಟಣೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts