ಎಲ್ಲಾ ಜಾತಿ, ಭಾಷೆ, ಧರ್ಮದ ಜನರು ಒಂದಾಗಿದ್ದರೆ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ, ಇಲ್ಲವಾದಲ್ಲಿ ದೇಶಕ್ಕೆ ದೊಡ್ಡ ಆಪತ್ತು ಎದುರಾದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಭಾನುವಾರ ನಡೆದ ಬಂಟ್ವಾಳ ಜೈನ್ ಮಿಲನ್ ಮತ್ತು ಯುವ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಯುವ ಜೈನ್ ಮಿಲನ್ ಪದಗ್ರಹಣ, ಪ್ರತಿಷ್ಠಿತ ಆಟಿಡೊಂಜಿ ಕೂಟ – ಪಾರಂಪರಿಕ ಆಟಿ ತಿಂಗಳ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ , ಭಾರತೀಯ ಜೈನ್ ಮಿಲನ್ ವಲಯ ೮ ರ ಉಪಾಧ್ಯಕ್ಷ ಪುಷ್ಪರಾಜ್ ಜೈನ್, ವಲಯ ೮ ರ ಯುವ ಮಿಲನ್ ಅಧ್ಯಕ್ಷ ಜಿತೇಶ್ ಜೈನ್, ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ವಲಯ ೮ ಜೈನ್ ಮಿಲನ್ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಸಂತೋಷ್ ಜೈನ್, ನಿರ್ದೇಶಕ ಸುದರ್ಶನ್ ಜೈನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.
ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಬ್ರಿಜೇಶ್ ಜೈನ್ ಬಾಳ್ತಿಲ ಬೀಡು ಅಧ್ಯಕ್ಷತೆ ವಹಿಸಿದ್ದರು. ಚಾತುರ್ಮಾಸ ಸಮಿತಿ ಅಧ್ಯಕ್ಷ ರತ್ನಾಕರ ಜೈನ್, ಯುವಮಿಲನ್ ಅಧ್ಯಕ್ಷ ಪಾಂಡಿರಾಜ್ ಜೈನ್, ಕಾರ್ಯದರ್ಶಿ ಸುಜನ್ ಕುಮಾರ್ ಸಿದ್ದಕಟ್ಟೆ ನೇತೃತ್ವದ ಯುವಮಿಲನ್ ಪದಾಧಿಕಾರಿಗಳ ಪದಗ್ರಹಣವೂ ಇದೇ ಸಂದರ್ಭ ನಡೆಯಿತು.
ಸಮಾರಂಭದಲ್ಲಿ ೨೦೧೭ ನೇ ಸಾಲಿನ ಮಿಲನೋತ್ತಮ ಪ್ರಶಸ್ತಿಯನ್ನು ಸಿದ್ದಕಟ್ಟೆಯ ಡಾ.ಸುದೀಪ್ ಹಾಗೂ ಡಾ ಸೀಮಾ ಸುದೀಪ್ ದಂಪತಿಗಳಿಗೆ ಪ್ರದಾನ ಮಾಡಲಾಯಿತು. ಪಾಕಶಾಸ್ತ್ರ ಪ್ರವೀಣ್ ಪ್ರಶಸ್ತಿಯನ್ನು ಜಯರಾಜ ಪಕ್ಕಳ ರವರಿಗೆ ನೀಡಲಾಯಿತು.
ಮನ್ಮಥ ರಾಜ್ ಕಾಜವ ಸ್ವಾಗತಿಸಿ, ಗೀತಾ ಜಿನಚಂದ್ರವಂದಿಸಿದರು. ಭರತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.