ಮಹಾ ಮಾನತಾವಾದದ ಮೇರು ಸಂದೇಶ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವ ಜನಾಂಗಕ್ಕೆ ಹೊಸ ದಾರಿ ತೋರಿದವರು. ಸಮಾಜದ ಒಳಿತಿಗಾಗಿ ದುಡಿದವರು. ಅವರ ಸಂದೇಶದ ಅನುಷ್ಟಾನ ಮಾಡುತ್ತಿರುವ ಯುವವಾಹಿನಿಯಂತಹ ಯುವಶಕ್ತಿ ಸಮಾಜದ ಆದರ್ಶ ಸಂಘಟನೆಯಾಗಿದೆ ಎಂದು ಪುರೋಹಿತರಾದ ಕೇಶವ ಶಾಂತಿ ನಾಟಿ ತಿಳಿಸಿದರು.
ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಅಜೆಕಲದ ಅಕ್ಕಮ್ಮ ಎಂಬ ತೀರಾ ಬಡ ಕುಟುಂಬಕ್ಕೆ ೬೫೦ ಚ.ಅ.ಗಳ ಸುಮಾರು ರೂ. ೪.೫ ಲಕ್ಷ ವೆಚ್ಚದ ನೂತನ ಮನೆ ಹಸ್ತಾಂತರ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ಸೇಸಪ್ಪ ಕೋಟ್ಯಾನ್ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ಹಸ್ತಾಂತರ ಮಾಡುವ ಮೂಲಕ ಸಾಂಕೇತಿಕವಾಗಿ ಮನೆ ಹಸ್ತಾಂತರ ಮಾಡಲಾಯಿತು.
ಉದ್ಯಮಿ ಜಗದೀಪ್ ಡಿ. ಸುವರ್ಣ ಬ್ರಹ್ಮಶ್ರೀ ನಿಲಯ ನಾಮ ಫಲಕ ಅನಾವರಣಗೊಳಿಸಿದರು. ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಬಿರ್ವ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಯುಶವಂತ ಪೂಜಾರಿ, ಬಂಟ್ವಾಳ ಜೆಸಿಐ ಮಾಜಿ ಅಧ್ಯಕ್ಷ ಲೋಕೇಶ ಸುವರ್ಣ ಬಂಟ್ವಾಳ, ಬಿರುವೆರ್ ಕುಡ್ಲ (ರಿ) ಇದರ ಸಂಸ್ಥಾಪಕರಾದ ಅಭಿಷೇಕ್ ಅಮೀನ್ ಹಾಗೂ ಬಿರುವೆರೆ ಕುಡ್ಲದ ಅಧ್ಯಕ್ಷ್ ರಾಕೇಶ್ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್, ನಿಯೋಜಿತ ಅಧ್ಯಕ್ಷರಾದ ಲೋಕೇಶ್ ಸುವರ್ಣ ಅಲೆತ್ತೂರು, ಹರೀಶ ಸಾಲ್ಯಾನ್ ಅಜೆಕಳ, ಮಾಜಿ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ಸಲಹೆಗಾರರಾದ ಬಿ. ತಮ್ಮಯ, ಡಾ| ಸದಾನಂದ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.