ಕೇರಳ ಮೂಲದ ಕಾರ್ಮಿಕ ಪತಿ – ಪತ್ನಿ ನಡುವೆ ಮಾತುಕತೆ ನಡೆದು ಪತ್ನಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಾಕಿಕೊಂಡು ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಾಟ ಮಧ್ಯೆ ಮೃತ ಪಟ್ಟಿದ್ದು, ಪಾನಮತ್ತನಾಗಿದ್ದ ಪತಿ ನದಿಗೆ ಹಾರಿ ನೀರು ಕುಡಿದು ಗಂಭೀರ ಸ್ಥಿತಿಯಲ್ಲಿದ್ದಾನೆ.
ಪೆರುವಾಯಿ ಗ್ರಾಮದ ನೆಕ್ಕರೆಕಾಡು ಅಡ್ಕ ಎಂಬಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದ್ದು, ಕೇರಳ ಇಡುಕಿ ಜಿಲ್ಲೆಯ ರಬ್ಬರ್ ತೋಟದಲ್ಲಿ ಕೆಲಸ ಮಾಡುವ ಅನ್ನಮ್ಮ (54) ಮೃತ ಮಹಿಳೆಯಾಗಿದ್ದಾಳೆ. ಅಬ್ರಾಹಾಮ್ ಫಿಲಿಫೋಸ್ ಯಾನೆ ಬಾಬು (59) ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…