ಕಾಮಾಜೆಯಲ್ಲಿರುವ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಎಂಬ ವಿಷಯದ ಬಗ್ಗೆ ತರಬೇತಿ ಶಿಬಿರ ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವೀಸಸ್ ವತಿಯಿಂದ ನಡೆಯಿತು.
ಬಂಟ್ವಾಳನ್ಯೂಸ್ ಸಂಪಾದಕ ಹರೀಶ ಮಾಂಬಾಡಿ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಸ್ತಿಕ ಸಂಸ್ಥೆ ಅಧ್ಯಕ್ಷ ವಿ.ಪಿ.ಭಟ್, ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ವೃದ್ಧಿಸುವ ಕಾರ್ಯ ನಡೆಸಬೇಕು ಎಂದರು.
ಟೈಮ್ ಇನ್ಸ್ಟಿಟ್ಯೂಶನ್, ಮಂಗಳೂರು ಪ್ರಬಂಧಕರಾದ ಆಶಿತ್ ಪೂಜಾರಿ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್‍ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಜಕ್ಕಳ ಗಿರೀಶ್ ಭಟ್, ಸ್ವಸ್ತಿಕಾ ಸಂಸ್ಥೆಯ ಪರಮೇಶ್ವರ ಮೊಯಿಲಿ, ಜಗದೀಶ್ ಹೊಳ್ಳ, ನರಸಿಂಹ ಹೇರ್ಳೆ, ಕಾಲೇಜಿನ ಪ್ರಾಧ್ಯಾಪಕರಾದ ಹೈದರಾಲಿ, ಟೈಮ್‌ಇನ್ಸ್ಟಿಟ್ಯೂಶನ್, ಮಂಗಳೂರು ಸಹಾಯಕರಾದ ರವಿರಾಜ್ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿನಿ ನಿರೀಕ್ಷಿತ ಕಾರ್ಯಕ್ರಮ ನಿರ್ವಹಿಸಿದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)