ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಕಲ್ಲಡ್ಕ ವಲಯ ಕ್ರೀಡಾಕೂಟಕ್ಕೆ ಸಂಬಂಧಿಸಿ ಸಮಿತಿಯ ಅಧ್ಯಕ್ಷ ಗಂಗಾಧರ ರೈ ಮಾಣಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ವಿವಿಧ ಸ್ಪರ್ಧೆಗಳ ಸ್ಥಳ ಮತ್ತು ದಿನಾಂಕವನ್ನು ಈ ಸಭೆಯಲ್ಲಿ ನಿಶ್ಚಯಿಸಲಾಯಿತು.
ವಲಯ ಕ್ರೀಡಾಕೂಟವನ್ನು ನವೆಂಬರ್ ೨ಮತ್ತು ೩ರಂದು ಶ್ರೀರಾಮ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಸುವುದೆಂದೂ, ಪ್ರವೇಶ ಪತ್ರಗಳನ್ನು ಅಕ್ಟೋಬರ್ ೧೦ರೊಳಗೆ ಆಯಾ ಶಾಲೆಗೆ ತಲುಪಿಸುವುದೆಂದೂ ನಿರ್ಣಯಿಸಲಾಯಿತು.
ನಾನಾ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಮತ್ತು ವಿವಿಧ ಕ್ಲಸ್ಟರ್‌ಗಳ ಸಿ.ಆರ್.ಪಿ.ಗಳು ಉಪಸ್ಥಿತರಿದ್ದರು. ಶ್ರೀರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರೂ, ವಲಯ ಕ್ರೀಡಾಕೂಟ ಸಮಿತಿಯ ಗೌರವಾಧ್ಯಕ್ಷ ರಮೇಶ್ ಎನ್. ಮಾರ್ಗದರ್ಶನ ಮಾಡಿದರು.
ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಅಡ್ಯಂತಾಯ ಕಾರ್ಯಕ್ರಮ ನಿರ್ವಹಿಸಿದ ಸಭೆಯಲ್ಲಿ ಶಂಕರ್ ವಿ ಕಲ್ಲಡ್ಕ ಪ್ರಾರ್ಥಿಸಿದರು. ಶಾರೀರಿಕ ಶಿಕ್ಷಣ ಶಿಕ್ಷಕ ಪುರುಷೋತ್ತಮ ಕಲ್ಲಡ್ಕ ಸ್ವಾಗತಿಸಿ, ಶಾರೀರಿಕ ಶಿಕ್ಷಣ ಶಿಕ್ಷಕ ಚಿನ್ನಪ್ಪ ಶಂಭೂರು ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…