ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಸ್ಬಾ ಗ್ರಾಮದ ಎಸ್.ವಿ.ಎಸ್ ಕಾಲೇಜು ರಸ್ತೆ ವೈದ್ಯನಾಥ ದೈವಸ್ಥಾನದ ಬಳಿ ಒಳಚರಂಡಿ ಯೋಜನೆಯ ಚೇಂಬರ್ ಕುಸಿದಿದೆ. ಮಂಗಳವಾರ ಇದನ್ನು ಗಮನಿಸಿದ ಸ್ಥಳೀಯ ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ ಹಾಗೂ ಗೋವಿಂದ ಪ್ರಭು ಪುರಸಭೆಯ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಮತ್ತು ಕರ್ನಾಟಕ ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಶುಭಲಕ್ಷ್ಮಿ ಯವರಿಗೆ ಮಾಹಿತಿ ನೀಡಿ ಶೀಘ್ರ ದುರಸ್ತಿಗೆ ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಪರಸಭೆಯ ಇಂಜಿನಿಯರ್ ಹೊಂಡಕ್ಕೆ ಮರಳು ತುಂಬಿಸಿ ತಾತ್ಕಾಲಿಕ ದುರಸ್ತಿ ಮಾಡಿದರು. ಸ್ಥಳೀಯರಾದ ಭರತ್ ಶೆಟ್ಟಿ, ನಾಗೇಶ್ ಈ ವೇಳೆ ಅಲ್ಲಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)