ವಿಟ್ಲ ರೋಟರಿ ಕ್ಲಬ್ ಪದಗ್ರಹಣ ಸಮಾರಂಭವು ಬೊಬ್ಬೆಕೇರಿ ಗಜಾನನ ಸಭಾಭವನದಲ್ಲಿ ರವಿವಾರ ಜರುಗಿತು.
2018-19ನೇ ಸಾಲಿನ ಗವರ್ನರ್ ರೋಹಿನಾಥ್ ಪಿ. ಅವರು ಪದಗ್ರಹಣ ನೆರವೇರಿಸಿ, ಮಾತನಾಡಿ ರೋಟರಿ ಸದಸ್ಯರು ಪರಸ್ಪರ ಪ್ರೀತಿಯಿಂದ ಇದ್ದು, ಸಮಸ್ಯೆಯನ್ನು ಚರ್ಚಿಸಿ ಪರಿಹರಿಸಿ, ಒಗ್ಗಟ್ಟಿನಿಂದ ಶ್ರಮಿಸಿದಾಗ ಉತ್ತಮ ಸಾಶನೆ ದಾಖಲಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಝೋನ್ 4ರ ಅಸಿಸ್ಟೆಂಟ್ ಗವರ್ನರ್ ಎ.ಎಂ.ಕುಮಾರ್, ಝೋನಲ್ ಲೆಫ್ಟಿನೆಂಟ್ ಲಾರೆನ್ಸ್ ಗೊನ್ಸಾಲ್ವಿಸ್, ಜೆರೋಮ್ ಪಾಯಸ್ ಭಾಗವಹಿಸಿ, ಮಾತನಾಡಿದರು.
ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ ಅಧ್ಯಕ್ಷತೆ ವಹಿಸಿ, ನೂತನ ಅಧ್ಯಕ್ಷ ಸಂಜೀವ ಪೂಜಾರಿ ಎಂ. ಅವರಿಗೆ ಅ„ಕಾರ ಹಸ್ತಾಂತರಿಸಿದರು. ಮಮತಾ ಸಂಜೀವ ಪೂಜಾರಿ, ಮಾಜಿ ಅಧ್ಯಕ್ಷ ಡಿ.ಬಿ.ಅಬೂಬಕ್ಕರ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಕನ್ಯಾನ ಭಾರತ ಸೇವಾಶ್ರಮಕ್ಕೆ ದೇಣಿಗೆ, ನಾಲ್ವರು ಕೊರಗ ವಿದ್ಯಾರ್ಥಿಗಳಿಗೆ ದೇಣಿಗೆ, ವಿಕಲಚೇತನರಿಗೆ ಧನಸಹಾಯ, ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ, ಸಮಾಜಸೇವೆ ಸಲ್ಲಿಸಿದವರಿಗೆ ಸಮ್ಮಾನ ನಡೆಸಲಾಯಿತು. ರೋಟಾ ವಿಶನ್ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಉಪಾಧ್ಯಕ್ಷ ಡಾ| ಚರಣ್ ಕಜೆ, ಸದಸ್ಯರಾದ ಅಣ್ಣಪ್ಪ ಸಾಸ್ತಾನ, ಜಯರಾಮ ರೈ, ಡಾ| ವಿ.ಕೆ.ಹೆಗ್ಡೆ, ಬಾಬು ಕೆ.ವಿ., ಸುಚೇತನ್ ಜೈನ್, ಡಾ| ಜೆಡ್ಡು ಗಣಪತಿ ಭಟ್, ಹಸ್ತಾ ಜೈನ್ ಮೊದಲಾದವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು.ಕಾರ್ಯದರ್ಶಿ ಕಿರಣ್ ಕುಮಾರ್ ಬ್ರಹ್ಮಾವರ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಪ್ರಕಾಶ್ ನಾಯಕ್ ವಂದಿಸಿದರು. ಸ್ಥಾಪಕಾಧ್ಯಕ್ಷ ಭಾಸ್ಕರ ಶೆಟ್ಟಿ ಮತ್ತು ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…