ಬಿ.ಸಿ.ರೋಡಿನ ಕೈಕುಂಜ ಪೂರ್ವ ಬಡಾವಣೆಯ ರಸ್ತೆಯೊಂದರಲ್ಲಿ ಹೊಂಡಗಳು ತುಂಬಿದ್ದು ಸಮಸ್ಯೆಗೆ ಕಾರಣವಾಗಿತ್ತು. ಹಲವು ಬಾರಿ ಸಂಬಂಧಿಸಿದ ಇಲಾಖೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.
ರಸ್ತೆಯಲ್ಲಿ ಸಾರ್ವಜನಿಕ ವಾಹನಗಳು, ಶಾಲಾ ವಾಹನಗಳು ಓಡಾಡುತ್ತಿದ್ದು, ಸಮಸ್ಯೆ ಬಿಗಡಾಯಿಸಿತ್ತು. ಹೀಗಾಗಿ ಕೈಕುಂಜೆ ಪರಿಸರದ ಮಕ್ಕಳು ಭಾನುವಾರದ ರಜೆಯನ್ನು ಹೊಂಡ ಮುಚ್ಚುವ ಮೂಲಕ ಸದುಪಯೋಗಪಡಿಸಿಕೊಂಡರು.
ಕೈಕುಂಜೆ ಪಶ್ಚಿಮ ಬಡಾವಣೆಯಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಯಿಂದ ಹದಗೆಟ್ಟ ರಸ್ತೆ ಇದು. ಸ್ಥಳೀಯ ಪದ್ಮನಾಭ ಮಕ್ಕಳಿಗೆ ಸಾಥ್ ನೀಡಿ, ಕಲ್ಲು, ಜಲ್ಲಿ ತುಂಬುವ ಮೂಲಕ ದುರಸ್ತಿಗೊಳಿಸಲು ಸಹಕರಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…