ಬಂಟ್ವಾಳ

ಹತ್ಯೆಗಳು ನಡೆದ ಸ್ಥಳ ಪರಿಶೀಲಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ದತ್ತ

ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತಾ ಅವರು ಬಂಟ್ವಾಳ ತಾಲೂಕಿನಲ್ಲಿ ನಡೆದ ಎರಡು ಕೊಲೆ ಕೃತ್ಯಗಳು ಸಂಭವಿಸಿದ ಜಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.


ಮೊದಲು ಬೆಂಜನಪದವಿನಲ್ಲಿ ನಡೆದ ರಿಕ್ಷಾ ಚಾಲಕ ಅಶ್ರಫ್ ಹಾಗೂ ಬಿ.ಸಿ.ರೋಡಿನಲ್ಲಾದ ಅರ್ ಎಸ್ ಎಸ್ ಕಾರ್ಯಕರ್ತ ಶರತ್ ಕೊಲೆ ಪ್ರಕರಣದ ಸ್ಥಳ ಪರಿಶೀಲನೆ ನಡೆಸಿ ಬಳಿಕ ವಿಟ್ಲ ಪೊಲೀಸ್ ಠಾಣೆಗೆ ತೆರಳಿ ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷರಾಗಿದ್ದ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಎಡಿಜಿಪಿ ಅಲೋಕ ಮೋಹನ್ , ಐಜಿಪಿ ಹರಿಶೇಖರನ್, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಎಎಸ್ಪಿ ಡಾ.ಕೆ.ಅರುಣ್, ಎಡಿಶನಲ್ ಎಸ್ಪಿ ವಿಷ್ಣುವರ್ಧನ, ಇನ್ಸ್‌ಪೆಕ್ಟರ್ ಬಿ.ಕೆ.ಮಂಜಯ್ಯ ,ಎಸ್ ಐ ರಕ್ಷೀತ್ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.

ಜಾಹೀರಾತು


ಬಿ.ಸಿ.ರೋಡ್ ಉದಯ ಲಾಂಡ್ರಿಗೆ ಬಂದ ಸಂದರ್ಭ ಪಕ್ಕದಲ್ಲೇ ಇರುವ ಪ್ರವೀಣ್ ಅವರನ್ನು ಕರೆದ ಪೊಲೀಸರು ಬಳಿಕ ಹಣ್ಣಿನಂಗಡಿಯ ರವೂಫ್ ಅವರನ್ನೂ ಬರಹೇಳಿದರು. ಈ ಸಂದರ್ಭ ದತ್ತಾ ಅವರಿಗೆ ಮಾಹಿತಿ ನೀಡಿದ ಪ್ರವೀಣ್, ತಾನು ಶರತ್ ಅವರನ್ನು ರಕ್ತದ ಮಡುವಿನಲ್ಲಿ ಬಿದ್ದ ಸಂದರ್ಭ ನೋಡಿದ ವಿಚಾರವನ್ನು ತಿಳಿಸಿದರಲ್ಲದೆ, ಬಳಿಕ ಉಳಿದವರನ್ನೆಲ್ಲ ಕರೆದೆ. ಈ ಸಂದರ್ಭ ಶರತ್ ಅವರನ್ನು ಅವರ ವಾಹನದಲ್ಲೇ ಕೊಂಡೊಯ್ಯಲು ಹೊರಟಾಗ ಅವರ ವಾಹನದ ಕೀಲಿಕೈ ಸಿಗಲಿಲ್ಲ. ಬಳಿಕ ರವೂಫ್ ಅವರ ಆಟೋದಲ್ಲಿ ನಾವೆಲ್ಲರೂ ಶರತ್ ಅವರನ್ನು ತುಂಬೆ ಆಸ್ಪತ್ರೆಗೆ ಕೊಂಡೊಯ್ದುದಾಗಿ ಮಾಹಿತಿ ನೀಡಿದರು.

Video:

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts