ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸೃಜನಶೀಲ ಕಾರ್ಯಕ್ರಮದಡಿ ಬಂಟ್ವಾಳ ಪುರಸಭೆ ಸಹಯೋಗದೊಂದಿಗೆ ತ್ಯಾಜ್ಯ ವಿಲೇವಾರಿ ಕುರಿತು ಅಭಿಯಾನ ನಡೆಯಿತು.
ಬಂಟ್ವಾಳ ಬೈಪಾಸಿನ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಪ್ಲಾಸ್ಟಿಕ್ ಮುಕ್ತ ವಾರ್ಡ್ ನಿರ್ಮಾಣಗೊಳ್ಳಬೇಕಾದರೆ, ಪ್ರತಿ ವಾರ್ಡಿನ ಪ್ರತಿ ಮನೆ ಮತ್ತು ಅಂಗಡಿ ವ್ಯಾಪಾರಸ್ಥರು ಸಹಕರಿಸಬೇಕು. ಪ್ರತಿ ಕುಟುಂಬಗಳಲ್ಲೂ ಈ ಕುರಿತು ಜಾಗೃತಿ ವಹಿಸಬೇಕು. ತ್ಯಾಜ್ಯ ವಿಲೇವಾರಿ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ಮಾತನಾಡಿ, ಪ್ಲಾಸ್ಟಿಕ್ ಎಂಬ ರಾಕ್ಷಸನನ್ನು ಅಳಿಸುವುದು ಸುಲಭವಲ್ಲ. ಇದೊಂದು ರಕ್ತಬೀಜಾಸುರನಂತೆ. ಪ್ರತಿ ಮನೆ ಕಸವನ್ನು ಹಸಿ ಕಸ, ಒಣ ಕಸವಾಗಿ ವಿಂಗಡಿಸಿ ಪುರಸಭಾ ವಾಹನಕ್ಕೆ ನೀಡಬೇಕು ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಸುನೀತಾ ನಾಯಕ್ ಅಭಿಯಾನದ ಮುಂದಿನ ಹಂತದಲ್ಲಿ ಪ್ರತೀ ಮನೆ ಭೇಟಿ ಮಾಡಿ ಸಮೀಕ್ಷೆ ನಡೆಸಲಾಗುವುದು. ಹಾಗೂ ಕರಪತ್ರ ಹಂಚಿಕೆ ಮಾಡಲಾಗುವುದು. ಈ ಸಂದರ್ಭದಲ್ಲಿ ಸದಸ್ಯರು ಸಹಕಾರವನ್ನು ನೀಡುವಂತೆ ತಿಳಿಸಿದರು. ಪುರಸಭಾ ಸದಸ್ಯರಾದ ಬಿ.ವಾಸು ಪೂಜಾರಿ, ಗಂಗಾಧರ್, ವಸಂತಿ ಚಂದಪ್ಪ, ಪ್ರವೀಣ್, ಪುರಸಭಾ ಸಮುದಾಯ ವ್ಯವಹಾರಗಳ ಅಧಿಕಾರಿ ಮತ್ತಡಿ ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಂತಿ ಕಾರ್ಯಕ್ರಮ ನಿರ್ವಹಿಸಿದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…