ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ವತಿಯಿಂದ ಹೆಲ್ತಿ ಕ್ಯಾಂಪಸ್ ಅಭಿಯಾನದ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಫರಂಗಿಪೇಟೆಯ ನಿತ್ಯ ಸಹಾಯ ಪ್ರೌಢ ಶಾಲೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಬಂಟ್ವಾಳ ತಾಲೂಕು ಸಮಿತಿ ಸದಸ್ಯರಾದ ಅಥಾವುಲ್ಲ ನಾಸಿರ್ ಅವರು ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ನಂತರ ವಿದ್ಯಾರ್ಥಿಗಳು ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಸೇರಿ ವಿವಿಧ ತಳಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು ಸಂದರ್ಭ ಶಾಲಾ ಶಿಕ್ಷಕ ವೃಂದ, ಕಾರ್ಯಕರ್ತರಾದ ವಝೀರ್, ರಾಝೀಕ್ ಹಾಗೂ ಸಫ್ವಾನ್ ಉಪಸ್ಥಿತರಿದ್ದರು ಹಮೀದ್ ಸಲ್ಮಾನ್ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…