ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಮಂಗಳವಾರ ಕೊಕ್ಕಡದ ಬಯಲು ಆಲಯದ ಗಣೇಶನ ಕ್ಷೇತ್ರ ಶ್ರೀ ಸೌತಡ್ಕಕ್ಕೆ ಭೇಟಿ ನೀಡಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ ಮಾಜಿ ಮುಖ್ಯ ಮಂತ್ರಿಯವರನ್ನು ಶಾಲು ಹೊದಿಸಿ ಗೌರವಿಸಿದರು. ಸೌತಡ್ಕ ದೇವಳದ ಆಡಳಿತಾಧಿಕಾರಿ ಹರಿಶ್ಚಂದ್ರ , ವೇಣೂರು ಮಹಲಿಂಗೇಶ್ವರ ದೇವಳದ ಆಡಳಿತಾಧಿಕಾರಿ ಡಾ. ಜಯಕೀರ್ತಿ ಜೈನ್ , ರಾಜ್ಯ ವಕೀಲರ ಪರಿಷತ್ ಸದಸ್ಯ ಬೋಜೇ ಗೌಡ ಚಿಕ್ಕಮಗಳೂರು , ಬೆಳ್ತಂಗಡಿ ತಾಲೂಕು ಜೆಡಿಎಸ್ ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್, ಜೆಡಿಎಸ್ ಪ್ರಮುಖರಾದ ಅಡ್ಕಾಡಿ ಜಗನ್ನಾಥ ಗೌಡ ,ಶ್ರೀನಿವಾಸ ಗೌಡ ಪಟ್ರಮೆ , ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಶ್ವನಾಥ ಕೊಲ್ಲಾಜೆ , ಪಿ. ವಿಶ್ವನಾಥ ಶೆಟ್ಟಿ ,ಪ್ರಶಾಂತ ರೈ ಅರಂತಬೈಲು ,ಮತ್ತಿತರರು ಉಪಸ್ಥಿರಿದ್ದರು. ದೇವಳದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಶ್ರೀ ದೇವರಿಗೆ ಸೇವಾ ಪೂಜೆ ಸಲ್ಲಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…