ನಮ್ಮ ಭಾಷೆ

ಅನ್ಯಾಯದ ವಿರುದ್ಧ ಹೋರಾಡಲು ಕರೆ ನೀಡಿದ್ದ ಕೋಟಿ ಚೆನ್ನಯರು

  • ಬಿ.ತಮ್ಮಯ್ಯ
  • ಅಂಕಣ: ನಮ್ಮ ಭಾಷೆ

ತುಳುನಾಡಿನ ಉದ್ದಗಲಕ್ಕೂ ಗರೋಡಿ ಮನೆಗಳು ಮತ್ತು ಕೋಟಿ ಚೆನ್ನಯರ ಆರಾಧನಾ ಗರೊಡಿಗಳು ಅಲ್ಲಲ್ಲಿ ಕಾಣಸಿಗುತ್ತವೆ. ಕೋಟಿ ಚೆನ್ನಯರು ಸಾಯುವಾಗ ಒಂದು ಮಾತು ಹೇಳುತ್ತಾರೆ. ಗರೋಡಿ ಕಟ್ಟಿ ಅಂಗಸಾಧನೆ ಮಾಡಿ ಅನ್ಯಾಯದ ವಿರುದ್ಧ ಹೋರಾಡಿ.

ಅಂದರೆ ಗರೋಡಿಗಳು ಎಂದರೆ ಅಂಗಸಾಧನೆ ಮಾಡುವ ಕೇಂದ್ರಗಳು ಎಂದಾಯಿತು. ಅನ್ಯಾಯದ ವಿರುದ್ಧ ಹೋರಾಡುವ ಸಂದೇಶವನ್ನೂ ಕೊಟ್ಟಿದ್ದಾರೆ. ನಿಮಗೆ ಅನ್ಯಾಯ ಆದಾಗ ವಿರೋಧಿಸಬೇಕಾದರೆ ನಿಮಗೆ ದೇಹಶಕ್ತಿ ಬೇಕು. ಅದು ಇದ್ದರೆ ಮಾತ್ರ ಅನ್ಯಾಯ ತಡೆಯಲು ಸಾಧ್ಯ ಎಂಬ ಸಂದೇಶ ಇಲ್ಲಿದೆ. ನಾವು ಗರೋಡಿ ಕಟ್ಟಿ ಅಂಗಸಾಧನೆ ಮಾಡುವ ಬದಲು ಪೂಜೆ ಮಾಡುತ್ತಿದ್ದೇವೆ. ಪ್ರತಿ ಗರೊಡಿಯ ಎದುರು ಗುರುಕಂಬ ಇದೆ. ಈ ಗುರುಕಂಬವೇ ಹಿಂದೆ ಮಲ್ಲಕಂಬ ಪ್ರದರ್ಶಿಸುವ ಮಲ್ಲಕಂಬ. ಇಡೀ ಭಾರತದೇಶದ ಜನ ಯುದ್ಧವಿದ್ಯೆ ಕಲಿಯಲು ತುಳುನಾಡಿಗೆ ಬರುತ್ತಿದ್ದರು. ಇಲ್ಲಿ ಕಲಿತು ಹೋಗುತ್ತಿದ್ದರು. ಇಲ್ಲಿಯ ಗರೋಡಿಯ ಗುರುಗಳನ್ನು ಬೇರೆ ಭಾಗಕ್ಕೆ ಕರೆದುಕೊಂಡು ಅಲ್ಲಿಯ ಜನರಿಗೆ ಯುದ್ಧಕಲೆಯನ್ನು ಅಭ್ಯಾಸ ಮಾಡಿಸುತ್ತಿದ್ದರು. ಆಗ ತುಳುವರಿಗೆ ಬುದ್ಧಿವಂತರೆಂಬ ಪಟ್ಟ ಸಿಕ್ಕಿತು. ಮರಾಠರಾಜ ಎರಡನೆಯ ಸಂಭಾಜಿಯು ತುಳುನಾಡಿಗೆ ಬಂದಾಗ ಇಲ್ಲಿಯ ಮಲ್ಲಕಂಭ ಪ್ರದರ್ಶನ ನೋಡಿ ಅದರ ಗುರುಗಳನ್ನು ಮರಾಠದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ಮಕ್ಕಳಿಗೆ ಕಲಿಸಿದ. ಮರಾಠದಿಂದ ಗೋವೆ, ಬೆಳಗಾಂಗಳಿಗೆ ಈ ಮಲ್ಲಕಂಭದ ಪ್ರಖ್ಯಾತಿ ಹಬ್ಬಿತು. ಕಲರಿಪಟ್ಟುವಿನಂತೆ ತುಳುನಾಡಿನಲ್ಲಿ ಮಲ್ಲಕಂಭವೂ ನಿಂತಿತ್ತು.

ಗೋವೆಯಲ್ಲಿ ಪೋರ್ಚುಗೀಸರ ಉಪಟಳಕ್ಕೆ ಗೋವೆ ಬಿಟ್ಟು ತುಳುನಾಡಿಗೆ ಬಂದ ಗೌಡಸಾರಸ್ವತರು, ದೇಹದಾರ್ಢ್ಯದ ಅಗತ್ಯ ಕಂಡು ಮಲ್ಲಕಂಭವನ್ನು ತುಳುನಾಡಲ್ಲಿ ಮತ್ತೆ ಪ್ರಚಾರಕ್ಕೆ ತಂದರು. ಬಂಟವಾಳದಲ್ಲಿಯೂ ವ್ಯಾಯಾಮ ಶಾಲೆಯಲ್ಲಿ ಮಲ್ಲಕಂಭ ಕಲೆ ಕಲಿಸಿದರು. ಹೀಗೆ ಮರೆಯಾದ ಮಲ್ಲಕಂಭ ಗೌಡ ಸಾರಸ್ವತ ಬ್ರಾಹ್ಮಣರ ಮೂಲಕ ಮತ್ತೆ ತುಳುನಾಡಿಗೆ ಕಾಲಿರಿಸಿತು. ಈಗ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಕ್ಕಳ ವಾರ್ಷಿಕೋತ್ಸವ ಸಮಯದಲ್ಲಿ ಮಲ್ಲಕಂಭ ಪ್ರದರ್ಶನ ನಡೆಯುತ್ತದೆ. ಬ್ರಿಟಿಷರು ಮತ್ತು ಇತರರ ಕಾರಣದಿಂದ ನಮ್ಮ ತುಳುನಾಡಿನ ಯುದ್ಧಕಲೆಗಳು ಕಣ್ಮರೆಯಾಗಿದೆ ಎಂದು ಬನ್ನಂಜೆ ಬಾಬು ಪೂಜಾರಿಯವರು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ತುಳುವರು ಯುದ್ಧಕಲೆಯನ್ನು ಉಳಿಸಿಕೊಂಡಿದ್ದರೆ, ತುಳುವರ ಬುದ್ಧಿವಂತ ಪಟ್ಟ ಹಾಗೆಯೇ ಉಳಿಯುತ್ತಿತ್ತು.

contact no: B.Tammayya 9886819771

 

B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Recent Posts