ಸುಜಿತ್ ಬಂಗೇರ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಜೂನ್ 17ರಂದು ಪ್ರಚೋದನಕಾರಿ ಸಂದೇಶ ಪ್ರಸಾರ ಮಾಡಿದ ಕುರಿತು ಹಾಗೂ ಉಸ್ಮಾನ್ ಅಭಿಮಾನಿಗಳ ಬಳಗ ಎಂಬ ಹೆಸರಿನಲ್ಲಿ ಸಮೀಹ ಸಲ್ಮಿ ಎಂಬ ಹೆಸರಿನ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಪ್ರಸಾರ ಮಾಡಿದ ಕುರಿತು ಐಪಿಸಿ ಕಲಂ 505(ಸಿ)(1)ರಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಪ್ರಸಾರ ಮಾಡಬಾರದಾಗಿ ಕೋರಲಾಗಿದೆ. ಇಂಥ ಸಂದೇಶಗಳನ್ನು ಕಳುಹಿಸಿದಲ್ಲಿ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ನಿಮ್ಮ ಮೊಬೈಲ್ ಗೆ ಪ್ರಚೋದನಕಾರಿ ಸಂದೇಶ ಬಂದಲ್ಲಿ ಅದರ ಸ್ಕ್ರೀನ್‌ಶಾಟ್ ತೆಗೆದು 9480800941 ಅಥವಾ 9480805300ಗೆ ಫಾರ್ವರ್ಡ್ ಮಾಡಲು ಪೊಲೀಸರು ವಿನಂತಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಭೂಷಣ್ ಜಿ. ಬೊರಸೆ ಕಲ್ಲಡ್ಕದಲ್ಲಿ ನಡೆದ ಶಾಂತಿಸಭೆಯಲ್ಲಿ ಹೇಳಿಕೆ ನೀಡಿ, ಪ್ರಚೋದನಕಾರಿ ಸಂದೇಶ ಹರಡುವುದೂ ಅಪರಾಧ, ಅದರ ವಿರುದ್ಧ ದೂರು ನೀಡಿ ಎಂದಿದ್ದರು. ಅದರ ಪಶ್ಚಾತ್ ಪರಿಣಾಮವಾಗಿ ಎರಡು ಪ್ರಕರಣಗಳು ಬಂಟ್ವಾಳ ನಗರ ಠಾಣೆಯಲ್ಲಿ ಮಂಗಳವಾರ ದಾಖಲಾಗಿದೆ.