ನಿರ್ಮಾಣ ಹಂತದಲ್ಲಿರುವ ಕೆಎಸ್‌ಆರ್ಟಿಸಿ ನೂತನ ಬಸ್ ನಿಲ್ದಾಣದ ಮುಂಭಾಗ ಶುಕ್ರವಾರ ರಾತ್ರಿ ರಾಷ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ರಸ್ತೆ ವಿಭಜನೆ ಮಾಡಿ, ಫ್ಲೈಓವರ್ ನಲ್ಲಿ ದ್ವಿಪಥ ಸಂಚಾರಕ್ಕೆ ಅವಕಾಶ ನೀಡಿದ ಕುರಿತು ಬಂಟ್ವಾಳನ್ಯೂಸ್ ಶುಕ್ರವಾರ ರಾತ್ರಿಯೇ ವರದಿ ಪ್ರಕಟಿಸಿದ್ದನ್ನು ನೀವು ಗಮನಿಸಿರಬಹುದು.
ಶನಿವಾರ ಮಧ್ಯಾಹ್ನವಾಗುವ ಸಂದರ್ಭ ಚಿತ್ರಣವೇ ಬೇರೆ. ಮತ್ತೆ ಹಿಂದಿನ ಸ್ಥಿತಿಗೆ ರಸ್ತೆ ಮರಳಿದೆ.
ಶುಕ್ರವಾರ ರಾತ್ರಿಯೇ ಇದರಿಂದ ಟ್ರಾಫಿಕ್ ಜಾಮ್, ವಾಹನ ಸವಾರರಲ್ಲಿ ಗೊಂದಲ ಉಂಟಾಗಿತ್ತು. ಶನಿವಾರ ಬೆಳಗ್ಗೆ ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಬಂಟ್ವಾಳನ್ಯೂಸ್ ಸಹಿತ ವಿವಿಧ ಮಾಧ್ಯಮಗಳು ಈ ಕುರಿತು ವರದಿ ಪ್ರಕಟಿಸಿ ಗಮನ ಸೆಳೆದಿದ್ದವು. ಇದೀಗ ಶನಿವಾರ ಅಪಾಯಕ್ಕೆ ಆಹ್ವಾನಿಸುವ ರೀತಿಯಲ್ಲಿ ಅಳವಡಿಸಲಾಗಿದ್ದ ರಸ್ತೆ ವಿಭಾಜಕ ಕೋನ್ ನನ್ನು ತೆರವುಗೊಳಿಸಿದೆ. ಸೂಚನಾಫಲಕವನ್ನು ಅಲ್ಲಿಂದ ತೆರವು ಗೊಳಿಸಿ ಮಡಚಿಡಲಾಗಿದೆ.
Yesterdays Report: