ದೇಹವು ಒಂದು ಮನೆ, ಜೀವ-ದೇವನಾಗಲು ಯೋಗ ಬೇಕು. ಇದು ನಾಲ್ಕು ದಿಕ್ಕುಗಳಿಗೂ ಅನ್ವಯವಾಗುತ್ತದೆ. ಮೂಡಣ ದಿಕ್ಕು ರಾಗದ ಸಂಕೇತವಾದರೆ, ಪಶ್ಮಿಮ ರೋಗ, ಉತ್ತರ ಯೋಗ, ದಕ್ಷಿಣವು ಬೋಗದ ಸಂಕೇತ. ಯೋಗದಿಂದ ಸರ್ವರೋಗ ನಿವಾರಣೆಯಾಗುತ್ತದೆ. ಜೀವ ದೇವನ ಸಂಬಂಧದ ಬೆಸುಗೆಯೇ ಯೋಗ. ಇದು ಇನ್ನಷ್ಟು ಬಲಗೊಳ್ಳಲು ಅಷ್ಟಾಂಗಯೋಗವು ಪೂರಕ. ಧರ್ಮಪ್ರೀತಿಯೊಂದಿಗೆ ರಾಷ್ಟ್ರಪ್ರೇಮವು ಎಲ್ಲರಲ್ಲೂ ಬೆಳೆಯಲಿ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಉಚಿತ ಯೋಗ ಶಿಬಿರವನ್ನು ಉದ್ಘಾಟಿಸಿ ಸಂದೇಶ ನೀಡಿದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮತ್ತು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠವು ಜಂಟಿಯಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಒಂದು ವಾರದ ಉಚಿತ ಯೋಗ ಶಿಬಿರವನ್ನು ಪೂಜ್ಯ ಶ್ರೀಗಳವರು ದೀಪೋಜ್ವಲನದೊಂದಿಗೆ ಉದ್ಘಾಟಿಸಿದರು.
ಈ ಸುಸಂದರ್ಭ ಯೋಗ ಶಿಕ್ಷಕರಾದ ಆನಂದ ಶೆಟ್ಟಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ, ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ನೂತನ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಘಟಕದ ಅಧ್ಯಕ್ಷ ಎ. ಅಶೋಕ ಕುಮಾರ್, ಮಂಗಳೂರು ವಲಯದ ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ ಪಟ್ಲಗುತ್ತು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಪಿ. ಲಿಂಗಪ್ಪ ಗೌಡ ಉಪಸ್ಥಿತರಿದ್ದರು.
ರೇಣುಕಾ ಎಸ್.ರೈಯವರ ಪ್ರಾರ್ಥನಾಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸದಾಶಿವ ಅಳಿಕೆ ನಿರೂಪಸಿ, ಧನ್ಯವಾದವಿತ್ತರು.