ಕಲ್ಲಡ್ಕ ಪೇಟೆ ಬುಧವಾರ ಸಹಜ ಸ್ಥಿತಿಗೆ ಮರಳಿತು. ಮಂಗಳವಾರ ಸಂಜೆ ನಡೆದ ಅಹಿತಕರ ಘಟನೆ ಬಳಿಕ ಉಂಟಾಗಿದ್ದ ಆತಂಕ ಇನ್ನೂ ಮರೆಯಾಗದಿದ್ದರೂ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.
ಜನಸಂಚಾರ ವಿರಳವಿತ್ತು. ವಾಹನಗಳು ಎಂದಿನಂತೆಯೇ ಸಂಚರಿಸಿವೆ. ಪೇಟೆ ತುಂಬಾ ಪೊಲೀಸರ ದಂಡು ನೆರೆದಿತ್ತು.ಮಂಗಳವಾರ ನಡೆದ ಘಟನೆ ಕುರಿತು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಎಸ್ಪಿ ಭೂಷಣ್ ಜಿ.ಬೊರಸೆ ಸಹಿತ ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…