ಯಕ್ಷಗಾನ ಕ್ಷೇತ್ರಕ್ಕೆ ಮಾಂಬಾಡಿ ಕುಟುಂಬದ ಕೊಡುಗೆ ಬಹಳಷ್ಟಿದೆ ಎಂದರೆ ನನ್ನ ಪೂರ್ವಜರು, ಸಂಬಂಧಿಕರನ್ನು ನಾನೇ ಹೊಗಳಿದಂತಾಯಿತು ಎಂದುಕೊಳ್ಳಬಹುದು. ಆದರೆ ಇತಿಹಾಸ ಇದನ್ನು ಸಾಬೀತುಪಡಿಸಿದೆ. ಸುಮ್ಮನೆ ಹಾಗೆ ಮನೆಯವರನ್ನೊಮ್ಮೆ ಮಾತನಾಡಿಸಿದಾಗ ಇಡೀ ತೆಂಕುತಿಟ್ಟಿನ ಇತಿಹಾಸದಲ್ಲಿ ಸಾವಿರಕ್ಕೂ ಅಧಿಕ ಹಿಮ್ಮೇಳ ಕಲಾವಿದರಿಗೆ ಜಾಗಟೆ ತಾಳ, ಮದ್ದಳೆ, ಚೆಂಡೆಯನ್ನು ಹೇಗೆ ಹಿಡಿಯಬೇಕು ಎಂದು ಕಲಿಸಿದವರು ನನ್ನ ಅಜ್ಜ ಮತ್ತು ಚಿಕ್ಕಪ್ಪ ಎಂಬುದು ಶ್ರುತವಾಯಿತು. ಸುಮಾರು 1920ರಿಂದ ಇಂದಿನವರೆಗೆ ನನ್ನ ಅಜ್ಜ ಮಾಂಬಾಡಿ ನಾರಾಯಣ ಭಾಗವತರು ಹಾಗೂ ಆ ಬಳಿಕ ನನ್ನ ಚಿಕ್ಕಪ್ಪ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ತೆಂಕು ತಿಟ್ಟು ಯಕ್ಷಗಾನದ ಸಾವಿರಾರು ಹಿಮ್ಮೇಳವಾದಕರನ್ನು ಕಲಾಭೂಮಿಗೆ ಅರ್ಪಿಸಿದ್ದಾರೆ. ಕಳೆದ ನಾಲ್ಕೈದು ದಶಕಗಳಿಂದ ಹಿಮ್ಮೇಳದ ಟಾಪ್ ಭಾಗವತರೆಲ್ಲರೂ ಮಾಂಬಾಡಿ ಶಿಷ್ಯಪರಂಪರೆಗೇ ಸೇರಿದವರು ಎಂಬುದೂ ಸತ್ಯವೇ.  ಇಂದು ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನ ಕಲಿಕೆ ಪಠ್ಯವಾಗುತ್ತಿರುವ ಹೊತ್ತು. ಆದರೆ ನಮ್ಮ ಮನೆಯಲ್ಲಿ ಎಂಭತ್ತು ವರ್ಷಗಳಿಗಿಂತಲೂ ಅಧಿಕ ಯಕ್ಷಗಾನ ಕಲಿಕೆ ಗುರುಕುಲ ಇತ್ತು ಎಂಬುದು ಸಾಮಾನ್ಯ ವಿಷಯವೇನಲ್ಲ. ಅದೂ ಕೆಳಮಧ್ಯಮ ವರ್ಗದ ಕುಟುಂಬದವರಾಗಿದ್ದುಕೊಂಡು, ಆರ್ಥಿಕವಾಗಿ ಬಲಶಾಲಿಯಾಗದೆ, ಬಂದವರನ್ನು ಜಾತಿ ಬೇಧ ಮಾಡದೆ ಸಮಾನವಾಗಿ ಯಕ್ಷಾಭ್ಯಾಸ ನೀಡಿದ ನನ್ನ ಕುಟುಂಬಕ್ಕೆ ಹ್ಯಾಟ್ಸ್ ಆಫ್..

ಜಾಹೀರಾತು

ಇಂದಿನಿಂದ ಅನಿಯಮಿತವಾಗಿ ಮಾಂಬಾಡಿ ಪರಂಪರೆಯ ಹಿನ್ನೋಟ  ಆರಂಭಗೊಳ್ಳುತ್ತದೆ…

ಮಾಂಬಾಡಿ ನಾರಾಯಣ ಭಾಗವತರ ಅಥವಾ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಕುರಿತು ನಿಮಗೆ ಗೊತ್ತಿರುವ ಮಾಹಿತಿಯನ್ನು ನಮಗೆ ಈ ಮೈಲ್ ಮಾಡಿರಿ.

  • ಹರೀಶ ಮಾಂಬಾಡಿ, , ಸಂಪಾದಕ, ಬಂಟ್ವಾಳನ್ಯೂಸ್
  • bantwalnews@gmail.com
  • harishmambady@gmail.com

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.