ಬಂಟ್ವಾಳ ಸರ್ವೀಸ್ ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ನಾನಾ ಸಂಘ, ಸಂಸ್ಥೆಗಳು ಜೂನ್ 13ರಂದು ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಲಿವೆ.
ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ನಿರ್ಮಾಣಗೊಂಡಂದಿನಿಂದ ಸರ್ವೀಸ್ ರಸ್ತೆ ದುರಸ್ತಿ ಕಂಡಿಲ್ಲ. ರಸ್ತೆ ದುರಸ್ತಿಗಾಗಿ ವಾಹನ ಚಾಲಕರು ಪ್ರತಿಭಟನೆ ನಡೆಸಿದಾಗ ತಕ್ಕಮಟ್ಟಿಗೆ ತೇಪೆ ಹಾಕುತ್ತಾರೆ. ಇದು ಒಂದೇ ದಿನದಲ್ಲಿ ಕೆಟ್ಟು ಹೋಗುತ್ತದೆ. ಸರ್ವೀಸ್ ರಸ್ತೆಯನ್ನು ದುರಸ್ತಿಪಡಿಸುವಂತೆ ವಾಹನ ಚಾಲಕರ ಸಂಘಟನೆಗಳು ಮನವಿ ಕೊಟ್ಟರೂ ಯಾವುದೇ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ. ಆದ್ದರಿಂಧ ರಸ್ತೆ ದುರಸ್ತಿಗಾಗಿ 13ರಂದು ಆಟೋ ರಿಕ್ಷಾ ಚಾಲಕ ಮಾಲೀಕರ ಸಂಘ (ಬಿಎಂಎಸ್), ಟೂರಿಸ್ಟ್ ಕಕಾರು ಮತ್ತು ವ್ಯಾನು ಚಾಲಕರ ಸಂಘ, ಬಿ.ಸಿ.ರೋಡ್, ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಚಾಲಕರ ಸಂಘ, ಬಂಟ್ವಾಳ ತಾಲೂಕು, ಸ್ನೇಹಾಂಜಲಿ ಸೇವಾ ಸಂಘ ಅಜ್ಜಿಬೆಟ್ಟು, ಕಟ್ಟೆ ಫ್ರೆಂಡ್ಸ್ ಬಿ.ಸಿ.ರೋಡ್ ಸಾರ್ವಜನಿಕರ ಬೆಂಬಲದೊಂದಿಗೆ 13ರಂದು ಪ್ರತಿಭಟನೆ ನಡೆಸಲಿವೆ.