ಇಡೀ ಬಂಟ್ವಾಳ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಸಣ್ಣಪುಟ್ಟ ಹೊಡೆದಾಟ ಸಹಿತ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಮುಂಜಾಗರೂಕತಾ ಕ್ರಮವಾಗಿ ಸೆ.144ರನ್ವಯ ನಿಷೇಧಾಜ್ಞೆಯನ್ನು ಆಡಳಿತ ಜೂನ್ 16ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಕಳೆದ 13 ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು, ಜೂ.9ರಂದು ಇದು ಕೊನೆಗೊಳ್ಳಬೇಕಿತ್ತು.
ಕಲ್ಲಡ್ಕದಲ್ಲಿ ಮೇ.26ರಂದು ನಡೆದ ಅಹಿತಕರ ಘಟನೆ ಬಳಿಕ ಮೇ 27 ಬೆಳಗ್ಗೆ 9ರಿಂದ ಜೂನ್ 2ರವರೆಗೆ ಸೆ.144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಆದೇಶ ಹೊರಡಿಸಿದ್ದರು. ಬಳಿಕ ಮತ್ತೆ ಜೂನ್ 2ರಿಂದ ಜೂನ್ 9 ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಜೂನ್ 16ವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ.