ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶುದ್ದೀಕರಿಸಿದ ನೀರನ್ನು ಎಲ್ಲ ಜನರಿಗೂ ಒದಗಿಸುವ ರಾಜ್ಯದ ಏಕೈಕ ವಿಧಾನಸಭಾ ಕ್ಷೇತ್ರ ಬಂಟ್ವಾಳವಾಗಲಿದೆ. ಸರಕಾರ 5 ಯೋಜೆನಗಳಿಗೆ ಮಂಜೂರಾತಿ ನೀಡಿದೆ, ಈಗಾಗಲೇ ಕೆಲವೊಂದು ಯೋಜನೆಗಳು ಪ್ರಾಯೋಗಿಕವಾಗಿ ಚಾಲನೆಗೊಂಡಿದ್ದು ಎರಡು ಯೋಜನೆಗಳಿಗೆ ಸರಕಾರ ಹೊಸದಾಗಿ ಮಂಜೂರಾತಿ ನೀಡಿದೆ. ಎಲ್ಲಾ ಯೋಜನೆಗಳು ಅನುಷ್ಠಾನಗೊಂಡ ಬಳಿಕ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಶಾಶ್ವತವಾಗಿ ದೂರವಾಗಲಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
ನಮ್ಮ ಗ್ರಾಮ ನಮ್ಮ ರಸ್ತೆ ಹಂತ 4 ಗಾಂಧಿಪಥ-ಗ್ರಾಮ ಪಥ ಇದರ 2.3 ಕೋಟಿ ರುಪಾಯಿ ಅನುದಾನದಲ್ಲಿ ಜಾರಂದಗುಡ್ಡೆ-ಕನಪಾಡಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕಳ್ಳಿಗೆ ಗ್ರಾಮದ ಬಹುತೇಕ ರಸ್ತೆಗಳು ಅಭಿವೃದ್ದಿಗೊಂಡಿದ್ದು, ನೆತ್ತರೆಕೆರೆ ಸಂಪರ್ಕ ರಸ್ತೆಯ ಅಭಿವೃದಿ ಕಾಮಗಾರಿ ನಬಾರ್ಡ್ ಯೋಜನೆಯ ಮೂಲಕ ಈ ಬಾರಿ ಮಂಜೂರಾತಿಗೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಗಾಂಧಿಪಥ- ಗ್ರಾಮಪಥ ಯೋಜನೆಯಡಿ 7 ರಸ್ತೆಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗಲಿವೆ. ಕಳ್ಳಿಗೆ ಗ್ರಾಮದಲ್ಲಿಯೂ ಶೇ.75ರಷ್ಟು ರಸ್ತೆ ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಂಡಿವೆ. ಇದೆಲ್ಲವೂ ಪ್ರಧಾನಿಗೆ ಪತ್ರ ಬರೆದು ಆಗಿರುವಂತದಲ್ಲ. ಸಚಿವ ರಮಾನಾಥ ರೈ ಅವರ ಪ್ರಯತ್ನದ ಫಲವಾಗಿದೆ ಎಂದರು.
ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಶಿವಪ್ರಸಾದ್ ಕನಪಾಡಿ, ಕಳ್ಳಿಗೆ ಗ್ರಾ.ಪಂ. ಅಧ್ಯಕ್ಷೆ ರತ್ನ, ಉಪಾಧ್ಯಕ್ಷ ಪುರುಷ ಸಾಲ್ಯಾನ್, ಸದಸ್ಯ ಮಧುಸೂದನ್ ಶೆಣೈ, ಯುವಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜನಾರ್ದನ ಚೆಂಡ್ತಿಮಾರ್, ವಿಜಯ್ ಪಚ್ಚಿನಡ್ಕ, ಎಪಿಎಂಸಿ ಸದಸ್ಯ ದಿವಾಕರ ಪಂಬಂಧಬೆಟ್ಟು, ರಾಘವ ಕಾರಂತ, ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅದ್ಯಕ್ಷ ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಶಶಿಧರ ಬ್ರಹ್ಮರಕೂಟ್ಲು, ಸೂರ್‍ಯನಾರಾಯಣ, ಮೋನಪ್ಪ ಮಜಿ, ಗೋಪಾಲಕೃಷ್ಣ ತುಂಬೆ, ಪದ್ಮಾನಾಭ ರಾವ್, ರಮೇಶ್, ನವೀನ್‌ಚಂದ್ರ ಶೆಟ್ಟಿ, ಶಿವರಾಮ ಶಿಬರಾಯ, ಗುತ್ತಿಗೆದಾರ ಪ್ರೇಮನಾಥ ವೇದಿಕೆಯಲ್ಲಿದ್ದರು.
ಸಂತೋಷ್ ಡಿ ಸ್ವಾಗತಿಸಿದರು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಯಾನಂದ ಪೂಜಾರಿ ತಾಂತ್ರಿಕ ಪ್ರಸ್ತಾವನೆ ನೀಡಿದರು. ಮನೋಜ್ ಕನೋಪಾಡಿ ನಿರೂಪಿಸಿ, ವಂದಿಸಿದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)