ಗ್ರಾಮಕರಣಿಕನೊಬ್ಬ ಲಂಚ ಪಡೆಯುತ್ತಿರುವ ಸಂದರ್ಭವೇ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಕ್ಕಿಬಿದ್ದ ಘಟನೆ ಬಿ.ಸಿ.ರೋಡಿನ ತಾಲೂಕು ಕಚೇರಿ ಬಳಿ ನಡೆದಿದೆ.
ಫಜೀರು ಗ್ರಾಮಕರಣಿಕ ಗೋಪಿಲಾಲ್ ಸಿಕ್ಕಿಬಿದ್ದ ವಿಲೇಜ್ ಅಕೌಂಟೆಂಟ್. ನರಿಂಗಾನದಲ್ಲಿರುವ ಐದು ಸೆಂಟ್ಸ್ ಜಾಗದ ಕನ್ವರ್ಷನ್ ಮಾಡುವ ಕುರಿತು ಸುಮಾರು ೪ ತಿಂಗಳ ಮೊದಲು ಪಜೀರು ವಿಲೇಜ್ ಅಕೌಂಟೆಂಟ್ (ಗ್ರಾಮಕರಣಿಕ) ಮುತಲ್ಲಿಬ್ ಎಂಬವರಿಂದ ಮೂರು ಸಾವಿರ ರೂ ಪಡೆದುಕೊಂಡಿದ್ದ. ಆದರೆ ಮತ್ತೆ ನಾಲ್ಕು ಸಾವಿರ ರೂ ಬೇಕು ಎಂದು ಬೇಡಿಕೆ ಇಟ್ಟಿದ್ದ. ಇದರಿಂದ ನೊಂದ ದೂರುದಾರ ಮುತಲ್ಲಿಬ್, ಗೋಪಿಲಾಲ್ ಅವರ ವಿರುದ್ಧ ಎಸಿಬಿಗೆ ದೂರು ನೀಡಿದ್ದರು. ಅವರ ಸೂಚನೆಯಂತೆ ಗುರುವಾರ ಮಧ್ಯಾಹ್ನ ನಾಲ್ಕು ಸಾವಿರ ರೂಗಳನ್ನು ತೆಗೆದುಕೊಂಡು ಬಂದಿದ್ದು, ಗೋಪಿಲಾಲ್ ಪಡೆದುಕೊಳ್ಳುವ ಸಂದರ್ಭ ದಾಳಿ ಮಾಡಲಾಯಿತು. ಬಳಿಕ ಬಿ.ಸಿ.ರೋಡಿನಲ್ಲಿರುವ ಪಾಣೆಮಂಗಳೂರು ನಾಡಕಚೇರಿಯಲ್ಲಿ ಆರೋಪಿಯ ವಿಚಾರಣೆ ನಡೆಯಿತು.
ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಹರಿಪ್ರಸಾದ, ಉಮೇಶ್, ರಾಧಾಕೃಷ್ಣ ಕೆ, ರಾಧಾಕೃಷ್ಣ ಪಿ.ಎ, ಪ್ರಶಾಂತ್, ವೈಶಾಲಿ, ಚಾಲಕರಾದ ರಾಜೇಶ್, ಗಣೇಶ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.
for video Click