‘ ನಾಡಿನ ಕವಿಗಳು ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ತಮ್ಮ ಸಾಮರಸ್ಯದ ಕವಿತೆಗಳ ಮೂಲಕ ಗಣನೀಯ ಕೊಡುಗೆ ನೀಡುತ್ತಿದ್ದಾರೆಂದು ಹವ್ಯಾಸಿ ಪತ್ರಕರ್ತ ಕೆ.ಎ.ಅಬ್ದುಲ್ ಅಝೀಝ್ ಪುಣಚ ಹೇಳಿದ್ದಾರೆ.
‘ ಮಾನವರು ಸಹೋದರರು ಸೌಹಾರ್ದ ಅಭಿಯಾನ’ ದ ಅಂಗವಾಗಿ ಮಂಗಳೂರು ಅಲ್ ರಹಬಾ ಪ್ಲಾಝಾದ ದಿ ಕ್ಯಾಂಪಸ್ ಕೆರಿಯರ್ ಅಕಾಡೆಮಿಯಲ್ಲಿ ರವಿವಾರ ನಡೆದ ಮಾನವರು ಸಹೋದರರು ಸೌಹಾರ್ದ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮೂಲತಃ ಒಂದೇ ತಂದೆ ತಾಯಿಯರ ಸಂತತಿಗಳಾದ ಮಾನವರ ನಡುವೆ ಸೌಹಾರ್ದ ಸಂಬಂಧ ಸ್ಥಾಪಿಸುವ ಸಲುವಾಗಿ ಆರಂಭಿಸಲಾದ ಪ್ರಸ್ತುತ ಸೌಹಾರ್ದ ಅಭಿಯಾನ ಜಿಲ್ಲೆಯಾದ್ಯಂತ ನಡೆಯಲಿದ್ದು ಎಲ್ಲಾ ವರ್ಗದ ಜನರು ಈ ಮಹತ್ವಪೂರ್ಣ ಅಭಿಯಾನವನ್ನು ಬೆಂಬಲಿಸುವ ಮೂಲಕ ಶಾಂತಿ, ಸೌಹಾರ್ದಯುತ ವಾತಾವರಣ ನಿರ್ಮಿಸಲು ಸಹಕರಿಸಬೇಕೆಂದು ಅವರು ಕರೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿದ ಮದರಂಗಿ ಮಾಸ ಪತ್ರಿಕೆ ಪ್ರಕಾಶಕ ಡಿ.ಐ.ಅಬೂಬಕರ್ ಕೈರಂಗಳ ” ಸೌಹಾರ್ದದ ನಾಡನ್ನು ಕಟ್ಟುವುದು ಪುಣ್ಯವೇರಿದ ಕಾರ್ಯವಾಗಿದ್ದು ಎಲ್ಲರ ಒಗ್ಗೂಡುವಿಕೆಯಿಂದ ಇದನ್ನು ಸುಲಭದಲ್ಲಿ ಸಾಧಿಸಬಹುದೆಂದು ಹೇಳಿದರು. ಸಾಹಿತಿ, ಜ್ಯೋತಿಷಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ಮತ್ತು ಸ್ಪಂದನ ಸಾಮಾಜಿಕ ಸೊಸೈಟಿ ಅಧ್ಯಕ್ಷ ಕೆ.ಎಂ.ಇಖ್ಬಾಲ್ ಬಾಳಿಲ ಸೌಹಾರ್ದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದರು.
ಅಭಿಯಾನದ ಅಂಗವಾಗಿ ಸೌಹಾರ್ದ ಪ್ರಮಾಣವಚನ,ಕರಪತ್ರ ಬಿಡುಗಡೆ,ಸೌಹಾರ್ದ ಸಹಿ ಸಂಗ್ರಹ ನಡೆಯಿತು. ವಿಶ್ವಾಸ್ ಬಾವಾ ಬಿಲ್ಡರ್ಸ್ ಮಾಲಕ ಅಬ್ದುರ್ರವೂಫ್ ಪುತ್ತಿಗೆ, ಮಾನವಹಕ್ಕು ಹೋರಾಟಗಾರ ಹನೀಫ್ ಹಾಜಿ ಬಾಳಿಲ, ಕವಿ ಅಲ್ತಾಫ್ ಬಿಳಗುಳ,ಅಶೋಕ್ ಕುಮಾರ್ ಕಾಸರಗೋಡು, ಮಾಜಿ ಸೈನಿಕ ತಾರಾನಾಥ್ ಮಂಗಳೂರು ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಲೇಖಕ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ಸ್ವಾಗತಿಸಿ ಕವಿ ಯಂಶ ಬೇಂಗಿಲ ಕೃತಜ್ಞತೆ ಸಲ್ಲಿಸಿದರು. ಕವಿ ಸಫ್ವಾನ್ ಸವಣೂರು ಕಾರ್ಯಕ್ರಮ ನಿರೂಪಿಸಿರು.
ಇದೇ ವೇಳೆ ‘ ಮಾನವರು ಸಹೋದರರು ಸೌಹಾರ್ದ ವೇದಿಕೆ – ದಕ್ಷಿಣ ಕನ್ನಡ ಜಿಲ್ಲಾ ಸಂಘ’ ವನ್ನ ರಚಿಸಲಾಯಿತು. ಅಧ್ಯಕ್ಷರಾಗಿ ಕೆ.ಎ ಅಬ್ದುಲ್ ಅಝೀಝ್ ಪುಣಚ, ಉಪಾಧ್ಯಕ್ಷರುಗಳಾಗಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ, ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ, ನವೀನ್ ಪಿರೇರಾ ಸುರತ್ಕಲ್, ಹಮೀದ್ ಹಸನ್ ಮಾಡೂರು ಆಯ್ಕೆಯಾದರು. ಇನ್ನು ಪ್ರಧಾನ ಕಾರ್ಯದರ್ಶಿಯಾಗಿ ಸಫ್ವಾನ್ ಸವಣೂರು, ಜೊತೆ ಕಾರ್ಯದರ್ಶಿಗಳಾಗಿ ಯಂಶ ಬೇಂಗಿಲ, ಅಲ್ತಾಫ್ ಬಿಳಗುಳ ಆಯ್ಕೆಯಾದರು. ಕೋಶಾಧಿಕಾರಿಗಳಾಗಿ ವಿಜಯ್ ದಾಸ್ ನವಲಿ, ಅಶೋಕ್ ಕುಮಾರ್ ಕಾಸರಗೋಡು ಆಯ್ಕೆಯಾದರು. ಕಾನೂನು ಸಲಹೆಗಾರರಾಗಿ ಹನೀಫ್ ಸಾಹೇಬ್ ಪಾಜಪಳ್ಳ ಆಯ್ಕೆಯಾದರು. ಮಾಧ್ಯಮ ಸಲಹೆಗಾರರಾಗಿ ಪತ್ರಕರ್ತ ಶಂಶೀರ್ ಬುಡೋಳಿ ಆಯ್ಕೆಯಾದರು. ಇನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ಲತೀಫ್ ಎಸ್ ಬಿ, ನಿಝಾಮುದ್ದೀನ್ ಗೋಳಿಪಡ್ಪು, ಲುಕ್ಮಾನುಲ್ ಹಕೀಂ ಅಡ್ಯಾರ್ , ನಾಸಿರ್ ಸಜಿಪ, ಸಾಬಿತ್ ಕುಂಬ್ರ, ನಿಝಾಂ ಮಂಚಿ, ಅಝೀಝ್ ಮಾಡಾವು, ಇಬ್ರಾಹಿಂ ಖಲೀಲ್ ಪುತ್ತೂರು, ಮುಸ್ತಫಾ ಅಂಜಿಕ್ಕಾರ್ ಹಾಗೂ ಮುತ್ತಲಿಬ್ ನಾರ್ಶ ಆಯ್ಕೆಯಾದರು.