ವಲಚ್ಚಿಲ್ ಪದವಿನ ಮೇರ್ಲಪದವಿನಲ್ಲಿ ಜೋಸೆಫ್ ರೆಬೆಲ್ಲೋರವರ ಎರಡು ದನ ಮೇ 6 ರಂದು ರಾತ್ರಿ ಕಳವುಗೊಂಡಿದ್ದು ಈ ಪರಿಸರದಲ್ಲಿ ದನ, ಆಡು ಕಳವು ಹೆಚ್ಚಾಗುತ್ತಿದ್ದು ಜಾನುವಾರು ಸಾಕಾಣೆದಾರರು ಆತಂಕದಿಂದ ಇದ್ದಾರೆ. ಈ ಬಗ್ಗೆ ಸೊಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅಡ್ಯಾರ್ ಅರ್ಕುಳ ಗ್ರಾಮ ಸಮಿತಿ ಖಂಡಿಸಿದ್ದು ಕ್ರಮ ಕೈಗೊಳ್ಳಲು ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯ, ಎಸ್.ಡಿ.ಪಿ.ಐ ಅಡ್ಯಾರ್ ಗ್ರಾಮ ಸಮಿತಿ ಅದ್ಯಕ್ಷ, ಯಾಸೀನ್ ಅರ್ಕುಳ ಆಗ್ರಹಿಸಿದ್ದಾರೆ.