ಸ್ವಚ್ಛ ಭಾರತ ರಾಷ್ಟ್ರಪಿತ ಗಾಂಧೀಜಿಯವರ ಕಲ್ಪನೆ ಈ ಕಲ್ಪನೆಯನ್ನು ಸಾಕಾರಗೊಳಿಸಲು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ರಾಷ್ಟ್ರಕ್ಕೆ ಕರೆ ಕೊಟ್ಟರು. ಈ ಬೃಹತ್ ಅಭಿಯಾನವನ್ನು ಯಶಸ್ವಿಯಾಗಿಸಲು ಕೇಂದ್ರ ಸರಕಾರದ ವಿಶೇಷ ಮನವಿಯ ಮೇರೆಗೆ ರಾಮಕೃಷ್ಣ ಮಿಷನ್ ಈ ಅಭಿಯಾನಕ್ಕೆ ಕೈ ಜೋಡಿಸಿತು. ಈ ನಿಟ್ಟಿನಲ್ಲಿ ಮಂಗಳೂರಿನ ಮಿಷನ್ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಎಂಬ ಬೃಹತ್ ಅಭಿಯಾನವನ್ನು ಆರಂಭಿಸಿತು. ಈ ಅಭಿಯಾನವು ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿರದೆ ಪುತ್ತೂರಿನಲ್ಲಿ ಸ್ವಚ್ಛ ಪುತ್ತೂರು ಹಾಗೂ ಕಲ್ಲಡ್ಕದಲ್ಲಿ ಸ್ವಚ್ಛ ಕಲ್ಲಡ್ಕ ಎಂಬ ಮತ್ತೆರಡು ಯಶಸ್ವಿ ಅಭಿಯಾನಗಳು ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಆರಂಭವಾಯಿತು.
ಈ ಅಭಿಯಾನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಎಂಬಂತೆ ದಕ್ಷಿಣ ಕನ್ನಡದ ಜೀವನದಿಯಾದ ನೇತ್ರಾವತಿಯ ತಟದಲ್ಲಿರುವ ಬಂಟ್ವಾಳದಲ್ಲಿ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ಬಂಟ್ವಾಳ ಎಂಬ ಅಭಿಯಾನವನ್ನು ಆರಂಭಿಸಲಾಯಿತು.
ಈ ಅಭಿಯಾನವನ್ನು ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹರಾಜ್ ಹಾಗೂ ಬಂಟ್ವಾಳ ಪುರಸಭೆ ಅಧ್ಯಕ್ಷರಾದ ರಾಮಕೃಷ್ಣ ಆಳ್ವ ಅವರು ಬಿ. ಸಿ ರೋಡ್ ನ ರಕ್ತೇಶ್ವರಿ ಗುಡಿಯ ಮುಂಭಾಗದಲ್ಲಿ ನಿಶಾನೆ ತೋರುವುದರ ಮೂಲಕ ಉದ್ಘಾಟಿಸಿದರು.