ಬಂಟ್ವಾಳ

ಬಿ.ಸಿ.ರೋಡ್: ರಸ್ತೆಯಲ್ಲೇ ಹರಿದ ನೀರು

ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಹಾಗೂ ಎಲ್ಲೆಂದರಲ್ಲಿ ಮಣ್ಣಿನ ರಾಶಿ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅಡಚಣೆ ಉಂಟು ಮಾಡುತ್ತಿದ್ದರೆ ಇದೀಗ ನೀರಿನ ಪೈಪ್ ಮತ್ತೆ ಒಡೆದು ಬಿ.ಸಿ.ರೋಡ್ ರಸ್ತೆಯಲ್ಲೇ ಹರಿದುಹೋಗುತ್ತಿದೆ.

ಬಿ.ಸಿ.ರೋಡ್ ಹಳೇ ಎಲ್ಲೈಸಿ ಕಚೇರಿ ಇದ್ದ ಬಳಿ ತಿರುವಿನಲ್ಲಿ ರಸ್ತೆಯೊಂದು ಹೋಗುತ್ತಿದ್ದು ಅದರ ಜಂಕ್ಷನ್ ನಲ್ಲಿರುವ ನೀರಿನ ಪೈಪ್ ಕಳೆದ ಒಂದೆರಡು ತಿಂಗಳಿಂದ ಆಗಾಗ್ಗೆ ಸಮಸ್ಯೆ ನೀಡುತ್ತಿದೆ. ಇದೇ ವೇಳೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿ ರಸ್ತೆ ಬದಿಯಲ್ಲಿ ಮಣ್ಣು ಅಗೆದುಹಾಕುವ ಕಾರ್ಯಗಳು ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ಕಾರಣ ಪೈಪ್ ಗೆ ಘಾಸಿ ಉಂಟಾಗಿ ಒಡೆದು ಹೋಗಿತ್ತು. ಈ ಕುರಿತು ಸಾಕಷ್ಟು ದೂರುಗಳನ್ನು ಸ್ಥಳೀಯರು ನೀಡಿದ್ದರೂ ಒಮ್ಮೆ ಸರಿಯಾಗುವ ಪೈಪ್ ಮತ್ತೊಮ್ಮೆ ಒಡೆದು ಹೋಗುತ್ತಿದ್ದು, ಬುಧವಾರವಂತೂ ವಿಪರೀತಕ್ಕೆ ಹೋಯಿತು. ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಬಿ.ಸಿ.ರೋಡ್ ಹೆದ್ದಾರಿಯಲ್ಲಿಡೀ ಹೊಳೆಯಂತೆ ನೀರು ಹರಿದು ಹೋಯಿತು. ಈ ಬಗ್ಗೆ ದೂರುಗಳು ಹೋದ ಬಳಿಕ ನೀರು ಸರಬರಾಜನ್ನು ಸ್ಥಗಿತಗೊಳಿಸಿ ತಾತ್ಕಾಲಿಕವಾಗಿ ಸಮಸ್ಯೆಗೆ ಉಪಶಮನ ನೀಡಲಾಯಿತು.

ಕೆಲ ದಿನಗಳಿಂದ ನಡೆಯುತ್ತಿರುವ “ಅಗೆತ’’ಗಳ ಬಳಿಕ ಮೊದಲಿನಂತೆ ರಸ್ತೆಯಾಗಲೀ ಅಥವಾ ರಸ್ತೆ ಪಕ್ಕದ ಕಾಲುದಾರಿಯಾಗಲೀ ಸುಸ್ಥಿತಿಯಲ್ಲಿ ಇರದೆ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು, ಸಂಘ, ಸಂಸ್ಥೆಗಳು ಹಾಗೂ ವರ್ತಕರು ಈ ಕುರಿತು ಒಟ್ಟಾಗಿ ಸಮಾಲೋಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಶ್ರಮಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts