ವಿಟ್ಲ

ಜಲೀಲ್ ಹತ್ಯೆ ಪ್ರಕರಣ: ಪೊಲೀಸರಿಗೆ ದೊರಕಿತೇ ಮಹತ್ವದ ಸುಳಿವು?

ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಹತ್ಯೆಗೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆಯೇ?

ಜಾಹೀರಾತು

ಮಿತ್ತನಡ್ಕ ಮುಗುಳಿ ರಸ್ತೆ ಬದಿ ಸೋಮವಾರ ಎರಡು ಬೈಕ್, ಎರಡು ತಲವಾರು, ಬಟ್ಟೆಬರೆ ಪತ್ತೆಯಾಗಿದ್ದು ಈ ಅನುಮಾನಗಳಿಗೆ ಕಾರಣವಾಗಿದೆ.

ಈಗಾಗಲೇ ಕೊಲೆಗೆ ಸಂಬಂಧಿಸಿ ತೀವ್ರಗತಿಯಲ್ಲಿ ರಾತ್ರಿ ಹಗಲೆನ್ನದೆ ತನಿಖೆ ನಡೆಸುತ್ತಿರುವ ಪೊಲೀಸರು ಒಂದೆರಡು ದಿನಗಳಲ್ಲೇ ಪ್ರಕರಣ ಬೇಧಿಸುವುದಾಗಿ ಹೇಳಿದ್ದಾರೆ.

ಜಾಹೀರಾತು

ರಸ್ತೆ ಬದಿ ಸೋಮವಾರ ಪತ್ತೆಯಾದ ವಸ್ತುಗಳು ಯಾರದ್ದು ಎಂಬ ವಿಚಾರವಾಗಿ ದಿನವಿಡೀ ಊಹಾಪೋಹಗಳು ವಾಟ್ಸಾಪ್ ಗಳಲ್ಲಿ ಹರಿದಾಡಿದ್ದವು. ಇದು ಆರೋಪಿಗಳಿಗೆ ಸಂಬಂಧಿಸಿದ್ದೇ, ಅಥವಾ ಬೇರೆ ಪ್ರಕರಣಗಳಿಗೆ ಸಂಬಂಧಿಸಿದ್ದೇ ಅಥವಾ ಜಲೀಲ್ ಹತ್ಯೆ ತನಿಖೆ ದಾರಿ ತಪ್ಪಿಸಲು ಹೆಣೆದ ತಂತ್ರವೇ ಎಂಬ ಕುರಿತು ಇನ್ನೂ ಅನುಮಾನಗಳು ಹರಡಿಕೊಂಡಿವೆ.

ಏನು ಕಂಡುಬಂದಿತ್ತು:ಕರ್ನಾಟಕ-ಕೇರಳ ಗಡಿಭಾಗದ ಮುಗುಳಿ ಎಂಬಲ್ಲಿಯ ಉಪ್ಪಳ ರಸ್ತೆ ಬದಿಯಲ್ಲಿ ಇಂದು ಬೆಳಗ್ಗೆ ಸ್ಥಳೀಯರು ನಡೆದು ಹೋಗುತ್ತಿದ್ದ ವೇಳೆ ಹಳೆಯ ಎರಡು ಪಲ್ಸರ್ ಬೈಕ್‌ಗಳು ಬಿದ್ದ ಸ್ಥಿತಿಯಲ್ಲಿ ಕಂಡುಬಂದಿವೆ. ಬೈಕ್ ಪಕ್ಕದಲ್ಲಿ ಎರಡು ತಲವಾರ್ ಹಾಗೂ ನಾಲ್ಕು ಜೋಡಿ ಪ್ಯಾಂಟ್ ಹಾಗೂ ಶರ್ಟ್‌ಗಳು ಪತ್ತೆಯಾಗಿವೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಸ್ತುಗಳನ್ನು ವಶಕ್ಕೆ ಪಡೆದು ಜಲೀಲ್ ಕೊಲೆಗೆ ಸಂಬಂಧಿಸಿದ ವಸ್ತುಗಳೇ ಎಂಬುದರ ಬಗ್ಗೆ ತನಿಖೆ ಕೈಗೆತ್ತಿಕೊಂ ಡಿದ್ದಾರೆ.

ಜಾಹೀರಾತು

ಇದು ಯಾವುದು?

ರಸ್ತೆ ಬದಿಯಲ್ಲಿ ಬೈಕುಗಳು ಪತ್ತೆಯಾಗಿವೆ. ಹತ್ಯೆಯಾದ ದಿನದಿಂದ ಸೋಮವಾರದವರೆಗೆ ಇದು ಎಲ್ಲಿ ಇತ್ತು, ಯಾರಿಗು ಯಾಕೆ ಇಷ್ಟು ದಿನ ಕಾಣಿಸಲಿಲ್ಲ ಎಂಬುದೂ ನಿಗೂಢ. ಸ್ಥಳದಲ್ಲಿ ಕಂಡುಬಂದ ತಲವಾರು, ಬಟ್ಟೆಬರೆಗಳೂ ಇರಿಸಿದಂತಿವೆ ಎಂಬ ಕಾರಣದಿಂದ ತನಿಖೆಯ ದಿಕ್ಕುತಪ್ಪಿಸಲು ಇವನ್ನು ಹಾಕಿರಬಹುದೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪತ್ತೆಯಾದ ಎರಡು ಬೈಕುಗಳ ಪೈಕಿ ಒಂದು ಕಳವಾದ ಬೈಕು ಆಗಿರಬಹುದೇ ಎಂಬ ಪರಿಶೀಲನೆ ನಡೆಸುತ್ತಿದ್ದಾರೆ. ವಿಟ್ಲ ಪೊಲೀಸರು ಅನಾಥ ವಸ್ತುಗಳು ಪತ್ತೆ ಎಂಬ ಕಾಲಂನಡಿ ಪ್ರಕರಣ ದಾಖಲಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ