ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಸಯ್ಯದ್ ಮದನಿ ಅವರ ಹೆಸರಲ್ಲಿ ಶೈಕ್ಷಣಿಕ ಚಳುವಳಿಯೇ ನಡೆದಿದ್ದು ಇದೀಗ ಹೆಣ್ಮಕ್ಕಳ ಉನ್ನತ ಶಿಕ್ಷಣದ ದೃಷ್ಟಿ ಇರಿಸಿ ಮಹಿಳಾ ಕಾಲೇಜು ಸ್ಥಾಪಿಸಲು ಹೊರಟಿರುವುದು ಅತ್ಯುತ್ತಮ ಕಾರ್ಯವೆಂದರು.
ಈ ವೇಳೆ ಅನೇಕ ಮಂದಿ ಸಾಧಕರಿಗೆ ರಾಜ್ಯಪಾಲರು ಮದನಿ ಪ್ರಶಸ್ತಿ ಪ್ರದಾನಿಸಿ, ಹಝ್ರತ್ ಮದನಿ ಇಲ್ಮ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಮತ್ತು ಉಳ್ಳಾಲ ದರ್ಗಾದ ಅಧ್ಯಕ್ಷ ಜನಾಬ್ ಹಾಜಿ ಅಬ್ದುಲ್ ರಶೀದ್ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಆಹಾರ ಸಚಿವ ಯು.ಟಿ ಖಾದರ್, ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ, ಯೇನೆಪೋಯ ವಿ.ವಿ ಕುಲಪತಿಗಳಾದ ವೈ.ಅಬ್ದುಲ್ಲಾ ಕುಂಞ, ಉಳ್ಳಾಲ ನಗರಸಭಾಧ್ಯಕ್ಷ ಹುಸೇನ್ ಕುಂಞಮೋನು ಮೊದಲಾದವರು ಇದ್ದರು.