• ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಈರುಳ್ಳಿಯಿಂದ ಏನೇನು ಉಪಯೋಗಗಳು ಎಂಬುದು ಇಲ್ಲಿದೆ.

  1. ಉಷ್ಣತೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡಾಗ ಈರುಳ್ಳಿಯನ್ನು ಸಣ್ಣ ತುಂಡು ಮಾಡಿ ದನದ ತುಪ್ಪದಲ್ಲಿ ಹುರಿದು ಊಟದ ಪ್ರಾರಂಭದಲ್ಲಿ ಸೇವಿಸಬೇಕು.
  2. ಈರುಳ್ಳಿಯನ್ನು ಹಸಿಯಾಗಿ ಅಥವಾ ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಬಾಯಿರುಚಿ,  ಜೀರ್ಣಶಕ್ತಿ  ಅಧಿಕವಾಗುತ್ತದೆ ಮತ್ತು ಹೊಟ್ಟೆ ಹುಳದ ಬಾಧೆ ನಿವಾರಣೆಯಾಗುತ್ತದೆ.
  3. ಈರುಳ್ಳಿಯನ್ನು ಬೆಲ್ಲದೊಂದಿಗೆ ಸೇರಿಸಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
  4. ಈರುಳ್ಳಿರಸ ಮತ್ತು ತುಳಸಿ ರಸವನ್ನು ಸಮಪ್ರಮಾಣದಲ್ಲಿ ಸೇರಿಸಿ 5 ರಿಂದ 10 ಮಿಲೀ ಯಷ್ಟು ಕುಡಿಸಿದರೆ ವಾಂತಿ ಹಾಗು ಭೇದಿಯು ಕಡಿಮೆಯಾಗುತ್ತದೆ.
  5. ಈರುಳ್ಳಿಯ ತುಂಡುಗಳನ್ನು ಮೊಸರಿನೊಂದಿಗೆ ಜಜ್ಜಿ ಸೇವಿಸಿದರೆ ರಕ್ತಸ್ರಾವಯುಕ್ತ ಮೂಲವ್ಯಾಧಿಯು ಕಡಿಮೆಯಾಗುತ್ತದೆ.
  6. ಈರುಳ್ಳಿಯನ್ನು ಸುಲಿದು ಬಿಸಿಲಿನಲ್ಲಿ ಒಣಗಿಸಿ ನಂತರ ತುಪ್ಪದಲ್ಲಿ ಹುರಿದ ಎಳ್ಳು ಮತ್ತು ಕಲ್ಲುಸಕ್ಕರೆ ಸೇರಿಸಿ ಪ್ರತಿನಿತ್ಯ ಸೇವಿಸುವುದರಿಂದ ಮೂಲವ್ಯಾಧಿಯು ಗುಣವಾಗುತ್ತದೆ.
  7. ಈರುಳ್ಳಿ ರಸವನ್ನು ಶುಂಠಿ ,ಜೇನು ಮತ್ತು ದನದ ತುಪ್ಪದೊಂದಿಗೆ ಮಿಶ್ರ ಮಾಡಿ ಪ್ರತಿದಿನ ಬೆಳಗ್ಗೆ ತಿನ್ನುವುದರಿಂದ ಶರೀರದ ನಿತ್ರಾಣ ಹಾಗು ಬಲಕ್ಷಯ ನಿವಾರಣೆಯಾಗುತ್ತದೆ.
  8. ಈರುಳ್ಳಿಯನ್ನು ತುಪ್ಪದಲ್ಲಿ ಹುರಿದು ಅಥವಾ ಹಾಗೆಯೇ ಬೆಲ್ಲದೊಂದಿಗೆ ಸೇವಿಸಿದರೆ ಕಪ ಹಾಗು ಕೆಮ್ಮು ವಾಸಿಯಾಗುತ್ತದೆ.
  9. ಸರಿಯಾಗಿ ಮೂತ್ರಪ್ರವೃತ್ತಿ ಆಗದಿದ್ದರೆ ಅಥವಾ ನೋವಿನಿಂದ ಕೂಡಿದ್ದರೆ ಈರುಳ್ಳಿ  ರಸವನ್ನು ತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಬೇಕು.
  10. ಈರುಳ್ಳಿಯು ಹೃದಯಕ್ಕೆ ಬಲದಾಯಕವಾಗಿದ್ದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಕರಿಸುತ್ತದೆ ಮತ್ತು ಶರೀರದಲ್ಲಿನ ಕೆಟ್ಟ ಕೊಬ್ಬಿನ ಅಂಶವನ್ನು ಸಹ ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
  11. ಈರುಳ್ಳಿಯು ಶರೀರದ ಒಳಗೆ ರಕ್ತಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ.
  12. ಈರುಳ್ಳಿಯ ನಿತ್ಯ ಬಳಕೆಯಿಂದ ಮಧುಮೇಹ ರೋಗವು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗುತ್ತದೆ
  13. ಈರುಳ್ಳಿಯು ಪಿತ್ತ ಜನಕಾಂಗಕ್ಕೆ ಬಲದಾಯಕವಾಗಿದ್ದು ಕಾಮಾಲೆ ರೋಗಿಗಳಿಗೆ ಇದು ಉತ್ತಮ ಪಥ್ಯ ಆಹಾರವಾಗಿದೆ.
  14. ಈರುಳ್ಳಿಯ ನಿತ್ಯ ಬಳಕೆಯಿಂದ ಬುದ್ಧಿಶಕ್ತಿ,ನೆನಪು ಶಕ್ತಿ ಇತ್ಯಾದಿಗಳು ಅಧಿಕವಾಗುತ್ತದೆ.
  15. ಇತ್ತೀಚೆಗಿನ ಅಧ್ಯಯನದ ಪ್ರಕಾರ ಈರುಳ್ಳಿಯು ಕ್ಯಾನ್ಸರನ್ನು ತಡೆಗಟ್ಟಲು ಸಹ ಪರಿಣಾಮಕಾರಿಯಾಗಿ ಸಹಕರಿಸುತ್ತದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.