ಮಸ್ಜಿದುಲ್ ಖಿಳ್‌ರ್, ದಾರುಲ್ ಉಲೂಂ ಮದರಸ ಮತ್ತು ಎಸ್‌ವೈಎಸ್, ಎಸ್ಸೆಸ್ಸೆಫ್ ಪೇರಿಮಾರ್ ವತಿಯಿಂದ ಮಾರಿಪಳ್ಳ ಪೇರಿಮಾರ್‌ನ ತಾಜುಲ್ ಉಲಮಾ ವೇದಿಕೆಯಲ್ಲಿ ಶನಿವಾರ ರಾತ್ರಿ ಗ್ರ್ಯಾಂಡ್ ಸುನ್ನೀ ಇಜ್‌ತಿಮಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಿದ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮಾತನಾಡಿ, ಪರರನ್ನು ಹಿಯಾಲಿಸುತ್ತಾ, ದೂಷಣೆ ಮಾಡುತ್ತಾ ಬದುಕುವ ಬದಲು ಪ್ರತೀಯೊಬ್ಬರು ನಮ್ಮಲ್ಲಿರುವ ತಪ್ಪುಗಳನ್ನು ಕಂಡುಹಿಡಿದು ಶುದ್ಧ ಮನಸ್ಸಿನೊಂದಿಗೆ ಬದುಕಬೇಕಾಗಿದೆ ಎಂದು ಹೇಳಿದರು.
ಅಹಂಕಾರ, ಅಸೂಯೆ, ಸುಳ್ಳುಗಳಿಂದ ದೂರವಿರಬೇಕು. ಯಾರೊಂದಿಗೂ ಒಡಕು ಉಂಟುಮಾಡದೆ ಹೃದಯ ಶುದ್ದಿಯಾಗಿರಬೇಕು. ಶುದ್ದಿ ಇರುವ ಹೃದಯ ಸ್ವರ್ಗ ಪ್ರವೇಶಿಸಲಿದೆ ಎಂದು ಪ್ರವಾದಿ ಮುಹಮ್ಮದ್ (ಸ.ಅ.) ಪ್ರತಿಪಾದಿಸಿದ್ದಾರೆ ಎಂದು ಹೇಳಿದ ಅವರು ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಪ್ರತೀಯೊಬ್ಬರು ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಅಸ್ಸೈಯ್ಯದ್ ಶಿಹಾಬುದ್ದೀನ್ ಸಖಾಫಿ ಅಲ್ ಹೈದ್ರೋಸಿ ಕಿಲ್ಲೂರು ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್ಶೀರ್ವಚನ ನೀಡಿದರು. ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ನಿರ್ವಹಣಾ ಸಮಿತಿ ಚೆಯರ್‌ಮೆನ್ ಬಿ.ಎಂ.ರಫೀಕ್ ಸಅದಿ ಅಲ್ ಅಫ್ಳಲಿ ಪ್ರಸ್ತಾವಿಕ ಭಾಷಣ ಮಾಡಿದರು. ಸಿದ್ದೀಖ್ ಸಖಾಫಿ ಅರಿಯೂರು, ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಭಾಷಣ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಯು.ಕೆ.ಯೂಸುಫ್ ಸಅದಿ ವಳವೂರು, ಬಿ.ಎಂ.ಮುಮ್ತಾಝ್ ಅಲಿ ಕೃಷ್ಣಾಪುರ, ಶಕೀರ್ ಅಹ್ಮದ್ ಹೈಸಂ ಸ್ಟೀಲ್ ಕಣ್ಣೂರು, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮುಹಮ್ಮದ್ ಸಾಗರ, ಅಹ್ಮದ್ ಬಾವ ದೇರಳಕಟ್ಟೆ, ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ, ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಹಾಶೀರ್, ಸದಸ್ಯರಾದ ರಮ್ಲಾನ್, ಆಸಿಫ್ ಇಕ್ಬಾಲ್, ಉದ್ಯಮಿಗಳಾದ ಬದ್ರುದ್ದೀನ್ ಕುಕ್ಕಾಜೆ, ಯೂಸುಫ್ ಫ್ರಾನ್ಸ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಎಂ.ಪಿ.ಎಂ.ಅಶ್ರಫ್ ಸಅದಿ ಮಲ್ಲೂರು, ಮಸೀದಿ ಅಧ್ಯಕ್ಷ ಪಿ.ಎಂ.ಶಾಫಿ, ನಿರ್ವಾಹಣಾ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಬಿ., ಬಿರ್ಪುಗುಡ್ಡೆ ಮಸೀದಿ ಅಧ್ಯಕ್ಷ ಕೆ.ಎಚ್.ಕೆ.ಕರೀಂ, ಎಸ್ಸೆಸ್ಸೆಫ್ ಮಂಗಳೂರು ಡಿವಿಶನ್ ಅಧ್ಯಕ್ಷ ಮುಹಮ್ಮದ್ ಮನ್ಸೂರು ಮದನಿ ವಳವೂರು, ಎಸ್ಸೆಸ್ಸೆಫ್ ಫರಂಗಿಪೇಟೆ ಸೆಕ್ಟರ್ ಅಧ್ಯಕ್ಷ ಜುನೈದ್ ಸಅದಿ ಅಲ್ ಅಫ್ಲಲಿ, ಅಬೂಬಕ್ಕರ್ ಮದನಿ ಪೇರಿಮಾರ್, ಶಿಹಾಬ್ ಪೇರಿಮಾರ್, ಎಸ್‌ವೈಎಸ್ ಅಡ್ಯಾರ್ ಪದವು ಅಧ್ಯಕ್ಷ ಸಲೀಂ, ಅಬ್ದುಲ್ ಹಕೀಂ ಹನೀಫಿ ಪೇರಿಮಾರ್, ಮುಹಮ್ಮದ್ ಮುಸ್ತಫಾ ಹಮಾನಿ ಪೇರಿಮಾರ್, ಸತ್ತಾರ್ ಆರ್ಕುಳ ಸಹಿತ ಮೊದಲಾದವರು ಉಪಸ್ಥಿತರಿದ್ದರು.
ನಿರ್ವಾಹಣಾ ಸಮಿತಿ ಕೋ ಆರ್ಡಿನೇಟರ್ ಬಿ.ಇಬ್ರಾಹೀಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ವಹಣಾ ಸಮಿತಿ ಜನರಲ್ ಕನ್ವೀನರ್ ಅಬ್ದುಲ್ ಫಲೂಲ್ ದನ್ಯವಾದಗೈದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಎ.ಪಿ.ಉಸ್ತಾದರನ್ನು ಸ್ವಾಗತಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…