ಬಂಟ್ವಾಳ

ಮೆಲು ದನಿ ಸಂಗೀತ-ರಂಗಕಲೆ ಶಿಬಿರಕ್ಕೆ ಚಾಲನೆ

ಯಕ್ಷಲೋಕ ಸಾಂಸ್ಕೃತಿಕ ಸಂಗಮ ಬಿ.ಸಿ.ರೋಡು ಆಶ್ರಯದಲ್ಲಿ ಬಿ.ಸಿ.ರೋಡು ಬಸ್ಸು ನಿಲ್ದಾಣದ ಹಿಂಭಾಗದಲ್ಲಿರುವ ರಾಜರಾಜೇಶ್ವರೀ ಕಾಂಪ್ಲೆಕ್ಸ್‌ನಲ್ಲಿರುವ ಜೀವನ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಒಂದು ವಾರಗಳ ಕಾಲ ಮಕ್ಕಳಿಗಾಗಿ ನಡೆಯುವ ಮೆಲು ದನಿ ಸಂಗೀತ-ರಂಗಕಲೆ ಶಿಬಿರಕ್ಕೆ ಶನಿವಾರ ಸಂಭ್ರಮದ ಚಾಲನೆ ದೊರೆತಿದೆ.

ನ್ಯಾಯವಾದಿಗಳಾದ ಚೇತನಾ ಆರ್.ಶೆಟ್ಟಿ ದಂಡೆ, ಚಿದಾನಂದ ಪೂಜಾರಿ ಕಡೇಶಿವಾಲಯ, ಶ್ರೀನಿವಾಸ ದೈಪಲ, ಉಧ್ಯಮಿ ಪ್ರಶಾಂತ್ ಕೋಟ್ಯಾನ್, ರಾಮಲ್‌ಕಟ್ಟೆ ಎಳೆಯರ ಬಳಗದ ಮಾತೃ ಸಂಘದ ಅಧ್ಯಕ್ಷೆ ವಿದ್ಯಾ ಅರುಣ್ ಮೊದಲಾದವರು ಡೋಲಕ್, ಕೊಳಲು, ತಮಟೆ, ಟಮ್ಕಿ, ತಂಬೂರಿ ಬಾರಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಕವಯಿತ್ರಿ ರಜನಿ ಚಿಕ್ಕಯ ಮಠ, ಯಕ್ಷಲೋಕ ನಿರ್ದೇಶಕ ಗೋಪಾಲ ಅಂಚನ್, ಶಿಬಿರ ಸಂಯೋಜಕಿ ಪ್ರತಿಮಾ ಜಿ.ಅಂಚನ್, ಕಲಾವಿದ ಲೋಲಾಕ್ಷ ನೆತ್ತರಕೆರೆ ಮೊದಲಾದವರಿದ್ದರು. ಶಿಬಿರವು ಪ್ರತಿದಿನ ಬೆಳಿಗ್ಗೆ ೯.೩೦ರಿಂದ ಸಂಜೆ ೪.೩೦ರತನಕ ನಡೆಯಲಿದ್ದು ಎಲ್ಲಾ ರೀತಿಯ ಸಂಗೀತ, ಅಭಿನಯ ಕಲೆ, ಸಂಭಾಷಣಾ ಶೈಲಿ, ಹಾವಭಾವ, ನಟನಾ ಕೌಶಲ್ಯ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.  

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ