ಡಾ.ರಾಜ್ ಕುಮಾರ್ ಅವರ ಜನ್ಮ ದಿನವಾದ ಏಪ್ರಿಲ್ 24ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಚ್ಯುತ್ ಕುಮಾರ್ ಅತ್ಯುತ್ತಮ ನಟ (ಅಮರಾವತಿ), ಶ್ರುತಿ ಹರಿಹರನ್ ಅತ್ಯುತ್ತಮ ನಟಿ (ಬ್ಯೂಟಿಫುಲ್ ಮನಸುಗಳು) ಪ್ರಶಸ್ತಿ ಪಡೆದಿದ್ದಾರೆ. ತುಳು ಚಿತ್ರ ಮುದಿಪು ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಗಳಿಸಿದೆ.
ಹೀಗಿದೆ ವಿವರ:
ಅತ್ಯುತ್ತಮ ಚಿತ್ರ:
ಅಮರಾವತಿ – ಪ್ರಥಮ ಅತ್ಯುತ್ತಮ ಚಿತ್ರ, ರೈಲ್ವೆ ಚಿಲ್ಡ್ರನ್ – ದ್ವಿತೀಯ ಅತ್ಯುತ್ತಮ ಚಿತ್ರ, ಅಂತರ್ಜಲ – ಮೂರನೇ ಅತ್ಯುತ್ತಮ ಚಿತ್ರ, ಕಿರಿಕ್ ಪಾರ್ಟಿ ಅತ್ಯುತ್ತಮ ಮನರಂಜನಾ ಚಿತ್ರ
ರಾಮಾ ರಾಮಾರೇ ಮೊದಲ ನಿರ್ದೇಶನದ ಅತ್ಯುತ್ತಮ ಚಿತ್ರ, ಮೂಡಲ ಸೀಮೆಯಲಿ ಅತ್ಯುತ್ತಮ ಸಾಮಾಜಿಕ ಚಿತ್ರ, ತುಳು ಚಿತ್ರ ಮುದಿಪು ಅತ್ಯುತ್ತಮ ಪ್ರಾದೇಶಿಕ ಚಿತ್ರ, ಜೀರ್ ಜಿಂಬೆ ಅತ್ಯುತ್ತಮ ಮಕ್ಕಳ ಚಿತ್ರ
ಅತ್ಯುತ್ತಮ ಕಥೆ – ನಂದಿತಾ ಯಾದವ್ (ರಾಜು ಎದೆಗೆ ಬಿದ್ದ ಅಕ್ಷರ)
ಅತ್ಯುತ್ತಮ ಪೋಷಕ ನಟ – ನವೀನ್ ಡಿ. ಪಡೀಲ್ (ಕುಡ್ಲ ಕೆಫೆ)
ಅತ್ಯುತ್ತಮ ಪೋಷಕ ನಟಿ- ಅಕ್ಷತಾ ಪಾಂಡವಪುರ (ಪಲ್ಲಟ)
ಅತ್ಯುತ್ತಮ ಸಂಭಾಷಣೆ ಬಿಎಂ ಗಿರಿರಾಜು (ಅಮರಾವತಿ)
ಅತ್ಯುತ್ತಮ ಚಿತ್ರಕಥೆ ಅರವಿಂದ ಶಾಸ್ತ್ರಿ (ಕಹಿ)
ಅತ್ಯುತ್ತಮ ಸಂಗೀತ ನಿರ್ದೇಶನ
ಎಂಆರ್ ಚರಣ್ ರಾಜ್ ಸಿ.ರವಿಚಂದ್ರನ್ ಅತ್ಯುತ್ತಮ ಸಂಕಲನ
ರೈಲ್ವೆ ಚಿಲ್ಡ್ರನ್ ನಟನೆಗಾಗಿ ಮನೋಹರ್ ಗೆ ಪ್ರಶಸ್ತಿ
ಅತ್ಯುತ್ತಮ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್
ಅತ್ಯುತ್ತಮ ಹಿನ್ನೆಲೆ ಗಾಯಕಿ ಸಂಗೀತಾ ರವೀಂದ್ರನಾಥ್ (ಜಲ್ಸಾ)
ವಸ್ತ್ರಾಲಂಕಾರ ವಿಭಾಗದಲ್ಲಿ ಚಿನ್ಮಯ್ , ಕಾರ್ತಿಕ್ ಸರಗೂರು ಅತ್ಯುತ್ತಮ ಗೀತ ರಚನೆ, ಶೇಖರ್ ಚಂದ್ರ ಅತ್ಯುತ್ತಮ ಛಾಯಗ್ರಹಣ(ಮುಂಗಾರು ಮಳೆ 2) ಪ್ರಶಸ್ತಿ ಪಡೆದ ಇತರರು.