ಪಾಕಶಾಲೆಯೇ ವೈದ್ಯಶಾಲೆ

ಕೇವಲ ಕಣ್ಣೀರಿಗಷ್ಟೇ ಅಲ್ಲ ಈರುಳ್ಳಿ

  • ಡಾ. ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಈರುಳ್ಳಿಯು ಕಣ್ಣಲ್ಲಿ ಉರಿ ಹಾಗು ನೀರು ಬರಿಸುವುದಿದ್ದರೂ ಬಹುತೇಕ ಎಲ್ಲಾ ಪದಾರ್ಥಗಳಿಗೆ ಇದನ್ನು ಬಳಸದೆ ಇರುವುದಿಲ್ಲ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಸಹ ಇದರ ಪ್ರಾಮುಖ್ಯತೆಯನ್ನು ಪರಿಗಣಿಸದೆ ಇರಲು ಸಾಧ್ಯವಿಲ್ಲ.

ಜಾಹೀರಾತು

ಬಾಹ್ಯ ಉಪಯೋಗಗಳು-

  1. ಊತ ಹಾಗು ನೋವು ಇರುವ ಸ್ಥಳಗಳಲ್ಲಿ ಈರುಳ್ಳಿಯನ್ನು ಜಜ್ಜಿ ಬಿಸಿ ಮಾಡಿ ಕಟ್ಟಬೇಕು. ಇದರಿಂದ ಊತ ಹಾಗು ನೋವು ಶಮನವಾಗುತ್ತದೆ.
  2. ಈರುಳ್ಳಿ ರಸವನ್ನು ಸುಟ್ಟ ಗಾಯಗಳ ಮೇಲೆ ಹಾಕಿದರೆ ಗಾಯ ಶುದ್ಧಿಯಾಗುತ್ತದೆ ಮತ್ತು ಬೇಗನೆ ವಾಸಿಯಾಗುತ್ತದೆ.
  3. ಜೇನುನೊಣ ಕಚ್ಚಿದಾಗ ಈರುಳ್ಳಿ ರಸವನ್ನು ಕಚ್ಚಿದ ಜಾಗಕ್ಕೆ ಹಚ್ಚಿದರೆ ಉರಿ, ನೋವು ಹಾಗು ಊತ ಕಡಿಮೆಯಾಗುತ್ತದೆ.
  4. ಕಣ್ಣಿನ ದೃಷ್ಟಿ ಸಮಸ್ಯೆಯಿದ್ದಾಗ ಈರಳ್ಳಿಯುಯನ್ನು ಸುಟ್ಟು ಕರಿಮಾಡಿ, ಕೊಬ್ಬರಿ ಎಣ್ಣೆಯಲ್ಲಿ ನುಣ್ಣಗೆ ಅರೆದು ಕಾಡಿಗೆ ಯಂತೆ   ಕಣ್ಣಿನ ರೆಪ್ಪೆಯ ಬುಡಭಾಗಕ್ಕೆ ಹಚಬೇಕು.
  5. ದೃಷ್ಟಿ ಮಾಂಧ್ಯದಲ್ಲಿ(ಕಣ್ಣಿನ ಪೋರೆಯಿಂದಾಗಿ ) ಈರುಳ್ಳಿ ರಸವನ್ನು ಜೇನುತುಪ್ಪದಲ್ಲಿ ಕಲಸಿ ತೆಳ್ಳಗಿನ ಬಟ್ಟೆಯಮೇಲೆ ಲೇಪಿಸಿ ಕಣ್ಣಿನ ಮೇಲೆ ಪ್ರತಿದಿನ ಇಟ್ಟುಕೊಳ್ಳಬೇಕು ಅಥವಾ ಬಿಂದುರೂಪದಲ್ಲಿ ಕಣ್ಣಿಗೆ ಬಿಡಬೇಕು.
  6. ಕಿವಿನೋವು ಹಾಗು ತುರಿಕೆ ಇದ್ದಾಗ ಈರುಳ್ಳಿ ರಸವನ್ನು ಬಿಸಿಮಾಡಿ ಕಿವಿಗೆ ಬಿಡಬೇಕು.
  7. ಈರುಳ್ಳಿ ರಸವನ್ನು ಹಣೆಯ ಮೇಲೆ ಹಚ್ಚುವುದರಿಂದ ಉಷ್ಣ ನಿಮಿತ್ತವಾದ ತಲೆನೋವು ಕಡಿಮೆಯಾಗುತ್ತದೆ
  8. ಬಾಣಂತಿಯರ ಹೊಟ್ಟೆಯಲ್ಲಿ ಕಾಣಿಸುವ ಚರ್ಮದ ಕಲೆಗಳ (stretch mark ) ಮೇಲೆ ಈರುಳ್ಳಿ ರಸವನ್ನು ಹಚ್ಚಬೇಕು ಅಥವಾ ಈರುಳ್ಳಿ ಸಿಪ್ಪೆಯನ್ನು ಉಜ್ಜಬೇಕು.
  9. ಮೂರ್ಛೆ ರೋಗ,ಅಪಸ್ಮಾರ ಇತ್ಯಾದಿಗಳಲ್ಲಿ ಈರುಳ್ಳಿ ರಸವನ್ನು ಮೂಗಿಗೆ ಬಿಟ್ಟರೆ ರೋಗಿಯು ಬೇಗನೆ ಎಚ್ಚರಗೊಳ್ಳು ತ್ತಾರೆ.
  10. ಈರುಳ್ಳಿ ರಸವನ್ನು ಮೂಗಿಗೆ ಬಿಡುವುದರಿಂದ ಮೂಗಿನ ರಕ್ತಸ್ರಾವ ಹಾಗು ಶೀತ ಬಾಧೆಯು ಕಡಿಮೆಯಾಗುತ್ತದೆ.
  11. ಕಾಲಿನ ಹಿಮ್ಮಡಿ ಒಡೆದು ಗಾಯವಾದಾಗ ಈರುಳ್ಳಿಯನ್ನು ತುಂಡುಮಾಡಿ ಹಿಮ್ಮಡಿಗೆ ಉಜ್ಜಬೇಕು ಅಥವಾ ಹಿಮ್ಮಡಿ ಯಲ್ಲಿ ಇಟ್ಟು ಬಟ್ಟೆಯಲ್ಲಿ ಬಿಗಿಯಾಗಿ ಕಟ್ಟಬೇಕು.
  12. ಮುಖದಲ್ಲಿ ಬಂಗು (ವ್ಯಂಗ ) ಕಾಣಿಸಿಕೊಂಡಾಗ ಈರುಳ್ಳಿ ರಸವನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಬೇಕು
  13. ಈರುಳ್ಳಿ ರಸವನ್ನು ತಲೆಗ ಹಚ್ಚುವುದರಿಂದ ತಲೆಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಕೂದಲು ಉತ್ತಮವಾಗಿ ಬೆಳೆಯುತ್ತದೆ.

ಆಭ್ಯಂತರ ಉಪಯೋಗಗಳು ಮುಂದಿನವಾರ ………..

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.