ಅಶ್ಲೀಲವು ಅನಾಚಾರ ಅಧಿಕೃತವಾಗಿ ಸಲೀಸಾಗಿ ನಡೆಯುವ ಇಂದಿನ ಸನ್ನಿವೇಶದಲ್ಲಿ ಯುವಕ, ಯುವತಿಯರು ಬಲಿಯಾದರೆ ಇಹಪರ ಎರಡರಲ್ಲೂ ನಷ್ಟ ಅನುಭವಿಸಲಿಕ್ಕಿದೆ ಎಂದು ಹಾಫಿಲ್ ಅಪ್ಸಲ್ ಖಾಸಿಮಿ ಕೊಲ್ಲಮ್ ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಲೊರೆಟ್ಟೋ ಪದವು ಯುನಿಟ್ ಹಮ್ಮಿಕೊಂಡ ಶಹೀದ್ ಇಕ್ಬಾಲ್ ವೇದಿಕೆ ಯಲ್ಲಿ ಏಕದಿನ ಸಾರ್ವಜನಿಕ ಮತ ಪ್ರಭಾಷನದಲ್ಲಿ ಇಸ್ಲಾಮಿನಲ್ಲಿ ಯುವಕರ ಪಾತ್ರ ಎಂಬ ವಿಷಯದಲ್ಲಿ ಪ್ರವಚನ ನೀಡಿದರು
ಅಶ್ಲೀಲತೆಗೆ ಯುವಕ ಯುವತಿಯರು ಬಲಿಯಾಗದೆ ಸಮಾಜದಲ್ಲಿ ನಮಗೆ ಇರುವ ಜವಾಬ್ದಾರಿಯನ್ನು ಅರಿತು ಜೀವಿಸಬೇಕಾದದ್ದು ಕಾಲದ ಬಹುಮುಖ್ಯ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಅದ್ಯಕ್ಷ ಇಜಾಝ್ ವಹಿಸಿದ್ದರು, ಬದ್ರ್ ಜುಮ್ಮಾ ಮಸೀದಿ ಲೊರೆಟ್ಟೋ ಪದವು ಕತೀಬರಾದ ಕೆ.ಎಮ್ ಅಬ್ದುಲ್ಲಾ ಮುಸ್ಲಿಯಾರ್ ದುವಾ ಮತ್ತು ಉದ್ಘಾಟನೆ ಮಾಡಿದರು. ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಜಾಫರ್ ಸ್ವಾದಿಖ್ ಪೈಝಿ ಈ ಸಂದರ್ಭದಲ್ಲಿ ಮತನಾಡಿದರು.
ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಐ ಬಂಟ್ವಾಳ ವಿದಾನಸಬಾ ಅದ್ಯಕ್ಷರಾದ ಎಸ್.ಎಚ್ ಶಾಹುಲ್ ಹಮೀದ್, ಎಸ್.ಡಿ.ಪಿ.ಐ ಬಂಟ್ವಾಳ ಪುರಸಬಾ ಸಮಿತಿ ಅದ್ಯಕ್ಷರಾದ ಯೂಸುಫ್ ಆಲಡ್ಕ, ಬದ್ರ್ ಜುಮ್ಮಾ ಮಸೀದಿ ಲೊರೆಟ್ಟೋ ಪದವು ಅದ್ಯಕ್ಷರಾದ ಸುಲೈಮಾನ್, ಕಾರ್ಯದರ್ಶಿ ಸಲೀಮ್, ಬಿವೈಎ ಬಾರೆಕಾಡ್ ಲೊರೆಟ್ಟೋ ಪದವು ಅದ್ಯಕ್ಷರಾದ ಅಝೀಝ್, ಗಲ್ಫ್ ಕಮಿಟಿ ಸದಸ್ಯರಾದ ಹುಸೈನಾರ್, ಪಿ.ಎಫ್.ಐ ಗೂಡಿನಬಲಿ ಅದ್ಯಕ್ಷರಾದ ಅಬ್ದುಲ್ ರಹಿಮಾನ್, ಬಂಟ್ವಾಳ ಪುರಸಬಾ ಸದಸ್ಯರಾದ ಇಕ್ಬಾಲ್ ಐ.ಎಮ್.ಆರ್, ಮುನೀಶ್ ಅಲಿ ಬಂಟ್ವಾಳ ಉಪಸ್ಥಿತರಿದ್ದರು.
ಲೊರೆಟ್ಟೋ ಪದವು ಮಸೀದಿಯಲ್ಲಿ 37 ವರ್ಷಗಳಿಂದ ಸೇವೆ ಸಲ್ಲಿಸಿದ ಕೆ.ಎಮ್ ಅಬ್ದುಲ್ಲಾ ಮುಸ್ಲಿಯಾರ್ ರವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಹಾಫಿಲ್ ಇಮ್ರಾನ್ ಸಾಲೆತ್ತೂರು ಕಿರಾಅತ್ ಪಠಿಸಿದರು, ಇಮ್ರಾನ್ ಸ್ವಾಗತಿಸಿ, ಅಬ್ಬಾಸ್ ಮುಸ್ತಫ ದನ್ಯವಾದಗೈದರು ರಹಿಮಾನ್ ಮಠ ನಿರೂಪಿಸಿದರು.