ಬಂಟ್ವಾಳ

ನೂತನ ಅಧ್ಯಕ್ಷರಾಗಿ ಎಸ್.ಕೆ‌ ಸತ್ತಾರ್ ಕಟ್ಟೆ ಆಯ್ಕೆ

ಇಹ್ಸಾನುಲ್ ಮುಸ್ಲಿಮೀನ್ ಯೂತ್ ಫೆಡರೇಶನ್(R) ಕೊಲ್ನಾಡು ಸಾಲೆತ್ತೂರು ಈ ಸಂಘಟನೆಯು ಮರ್ಹೂಂ ಸಾಲೆತ್ತೂರು‌ ಮೊಮ್ಮುಞ್ಞಿ ಉಸ್ತಾದ್ ಸ್ಮರಾಣಾರ್ಥವಾಗಿ 8 ವರ್ಷಗಳ ಮೊದಲು ಸ್ಥಾಪಿಸಿದ ಸಂಘಟನೆಯಾಗಿದೆ. ಇದರ 8ನೇ ವರ್ಷದ ವಾರ್ಷಿಕ ಮಹಾ ಸಭೆಯು ಮಾರ್ಚ್ 31 ರಂದು ನಡೆಯಿತು. ಈ ಸಂಘಟನೆಯು ಅಷ್ಟ ವರ್ಷಗಳಿಂದ ಸಮಾಜದಲ್ಲಿ ಹಿಂದುಳಿದ, ಬಡ ನಿರ್ಗತಿಕ, ಅನಾಥ ಹೆಣ್ಣು ಮಕ್ಕಳ ಮದುವೆಗೆ ಧನ ಸಹಾಯ ಅದೇ ರೀತಿ ಕಟು ಬಡತನದಿಂದ ಕೂಡಿದ ಕಲಿಯಲು ಆಶಕ್ತಿ ಇರುವ ವಿಧ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಬೇಕಾದ ಸಹಾಯ‌ ಸಹಕಾರವನ್ನು ನೀಡುವುದಾಗಿದೆ.
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ಸರ್ವಾನುಮತದಿಂದ  ಮಾಡಲಾಗಿದೆ ಅಧ್ಯಕ್ಷರಾಗಿ ಎಸ್.ಕೆ ಅಬ್ದುಲ್ ಸತ್ತಾರ್ ಕಟ್ಟೆ, ಉಪಾಧ್ಯಕ್ಷರಾಗಿ ಮುಸ್ತಫ ಎಸ್.ಕೆ ಮತ್ತು ಕಾರ್ಯದರ್ಶಿಗಳಾಗಿ ಶಾಹಿದ್ ಹಾಗೂ ಆಶಿಕ್ ಕಟ್ಟೆಯವರನ್ನು ಜೊತೆ ಕಾರ್ಯದರ್ಶಿ, ಸಂಚಾಲಕರಾಗಿ ಝಕರಿಯ್ಯಾ , ಶಮೀಮ್, ಸಪ್ವಾನ್ ಪಿ ಯವರು ಆಯ್ಕೆಯಾದರು. ಇನ್ನು ಅನೇಕ ರೀತಿಯ ಶೈಕ್ಷಣಿಕವಾಗಿ ಅಭಿವೃದ್ದಿಗೆ ಆಧ್ಯತೆ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ