ಬಂಗೇರ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂತು. ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಕಾಂಗ್ರೆಸ್ ಹಂಗಾಮಿ ಜಿಲ್ಲಾಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ ಮಾವೆ, ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ರವೀಂದ್ರ ಕಂಬಳಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ವಿಪಕ್ಷ ಪ್ರಮುಖರಾದ ಎ.ಗೋವಿಂದ ಪ್ರಭು, ದೇವದಾಸ ಶೆಟ್ಟಿ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಉರ್ಬನ್ ಪಿಂಟೊ, ಸಾಮಾಜಿಕ ಕಾರ್ಯಕರ್ತರಾದ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ, ಉದ್ಯಮಿ ಪ್ರಕಾಶ ಕಾರಂತ, ಕಾಂಗ್ರೆಸ್ ಪ್ರಮುಖರಾದ ಶಾಹುಲ್ ಹಮೀದ್, ಯುಸುಫ್ ಕರಂದಾಡಿ, ಮಹಮ್ಮದ್ ನಂದಾವರ, ಕುಮಾರ ಭಟ್, ಚಂದ್ರಶೇಖರ ಪೂಜಾರಿ, ಪ್ರಭಾಕರ ಪ್ರಭು, ಪರಮೇಶ್ವರ ಮೂಲ್ಯ, ಪುರಸಭಾ ಸದಸ್ಯರಾದ ಚಂಚಲಾಕ್ಷಿ, ಯಾಸ್ಮೀನ್, ಸುಗುಣ ಕಿಣಿ, ಮೊನೀಶ್ ಆಲಿ, ವಸಂತಿ ಚಂದಪ್ಪ, ಪ್ರವೀಣ್, ಗಂಗಾಧರ, ಬಂಟ್ವಾಳ ಪರಿಸರದ ನೂರಕ್ಕೂ ಅಧಿಕ ನಾಗರಿಕರು, ಬೆಂಬಲಿಗರು ಆಗಮಿಸಿ ಬಂಗೇರ ಅವರನ್ನು ಅಭಿನಂದಿಸಿದರು.
ಕೋಟಿ ಚೆನ್ನಯರಂತೆ ಕೆಲಸ ಮಾಡುವೆ:
ಈ ಸಂದರ್ಭ ಅಭಿನಂದಿಸಿ ಮಾತನಾಡಿದ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ನಾವಿಬ್ಬರೂ ಹಿಂದಿನಿಂದಲೇ ಒಂದೇ ತಂಡದಲ್ಲಿ ದುಡಿದವರು. ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರು. ಈಗ ಬಂಟ್ವಾಳ ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗಾಗಿ ಕೋಟಿ ಚೆನ್ನಯರಂತೆ ಕೆಲಸ ಮಾಡುವೆವು ಎಂದು ಹೇಳಿದರು.
ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ
ಅಭಿವೃದ್ಧಿ ವಿಚಾರದಲ್ಲಿ ಜನರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸುವುದಾಗಿ ತಿಳಿಸಿದ ಸದಾಶಿವ ಬಂಗೇರ, ಸರಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವೆ ಎಂದರು. ನೀರಿನ ಸಮಸ್ಯೆ ನೀಗಿಸಲು ಕೆರೆ ಅಭಿವೃದ್ಧಿ ಕುರಿತು ಗಮನಹರಿಸುವೆ, ಕೆರೆ ಒತ್ತುವರಿ ಕುರಿತು ಕ್ರಮ ಕೈಗೊಳ್ಳಲಾಗುವುದು, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅವರೊಂದಿಗೆ ಜತೆಯಾಗಿ ದುಡಿಯುವೆ ಎಂದು ಸದಾಶಿವ ಬಂಗೇರ ಈ ಸಂದರ್ಭ ಹೇಳಿದರು.