ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ಆಶ್ರಯದಲ್ಲಿ ಸಜೀಪಮುನ್ನೂರು ಗ್ರಾ.ಪಂ. ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಚ ಮಂದಿರ ಅಭಿಯಾನ ನಡೆಯಿತು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ ನಮ್ಮ ಮನೆಯಿಂದಲೇ ಸ್ವಚ್ಚತಾ ಚಿಂತನೆಗಳ ಮೂಡಿಬರಬೇಕು. ಅದರ ಫಲ ನಾಡಿಗೆ ಸಿಗಬೇಕು. ನಾವು ನಮ್ಮ ಮನೆ, ವಠಾರ, ಕೇರಿಯನ್ನು ಸ್ವಚ್ಚ ಮಾಡಿದಾಗ ನಮ್ಮ ಆರೋಗ್ಯವೇ ಸುಧಾರಿಸುವುದು.
ನಮ್ಮ ಮನಸ್ಸು ಶುದ್ಧವಾಗಬೇಕು. ಪರಿಸರ ನೈರ್ಮಲ್ಯ ನಿರಂತರ ನಡೆಯಬೇಕು. ನಂದಾವರ ಕ್ಷೇತ್ರವು ಒಂದು ಸೌಹಾರ್ಧತೆಯ ಕೇಂದ್ರ, ಇಲ್ಲಿ ಐತಿಹಾಸಿಕ ಶ್ರೀಕ್ಷೇತ್ರ ನಂದಾವರ, ಪುರಾತನ ಶ್ರೀ ಹನುಮಂತ ದೇವಸ್ಥಾನ, ಮಸೀದಿ ಇದ್ದು ಇಲ್ಲಿನ ವಾತಾವರಣ ಸೌಹಾರ್ಧತೆಗೆ ಸಾಕ್ಷಿಯಾಗಿದೆ ಎಂದರು. ಈ ಬೆಸುಗೆ ಇನ್ನಷ್ಟು ಉಳಿದು ಬೆಳೆದು ಬರಬೇಕು ಎಂದು ಕರೆ ನೀಡಿದರು.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖಾ ಸೂಚನೆಯಂತೆ ಧಾರ್ಮಿಕ ಕ್ಷೇತ್ರದ ಪರಿಸರದಲ್ಲಿ ಸ್ವಚ್ಚ ಮಂದಿರ ಅಭಿಯಾನವನ್ನು ಹಮ್ಮಿಕೊಂಡಿದ್ದು ಸಮುದಾಯದ ಸಹಕಾರದಲ್ಲಿ ಇದನ್ನು ಅನುಷ್ಠಾನಿಸಲಾಗುವುದು.
ಇಂತಹ ಕಾರ್ಯಕ್ರಮದ ಮೂಲಕ ಸಾಮಾಜಿಕ ಸ್ಪಂದನವನ್ನು ಬಯಸುತ್ತಿದ್ದೇವೆ. ನಾವು ಪರಸ್ಪರ ಹೊಂದಾಣಿಕೆಯಿಂದ ಸ್ವಚ್ಚತೆಯ ಅರಿವು ಮೂಡಿಸಿಕೊಂಡು ನಮ್ಮ ಪರಿಸರದ ನೈರ್ಮಲ್ಯ ಕಾಪಾಡಿಕೊಂಡರೆ ತೀರಾ ಚಿಕ್ಕ ಸೇವೆಯಿಂದ ದೊಡ್ಡ ಸಾಧನೆ ಸಾಧ್ಯವಾಗುವುದು ಎಂದರು.
ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯೆ ನಸೀಮ ಬೇಗಂ, ಸಜೀಪಮುನ್ನೂರು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಶರೀಫ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೇಲ್ವಿಚಾರಕ ಚಂದ್ರಶೇಖರ, ಇಲ್ಲಿನ ಶಾಲಾ ಮುಖ್ಯ ಶಿಕ್ಷಕ ಉದಯ ಕುಮಾರ್,ಗೇರು ಅಭಿವೃದ್ದಿ ನಿಗಮ ಸದಸ್ಯ ಎಂ. ಪರಮೇಶ್ವರ, ಯುವ ಕಾಂಗ್ರೆಸ್ ಅಧಕ್ಷ ಪ್ರಶಾಂತ್ ಕುಲಾಲ್, ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಸ್ಥಳೀಯ ಸಂಘ ಸಂಸ್ಥೆಗಳ ಪದಾಽಕಾರಿಗಳು ಪಾಲ್ಗೊಂಡಿದ್ದರು.
ಕ್ಷೇತ್ರದ ವ್ಯವಸ್ಥಾಪನಾ ಸದಸ್ಯರಾದ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ಗಂಗಾಧರ ಭಟ್ ಕೊಳಕೆ, ಗೋಪಾಲಕೃಷ್ಣ ಆಚಾರ್ಯ ಮಾರ್ನಬೈಲು , ಕೆ. ಮೋಹನದಾಸ ಪೂಜಾರಿ ಬೊಳ್ಳಾಯಿ, ರಮಾ ಎಸ್. ಭಂಡಾರಿ ಸಜೀಪಪಡು, ಪ್ರೇಮ ಸಜೀಪನಡು, ಅಣ್ಣು ನಾಯ್ಕ ಬೊಳ್ಳಾಯಿ ಸಹಿತ ಇತರ ಪ್ರಮುಖರು ಜೊತೆಗಿದ್ದು ಸ್ವಚ್ಚತಾ ಅಭಿಯಾನವನ್ನು ಯಶಸ್ವಿಗೊಳಿಸಿದರು.