ಕವರ್ ಸ್ಟೋರಿ

ಧೂಳು ಮೆತ್ತಿದ ಜಾಗದಲ್ಲೆಲ್ಲ ವರ್ಲಿ ಚಿತ್ತಾರ

ಸರಕಾರಿ ಕಚೇರಿಗಳ ಸ್ವರೂಪವೇ ಇಲ್ಲಿ ಬದಲಾಗಿದೆ. ಬಂಟ್ವಾಳ ಬಿಇಒ ಕಚೇರಿ ತನ್ನ ಅಚ್ಚುಕಟ್ಟುತನದಿಂದ ಗಮನ ಸೆಳೆಯುತ್ತಿದ್ದರೆ, ಬಿಆರ್ ಸಿ ವರ್ಲಿ ಚಿತ್ತಾರದಿಂದ ಕಲಾ ಗ್ಯಾಲರಿಯೋಪಾದಿಯಲ್ಲಿ ಮೈತಳೆದಿದೆ.

ಜಾಹೀರಾತು

ಹೊಸತನದ ಕಲ್ಪನೆಗಳು ಮನುಷ್ಯನಿಗೆ ಸಹಜ. ಸರಕಾರಿ ಕಚೇರಿಗಳೂ ಇಂದು ಹೊಸ ಬಗೆಯ ಆಲೋಚನೆಗಳಿಗೆ ತೆರೆದುಕೊಳ್ಳುತ್ತಿವೆ. ಬಂಟ್ವಾಳದ ಶಿಕ್ಷಣಾಧಿಕಾರಿಗಳ ಕಚೇರಿಯೂ ಆಕರ್ಷಕವಾಗಿ ಕಂಡುಬಂದರೆ, ಬಿಆರ್ ಸಿ ತುಂಬೆಲ್ಲ ವರ್ಲಿ ಚಿತ್ತಾರ.

ತಾರಾನಾಥ ಕೈರಂಗಳ ಮಾರ್ಗದರ್ಶನದಲ್ಲಿ ಮುಖೇಶ್, ಸುಂದರ್, ಧನಂಜಯ್, ಉಮೇಶ್, ಪದ್ಮನಾಭ, ರಂಜಿತ್, ಬಾಲಕೃಷ್ಣ ಶೆಟ್ಟಿ, ಅನುಷಾ ಗಟ್ಟಿ, ಸೂರ್ಯಕಾಂತ್, ಕಮಲಾಕ್ಷ ಸುಳ್ಯ ಹೀಗೆ ಹಲವು ಶಿಕ್ಷಕರ ಪರಿಶ್ರಮ ಇದರ ಹಿಂದೆ ಅಡಗಿದೆ. ಇದರ ಮಾಸ್ಟರ್ ಮೈಂಡ್ ಇಲ್ಲಿನ ಸಮನ್ವಯಾಧಿಕಾರಿ ರಾಜೇಶ್.

ಜಾಹೀರಾತು

ಬಂಟ್ವಾಳ ತಾಲೂಕಿನ ಈ ಕೇಂದ್ರ ಬಿ.ಸಿ.ರೋಡಿನಿಂದ ಸುಮಾರು ಮುಕ್ಕಾಲು ಕಿ.ಮೀ. ದೂರದ ಗೂಡಿನಬಳಿ ಸನಿಹದಲ್ಲಿದೆ ಈ ಕಚೇರಿ. 2001ರಲ್ಲಿ ಈ ಕಟ್ಟಡ ನಿರ್ಮಾಣಗೊಂಡಿತ್ತು. 2016ರಲ್ಲಿ ಇಲ್ಲಿ ವರ್ಲಿ ಪೈಂಟ್ ಕಳೆಗಟ್ಟಿತು. ಇದೆಲ್ಲವೂ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದು ಇಲ್ಲಿಯ ಸಿಬ್ಬಂದಿ, ಹಾಗೂ ಶಿಕ್ಷಕರು ಎನ್ನುತ್ತಾರೆ ರಾಜೇಶ್. ಗೇಟಿನಲ್ಲೇ ಸಂದೇಶಭರಿತ ಚಿತ್ರಗಳು. ಎಡಭಾಗದಲ್ಲಿ ಶಿಲ್ಪಗಳು ನಿಮ್ಮನ್ನು ಸ್ವಾಗತಿಸಿರೆ, ದಾರಿಯ ಬಲಭಾಗದ ಕಂಪೌಂಡ್ ನಲ್ಲಿ ರಥೋತ್ಸವಗಳು, ಆಟಿ ಕಳಂಜ, ಕಂಗೀಲು ನೃತ್ಯ, ಭೂತದ ಕೋಲ, ಕಂಬಳ, ಕೋಳಿಗಟ್ಟ, ಯಕ್ಷಗಾನ, ಬೇಸಾಯ, ಮೀನುಗಾರರ ಬದುಕು, ಪ್ರಾಣಿ, ಪಕ್ಷಿಗಳು, ಪೂಜಾ ಕುಣಿತ, ಡೊಳ್ಳು ಕುಣಿತ ಮೊದಲಾದವು ಮೂಡಿಬಂದದನ್ನು ಕಾಣಬಹುದು. ಕಚೇರಿ ಒಳಗೂ ಅಷ್ಟೇ. ಶಿಕ್ಷಣ ಇಲಾಖೆಯ ವಿವಿಧ ಯೋಜನೆಗಳಾದ ಕ್ಷೀರಭಾಗ್ಯ, ಸಮವಸ್ತ್ರ, ಕಂಪ್ಯೂಟರ್ ಶಿಕ್ಷಣ, ಹೆಣ್ಣುಮಕ್ಕಳ ಶಿಕ್ಷಣ ಹೀಗೆ ಕಾರ್ಯಕ್ರಮಗಳ ವಿವರ ಬಿಂಬಿಸುವ ಚಿತ್ರಗಳಿವೆ. ಸಭಾಗೃಹದಲ್ಲಿ ಅಲಂಕಾರಿಕ ಚಿತ್ರಗಳು ಕಣ್ಮನ ಸೆಳೆಯುತ್ತವೆ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.