ಬಿ.ಸಿ.ರೋಡ್ ಪೇಟೆಯಲ್ಲೇ ಈಗ ಅಗೆತದ ಕಾರುಬಾರು. ಎಲ್ಲ ಕೆಲಸವೂ ಜರೂರತ್ತಿನದ್ದೇ. ಒಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಾಧಿಕಾರದ್ದಾದರೆ ಮತ್ತೊಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯದ್ದು. ಏಪ್ರಿಲ್ ಮೊದಲವಾರದವರೆಗೆ ಕೆಲಸವಿದೆ ಎನ್ನುತ್ತಾರೆ ಅಧಿಕಾರಿಗಳು ಅಲ್ಲಿಯವರೆಗೆ…
www.bantwalnews.com
ಬಂಟ್ವಾಳನ್ಯೂಸ್ ಓದುಗರಿಗೆ ಈ ಸುದ್ದಿ ಹಳತಾಗಿರಬಹುದು. ಹೊಸತಾಗಿ ಓದುವವರಿಗೆ ಕಿರು ಮಾಹಿತಿ: ಕಳೆದ ಒಂದು ತಿಂಗಳಿಂದ ಬಿ.ಸಿ.ರೋಡಿನಲ್ಲಿ ಭರದಿಂದ ಕಾಮಗಾರಿ ನಡೆಯುತ್ತಿದೆ. ಇಡೀ ಬಂಟ್ವಾಳ ಪೇಟೆಯಲ್ಲೇ ನಡೆಯುತ್ತಿರುವ ಕಾಮಗಾರಿ ಈಗ ಬಿ.ಸಿ.ರೋಡಿಗೆ ಬಂದು ತಲುಪಿದೆ. ಅದ್ಯಾವುದು ಎಂದು ಕೇಳಿದಿರಾ? ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಇಡೀ ಬಂಟ್ವಾಳ ಪುರಸಭೆ ವ್ಯಾಪ್ತಿಗೆ ನೀರುಣಿಸಲು ನಡೆಸುತ್ತಿರುವ ಪೈಪ್ ಅಳವಡಿಕೆ ಕೆಲಸ. ಸದ್ಯ ಬಿ.ಸಿ.ರೋಡಿನಲ್ಲಿ ನೆಲ ಅಗೆದು ಪೈಪ್ ಅಳವಡಿಸುವ ಕಾರ್ಯ. ಹೀಗಾಗಿ ಧೂಳೆದ್ದಿದೆ. ಪೇಟೆ ಹೃದಯ ಭಾಗದಲ್ಲೇ ನಡೆಯುತ್ತಿದೆ ಆಪರೇಶನ್.
ಇನ್ನೊಂದು ಕೆಲಸ ಎನ್.ಎಚ್.ಎ.ಐನವರದ್ದು. ಸರ್ವೀಸ್ ರಸ್ತೆಯ ಬದಿಯಲ್ಲೇ ಚರಂಡಿ ಮಾಡುತ್ತಿದ್ದಾರೆ. ಅದನ್ನು ಕಾಂಕ್ರೀಟ್ ನಲ್ಲಿ ಮಾಡಿ ಮುಚ್ಚುತ್ತಾರೆ ಎನ್ನುತ್ತಾರೆ ಇಂಜಿನಿಯರ್. ಈಗ ಭಾರತ್ ಸ್ಟೋರ್, ಪದ್ಮಾ ಕಾಂಪ್ಲೆಕ್ಸ್ ಬಳಿ ಕೆಲಸ ನಡೀತಿದೆ. ಒಂದೆರಡು ದಿನಗಳಲ್ಲಿ ತಾಪಂ ಹಳೇ ಕಟ್ಟಡದ ಎದುರು , ಈಗ ಮಂಗಳೂರಿಗೆ ತೆರಳುವ ಬಸ್ಸುಗಳು ನಿಲ್ಲುವ ಜಾಗದ ಹತ್ತಿರ ಕೆಲಸ ನಡೆಯಲಿದೆ. ಅದೇ ಹೊತ್ತಿಗೆ ಒಳಚರಂಡಿ ಇಲಾಖೆಯವರು ಇನ್ನೊಂದು ಬದಿಯಲ್ಲಿ ಪೈಪಿಗಾಗಿ ಅಗೆಯುತ್ತಾರೆ. ಅಲ್ಲಿಗೆ ಸರ್ವೀಸ್ ರಸ್ತೆ ಸರ್ವೀಸ್ ಸದ್ಯಕ್ಕಂತೂ ಇಲ್ಲ.
ಸುಮಾರು ಏಪ್ರಿಲ್ ಮೊದಲವಾರದವರೆಗೆ ಕೆಲಸ ಇದೆ ಎನ್ನುತ್ತಾರೆ ಅಧಿಕಾರಿಗಳು ಅಲ್ಲಿಯವರೆಗೆ ಟ್ರಾಫಿಕ್ ದಟ್ಟಣೆ ಅನುಭವಿಸಬೇಕು.
ಬಿ.ಸಿ.ರೋಡ್ ನಲ್ಲಿ ಈಗೇನು ನಡೆಯುತ್ತಿದೆ ಎಂಬುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕ ಕಿಶೋರ್ ಪೆರಾಜೆ. ಅವರು ಕ್ಲಿಕ್ಕಿಸಿದ ಚಿತ್ರ ನೋಡಿದರೆ ಕೆಲಸ ಹೇಗಿದೆ ಎಂಬುದನ್ನು ತಿಳಿಯಬಹುದು…