ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ ಅಂಗಾಂಗ ದಾನದ ಬಗ್ಗೆ ಮಾಹಿತಿ ಮತ್ತು ನೇತ್ರ ದಾನದ ಬಗ್ಗೆ ಹೆಸರು ನೊಂದಾವಣೆ ಕಾರ್ಯಕ್ರಮ ಮಾರ್ಚ್ 19ರ ಭಾನುವಾರ ವಿಟ್ಲದ ಸರ್ಕಾರಿ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ದಲಿತ್ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಯು ವಿಟ್ಲ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಲೇ 10 ಮಂದಿ ನೇತ್ರಾದಾನ ಮಾಡಲು ಮುಂದೆ ಬಂದಿದ್ದಾರೆ. ನೇತ್ರದಾನ ಮಾಡಲು ಸಾರ್ವಜನಿಕರಿಗೂ ಹೆಸರು ನೊಂದಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮವನ್ನು ವಿಟ್ಲ ಎಸೈ ನಾಗರಾಜ್ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್‌ನ ಡಾ. ಗೀತಾಪ್ರಕಾಶ್ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಪಡುಬೆಟ್ಟು ಶ್ರೀ ಆದಿನಾಗಬ್ರಹ್ಮ ಗಡಿಯಾಡಿ ಮೊಗೇರ್ಕಳ ಸೇವಾ ಟ್ರಸ್ಟ್‌ನ ಅಧ್ಯಕ್ಷ ರವೀಂದ್ರ ಪಡಬೆಟ್ಟು, ಬಂಟ್ವಾಳ ನಲಿಕೆಯವರ ಸಮಾಜ ಸೇವಾ ಸಂಘದ ಮಹಿಳಾ ಅಧ್ಯಕ್ಷೆ ಚಿನ್ನಮ್ಮ, ಬಂಟ್ವಾಳ ದಲಿತ್ ಸೇವಾ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಾವತಿ ಎಮ್ ಮಾಣಿಲ, ಬಂಟ್ವಾಳ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೋಪಾಲ ನೇರಳಕಟ್ಟೆ, ಮೋಹನದಾಸ ಯು, ಸೋಮಪ್ಪ ಸುರುಳಿಮೂಲೆ, ಸುಪ್ರೀತ ಪಿಲಿಂಜ ಉಪಸ್ಥಿತರಿದ್ದರು.